Advertisement

Dharmasthala: ಪುಸ್ತಕದಿಂದ ಜ್ಞಾನ ವೃದ್ಧಿ , ಮಸ್ತಕ ವಿಕಸನ: ಹುಕ್ಕೇರಿ ಶ್ರೀ

01:29 AM Aug 11, 2024 | Team Udayavani |

ಬೆಳ್ತಂಗಡಿ: ಸಾಧನೆ ಸಾಧಕರ ಸೊತ್ತು ಹೊರತು ಸೋಮಾರಿ ಗಳದ್ದಲ್ಲ. ವಿದ್ಯಾರ್ಥಿ ಜೀವನ ಮೌಲ್ಯ ಯುತವಾದುದು. ಡಿಜಿಟಲ್‌ ವ್ಯವಸ್ಥೆಯಡಿ ಇರುವ ಮಕ್ಕಳಿಗೆ ವ್ಯಕ್ತಿತ್ವ ವಿಕ ಸನಗೊಳಿಸುವಲ್ಲಿ ಸರಕಾರ ಮಾಡಬೇಕಾದ ಕೆಲಸವನ್ನು ಧರ್ಮಸ್ಥಳದ ವತಿಯಿಂದ ಡಾ| ಹೆಗ್ಗಡೆ ಮಾಡುತ್ತಿದ್ದಾರೆ ಎಂದು ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮೀಜಿ ನುಡಿದರು.

Advertisement

ಧರ್ಮಸ್ಥಳ ಮಹೋತ್ಸವ ಸಭಾ ಭವನದಲ್ಲಿ ಆ.10ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್‌ನಿಂದ ಪ್ರಕಟಿಸಿದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಜ್ಞಾನದರ್ಶಿನಿ ಮತ್ತು ಜ್ಞಾನವರ್ಷಿಣಿ ಕೃತಿಯನ್ನು ಬಿಡುಗಡೆಗೊಳಿಸಿ ಹಾಗೂ 21ನೇ ವರ್ಷದ ರಾಜ್ಯಮಟ್ಟದ ಅಂಚೆ- ಕುಂಚ ವಿಜೇತರಿಗೆ ಪುರಸ್ಕಾರ ನೀಡಿ ಮಾತನಾಡಿದರು. ಪುಸ್ತಕಗಳನ್ನು ಓದುವುದರಿಂದ ಜ್ಞಾನ ವೃದ್ಧಿಯೊಂದಿಗೆ ಮಸ್ತಕದ ವಿಕಾಸವೂ ಸಾಧ್ಯ. ಕಾಲಹರಣ ಮಾಡುವ ಮೊಬೈ ಲ್‌ ಬಳಕೆಯನ್ನು ಕಡಿಮೆ ಮಾಡಿ, ಉನ್ನತ ಸಾಧನೆಗೆ ಮುಂದಾಗಿ ಎಂದರು.

ಏಕಾಗ್ರತೆಗೆ ಒಲಿಯುವ ಕಲೆ
ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಮಾತ ನಾಡಿ, ಕಲೆಯನ್ನು ತಪಸ್ಸಿನಂತೆ ಏಕಾಗ್ರತೆ ಮತ್ತು ಸತತ ಪ್ರಯತ್ನದಿಂದ ಅಭ್ಯಾಸ ಮಾಡಿದರೆ ಉನ್ನತ ಸಾಧನೆ ಸಾಧ್ಯ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಡಿ.ಡಿ.ಪಿ.ಐ. ವೆಂಕಟೇಶ ಸುಬ್ರಾಯ ಪಟಗಾರ ಶುಭಹಾರೈಸಿದರು. ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಮಾನವೀಯತೆ ಇಲ್ಲದ ಜನ್ಮ ವ್ಯರ್ಥ. ಗುರು-ಹಿರಿಯರನ್ನು ಗೌರವಿಸುವುದು, ಸಮಾನ ಮನಸ್ಕರಲ್ಲಿ ಸ್ನೇಹಿತರಂತೆ ಪ್ರೀತಿ-ವಿಶ್ವಾಸದಿಂದ ವ್ಯವಹರಿಸುವುದು ಮುಖ್ಯ. ಎಸ್‌.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ, ಶಿಸ್ತು ಮತ್ತು ಮಾನವೀಯ ಮೌಲ್ಯಗಳನ್ನೂ ಕಲಿಸಲಾಗುತ್ತದೆ ಎಂದರು.

ಡಿ. ಹರ್ಷೇಂದ್ರ ಕುಮಾರ್‌, ಸುಪ್ರಿಯಾ ಹರ್ಷೇಂದ್ರ ಕುಮಾರ್‌ ಮತ್ತು ಪೂರನ್‌ವರ್ಮ ಉಪಸ್ಥಿತ ರಿದ್ದರು. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ಯೋಗ ನಿರ್ದೇಶಕ ಶಶಿಕಾಂತ್‌ ಜೈನ್‌, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯನ್ನು ಈ ವರ್ಷ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರಕ್ಕೂ ವಿಸ್ತರಿಸಲಾಗುವುದು ಎಂದರು. ಅಂಚೆ-ಕುಂಚ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಧಕರಿಗೆ ಹೆಗ್ಗಡೆ ಅಭಿನಂದನೆ ಇದೇ ಸಂದರ್ಭದಲ್ಲಿ ಡಾ| ವೀರೇಂದ್ರ ಹೆಗ್ಗಡೆ ಅವರು ಒಲಿಂಪಿಕ್‌ ಸಾಧಕರನ್ನು ಅಭಿನಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.