Advertisement
ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಗಳೊಂದಿಗೆ ಲಕ್ಷದೀಪೋತ್ಸವದ ಪೂಜಾ ವಿಧಿವಿಧಾನಗಳಿಗೆ ಚಾಲನೆ ನೀಡಲಾಯಿತು.
ದೇವಾಲಯದಿಂದ ಉತ್ಸವಮೂರ್ತಿಯನ್ನು ವಾದ್ಯಘೋಷಗಳೊಂದಿಗೆ ಮೆರವಣಿಗೆಯಲ್ಲಿ ವಸಂತ ಮಹಲಿನ ಹೊಸಕಟ್ಟೆಯಲ್ಲಿ ವಿರಾಜಮಾನಗೊಳಿಸಲಾಯಿತು. ಅಲ್ಲಿ ದೇವರಿಗೆ ಪುರೋಹಿತರಿಂದ ಚತುರ್ವೇದಗಳ ಪಠಣ, ಸಂಗೀತ ಸಹಿತ ಅಷ್ಟಾವಧಾನ ಸೇವೆಗಳ ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ದೇವಾಲಯದ ಆನೆಗಳಾದ ಲಕ್ಷ್ಮಿ ಮತ್ತು ಶಿವಾನಿ ಮತ್ತು ಬಸವ ಹೆಜ್ಜೆ ಹಾಕಿದವು.
Related Articles
Advertisement
ಉತ್ಸವಮೂರ್ತಿಯನ್ನು ದೇವಾಲಯದ ಒಳಗೆ ಕೊಂಡೊಯ್ಯುವಲ್ಲಿಗೆ ಹೊಸಕಟ್ಟೆ ಉತ್ಸವ ಸಂಪನ್ನವಾಯಿತು.
ನ.27: ಕೆರೆ ಕಟ್ಟೆ ಉತ್ಸವ ಸಂಪನ್ನನ.27ರಂದು ಕ್ಷೇತ್ರದಲ್ಲಿ ರಾತ್ರಿ ದೇವರಿಗೆ ಕೆರೆ ಕಟ್ಟೆ ಉತ್ಸವ ಸಂಪನ್ನಗೊಂಡಿತು. ವಸ್ತುಪ್ರದರ್ಶನ ವೇದಿಕೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ, ಲಯಲಹರಿ ಸಂಗೀತ ಮೇಳ, ರಾಮಪ್ರಿಯ ತುಲಸೀದಾಸ ನೃತ್ಯರೂಪಕ, ಯಕ್ಷಗಾನ-ಹಿಡಿಂಬಾ ವಿವಾಹ-ಬಕಾಸುರ ವಧೆಗೆ ಸಾಕ್ಷಿಯಾಯಿತು. ನ.28: ಲಲಿತಕಲಾ ಗೋಷ್ಠಿ
ನ.28ರಂದು ಅಮೃತವರ್ಷಿಣಿ ವೇದಿಕೆಯಲ್ಲಿ ಸಂಜೆ ಗಂಟೆ 5.30ರಿಂದ ಲಲಿತಕಲಾ ಗೋಷ್ಠಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಗಸ್ವರ ವಾದನ, ಸಾತ್ವಿಕ ಸಂಗೀತ, ನೃತ್ಯಾರ್ಚನೆ ಮತ್ತು ಮಾಯಾವಿಲಾಸ ನೃತ್ಯರೂಪಕ ನೆರವೇರಲಿದೆ. ವಸ್ತುಪ್ರದರ್ಶನ ವೇದಿಕೆಯಲ್ಲಿ ಗಾನಸಂಭ್ರಮ, ಭರತನಾಟ್ಯ ಮತ್ತು ಕೂಚಿಪುಡಿ, ನೃತ್ಯರೂಪಕ, ಯಕ್ಷಗಾನ ತಾಳಮದ್ದಳೆ ನೆರವೇರಲಿದೆ. ನ.29: ಗೃಹಸಚಿವರಿಂದ ಸರ್ವಧರ್ಮ ಸಮ್ಮೇಳನ ಉದ್ಘಾಟನೆ
ನ.29ರಂದು ಸಂಜೆ 5 ಗಂಟೆಗೆ ಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನವನ್ನು ಗೃಹ ಸಚಿವ ಡಾ| ಜಿ.ಪರಮೇಶ್ವರ ಉದ್ಘಾಟಿಸುವರು. ಬೆಂಗಳೂರಿನ ಕೈಲಾಸ ಆಶ್ರಮದ ಜಯೇಂದ್ರಪುರಿ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ಡಾ| ಜಿ.ಬಿ. ಹರೀಶ್, ಡಾ| ಜೋಸೆಫ್, ಎನ್.ಎಂ. ಮತ್ತು ಬಿಜಾಪುರದ ಮೆಹತಾಬ ಇಬ್ರಾಹಿಂ ಸಾಬ ಕಾಗವಾಡ ಧಾರ್ಮಿಕ ಉಪನ್ಯಾಸ ನೀಡುವರು.