Advertisement
ಈಗಾಗಲೇ ದೇವಸ್ಥಾನ, ಬೀಡು, ರಸ್ತೆಗಳು, ವಸತಿಗೃಹ ಸಹಿತ ರಸ್ತೆಗಳು, ಸುತ್ತಮುತ್ತಲಿನ ಕಟ್ಟಡಗಳು ವಿದ್ಯುದ್ದೀಪಗಳಿಂದ ಅಲಂಕಾರಗೊಂಡು, ಸಾಲು ಸಾಲು ವಿಭಿನ್ನ ಮಳಿಗೆಗಳಿಂದ ಜನಾಕರ್ಷಣೆ ಪಡೆದಿದೆ.ನೇತ್ರಾವತಿ ಸ್ನಾನಘಟ್ಟದಿಂದ ಮುಖ್ಯ ದ್ವಾರದವರೆಗೆ ವಿದ್ಯುದ್ದೀಪಗಳು, ರಸ್ತೆ ಕೆರೆಗಳಲ್ಲಿ ಆಲಂಕಾರಿಕ ವಸ್ತುಗಳನ್ನು ಜೋಡಿಸಲಾಗಿದೆ. ಮುಖ್ಯದ್ವಾರ ಸಹಿತ ದೇವಸ್ಥಾನದ ಸಮೀಪದವರೆಗೂ ಸಾಲು ಸಾಲು ವಿವಿಧ ಬಗೆಯ ತಿಂಡಿ-ತಿನಿಸು, ಬಟ್ಟೆಬರೆಗಳು, ಕಾಫಿ – ಟೀ ಸ್ಟಾಲ್ ಮಳಿಗೆ ಗಳು ಭಕ್ತರನ್ನು ಸೆಳೆಯುವಂತಿದೆ.
Related Articles
ರಾಜ್ಯಮಟ್ಟದ 42ನೇ ವಸ್ತುಪ್ರದರ್ಶನದಲ್ಲಿ ಜ್ಞಾನ-ವಿಜ್ಞಾನ ಸಮ್ಮಿಳಿತದ 197 ವಿವಿಧ ಪ್ರಕಾರದ ಮಳಿಗೆಗಳು ಆಕರ್ಷಿಸಲಿವೆ. ಸರಕಾರಿ ಮಳಿಗೆಗಳು, ಎಲೆಕ್ಟ್ರಾನಿಕ್ ವಸ್ತುಗಳು, ಪುಸ್ತಕ ಮಳಿಗೆ, ಸಿರಿ ಉತ್ಪನ್ನಗಳು, ತರಕಾರಿ ಬೀಜಗಳು, ರುಡ್ಸೆಟ್ ಮಳಿಗೆ, ಎಸ್‌ಕೆಡಿಆರ್ ಡಿಪಿ ಮಳಿಗೆ, ಕೃಷಿ ಉಪಕರಣಗಳು, ನಾಟಿ ಔಷಧ, ಕರಕುಶಲ ವಸ್ತು, ಗೋಬರ್ ಗ್ಯಾಸ್, ವಸ್ತ್ರ ಮಳಿಗೆಗಳು, ವಾಹನ ಮಳಿಗೆ, ನೀರು ಶುದ್ಧೀಕರಣ ಸಹಿತ ವಿವಿಧ ಬಗೆಯ ಮಳಿಗೆಗಳು ಸಿದ್ಧಗೊಂಡಿವೆ.
Advertisement
ಸರ್ವಸಿದ್ಧತೆಲಕ್ಷದೀಪೋತ್ಸವ ಸಂದರ್ಭ ಬರುವ ಭಕ್ತರಿಗೆ ಊಟದ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇತ್ಯಾದಿಗಳ ಸಿದ್ಧತೆ ಪೂರ್ಣಗೊಳಿಸಲಾಗಿದೆ. ಸ್ವತ್ಛತಾ ಸೇನಾನಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಭಕ್ತರಿಗೆ ಯಾವುದೇ ಕೊರತೆ ಬಾರದ
ರೀತಿಯಲ್ಲಿ ಸಿದ್ಧಗೊಳಿಸಲಾಗಿದೆ.
– ಹರ್ಷೇಂದ್ರ ಕುಮಾರ್, ಶ್ರೀಕ್ಷೇತ್ರ ಧರ್ಮಸ್ಥಳದ ಆಡಳಿತ ಮೇಲುಸ್ತುವಾರಿ