Advertisement
ಪ್ರತಿನಿತ್ಯ ಐದು ದಿವಸದ ವಿವಿಧ ಉತ್ಸವ ಗಳಿಂದ ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜಾ ವಿಧಿವಿಧಾನ ಹಮ್ಮಿಕೊಳ್ಳ ಲಾಗುತ್ತಿದ್ದು, ರಾತ್ರಿ ಉತ್ಸವಾದಿಗಳಿಗೂ ಮುನ್ನ ಜರಗುವ ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ ರಸಸಂಜೆಯಲಿ ಕ್ಷೇತ್ರ ತೇಲುವಂತಿದೆ.ಉಜಿರೆಯ ಎಸ್.ಡಿ.ಎಂ. ಕಾಲೇಜಿನ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶನಿವಾರ ವಿವಿಧ ಬಗೆಯ ಕಲಾಪ್ರದರ್ಶನ ನೀಡಿದರು. ಕಥಕ್, ಮೋಹಿನಿಯಾಟ್ಟಂ, ಭರತನಾಟ್ಯ, ದಾಂಡಿಯಾ, ಯಕ್ಷಗಾನ, ತೆಯ್ಯಂ, ರಷ್ಯಾದ ಕಲಿಂಕ, ಸ್ಪೆŒ„ನ್‌ನ ಫÉಮಂಕೊ, ಇಂಡೊನೇಷ್ಯದ ಬಾಲಿ ಮುಂತಾದ ನೃತ್ಯಪ್ರಕಾರಗಳು ನೆರೆದವರ ಮನಸೂರೆಗೊಂಡವು. ಇಪ್ಪತ್ತು ನಿಮಿಷಗಳ ಅವಧಿಯಲ್ಲಿ ಸಂಪೂರ್ಣ ರಾಮಾಯಣ ತೆರೆದಿಡುವ ಮೂಲಕ ಶ್ರೀರಾಮಾಯಣ ದರ್ಶನಂ ವಿಶೇಷ ಆಕರ್ಷಣೆಯಾಗಿತ್ತು.
ಜಾನಪದ ಮತ್ತು ರಂಗಗೀತೆಗಳ ರಸದೌತಣಕ್ಕೆ ಅಮೃತವರ್ಷಿಣಿ ಸಭಾಭವನ ಸಾಕ್ಷಿಯಾಯಿತು. ಲಕ್ಷದೀಪೋತ್ಸವದ ಮೂರನೇ ದಿನವಾದ ರವಿವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರಯುಕ್ತ ಬೆಂಗಳೂರಿನ ಅನನ್ಯಾ ಭಟ್ ಮತ್ತು ತಂಡದವರಿಂದ ಸಂಗೀತ ಮೇಳ ನಡೆಯಿತು. ಜಾನಪದ ಗೀತೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಅದಕ್ಕೆ ಬ್ಯಾಂಡ್ ಸ್ವರೂಪ ನೀಡಿ ಜನರ ಮುಂದೆ ಪ್ರಸ್ತುತ ಪಡಿಸಿದ ಹಾಡುಗಳಿಗೆ ಭಕ್ತಸಮೂಹ ತಲೆದೂಗಿತು. ಮಾದೇವ ಸ್ವಾಮಿಯ ಕುರಿತಾದ “ಸೋಜುಗಾದ ಸೂಜು ಮಲ್ಲಿಗೆ’, ಸೋಲಿಗರ ನಾರಾಯಣ ಕುರಿತಾದ ಗೀತೆ, ಬಿ.ವಿ. ಕಾರಂತರ “ಗೋವಿಂದ ಮುರಹರ ಗೋವಿಂದ’ ಸಹಿತ ಹಲವಾರು ಗೀತೆಗಳಿಂದ ಜನರನ್ನು ರಂಜಿಸಿದರು. ಭರತ್, ವಿಶಾಲ್ ನೈರುಧ್ಯ, ಗಿರೀಶ್, ವಿಶಾಲ್ ಆತ್ರೇಯ ಮೊದಲಾದವರು ಸಹಕರಿಸಿದರು.
Related Articles
ಬೆಳ್ತಂಗಡಿ: ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವದ ಪ್ರಯುಕ್ತ ಭಕ್ತಾದಿಗಳು ಹೂವಿನ ಅಲಂಕಾರ ಸೇವೆ ಸಲ್ಲಿಸಿದ್ದಾರೆ.
Advertisement
ವಿಶೇಷವಾಗಿ ಹೂವಿನ ಅಲಂಕಾರ ಕಣ್ಮನ ಸೆಳೆಯಿತು. ಬೆಂಗಳೂರಿನ ಹದಿನೈದಕ್ಕೂ ಹೆಚ್ಚು ತಂಡಗಳ ಸುಮಾರು ಇನ್ನೂರು ಜನರು ಸೇವೆ ಸಲ್ಲಿಸಿದ್ದಾರೆ. ಸಾಮಾನ್ಯ ಹೂಗಳ ಜೊತೆಗೆ ಅಪರೂಪದ ಪುಷ್ಪಗಳಾದ ಕಾರ್ನೆàಶನ್, ಲಿಲ್ಲಿ, ಆರ್ಕಿಡ್, ಅಂಥೋರಿಯಂ, ತಾಜ್‌ಮಹಲ್ ಗುಲಾಬಿ, ಗ್ರಾಂಡ್ ಕಾಲ ಗುಲಾಬಿ, ಮುಂತಾದ 40 ಬಗೆಯ ಹೂಗಳು ಅಲಂಕಾರ ದಲ್ಲಿ ಮಿಂಚಿವೆ. ಜತೆಗೆ ಅನನಾಸು, ಸೇಬು ಹಣ್ಣುಗಳೂ ಅಲಂಕಾರದಲ್ಲಿವೆ.
ಹೂವಿನ ವರ್ತಕರು ಮತ್ತು ಕೆಲಸಗಾರ ಭಕ್ತರು ಸ್ವ ಇಚ್ಛೆಯಿಂದ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಸುಮಾರು 15 ವರ್ಷದಿಂದಲೂ ಭಕ್ತರು ಈ ಸೇವೆ ಮಾಡುತ್ತಿದ್ದಾರೆ.ಧರ್ಮಸ್ಥಳ ದೇವಾಲಯದ ಪ್ರವೇಶ ದ್ವಾರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಎಂಬ ಫಲಕ ಭಕ್ತರನ್ನು ಆಕರ್ಷಿಸುತ್ತಿದೆ.
ಭಕ್ತಿಯ ಸೇವೆಈ ವರ್ಷ ಮೂರು ದಿನಗಳ ವಿಶೇಷ ತಯಾರಿ ಮಾಡಿಕೊಂಡು ಧರ್ಮಸ್ಥಳಕ್ಕೆ ಬಂದಿದ್ದೇವೆ. ಪೂರ್ತಿ ಒಂದು ದಿನದ ಅವಧಿಯ ಕೆಲಸ ಇಲ್ಲಿ ಮಾಡುತ್ತೇವೆ. ಮಂಜುನಾಥನ ಭಕ್ತಿಯ ಸೇವೆಯೇ ನಮಗೆ ಪ್ರಸಾದ.
– ಶ್ರೀ ಸಾಯಿ ಫ್ಲವರ್ ಡೆಕೋರೇಟರ್ಸ್ ಬೆಂಗಳೂರು ಫೋಟೋ: ಶಿವಪ್ರಸಾದ್ ಹುಳುವಳ್ಳಿ , ಗಣಪತಿ ದಿವಾಣ (ಯು.ಎಸ್.ಜೆ.ಪಿ. ವಿದ್ಯಾರ್ಥಿಗಳು.)