Advertisement

ಸರ್ವಜನಹಿತ ಸಾರುವ ಸಾಂಪ್ರದಾಯಿಕ ಹೆಗ್ಗುರುತು

01:00 AM Dec 09, 2020 | mahesh |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪ್ರತೀ ವರ್ಷ ಕಾರ್ತಿಕ ಮಾಸ ವಿಶೇಷ ಶೋಭೆಯನ್ನು ತರುತ್ತದೆ. ಕಾರಣ, ಲಕ್ಷದೀಪೋತ್ಸವ ಮತ್ತು ಅದರ ಅವಿಭಾಜ್ಯ ಅಂಗವಾಗಿ ನಡೆದುಬಂದಿರುವ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳು. ಪ್ರಸ್ತುತ ವರ್ಷ ಒಂದು ವಿಶೇಷ ಸಂದರ್ಭವೆಂಬಂತೆ ಡಿ. 10ರಿಂದ 14ರ ವರೆಗೆ ಲಕ್ಷದೀಪೋತ್ಸವ ಹಾಗೂ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳು ಮೈದುಂಬಿಕೊಳ್ಳಲಿವೆ. ಈ ಹಿನ್ನೆಲೆಯಲ್ಲಿ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು “ಉದಯವಾಣಿ’ ಜತೆಗೆ ಮಾತನಾಡಿದ್ದಾರೆ.

Advertisement

ಅಚ್ಚಳಿಯದೆ ಶೋಭಿಸುವ ಮೂರು ಜಾತ್ರೆಗಳು
ಶ್ರೀ ಕ್ಷೇತ್ರದಲ್ಲಿ ಪ್ರತೀ ವರ್ಷ ಪ್ರಮುಖವಾಗಿ 3 ಉತ್ಸವಗಳು ಜನಮಾನಸದಲ್ಲಿ ಅಚ್ಚಳಿ ಯದೆ ಶೋಭಿಸುತ್ತವೆ. ಕಾರ್ತಿಕದಲ್ಲಿ ಬರುವ ಲಕ್ಷದೀಪೋತ್ಸವ, ಮಾಘ ಮಾಸದಲ್ಲಿ ಶಿವರಾತ್ರಿ ಮತ್ತು ಎಪ್ರಿಲ್‌ ನಲ್ಲಿ ಬರುವ ವಿಷು ಜಾತ್ರೆ ಮಂಜುನಾಥ ಸ್ವಾಮಿಗೆ ಜನರು ಬಹಳ ವಿಶೇಷ ವಾಗಿ ಭಕ್ತಿಯನ್ನು ಸಮರ್ಪಿಸುವ ದಿನಗಳು. ಈ 3 ಉತ್ಸವಗಳು ಶ್ರೀಕ್ಷೇತ್ರದ ಸಂಪ್ರದಾಯದ ಹೆಗ್ಗುರುತುಗಳಾಗಿವೆ.

ಭಕ್ತಿಯ ಅರ್ಪಣೆಯೊಂದಿಗೆ ಇರಲಿ ಮುನ್ನೆಚ್ಚರಿಕೆ
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಾನ ದಲ್ಲಿ ನಡೆಯುವ ಲಕ್ಷದೀಪೋತ್ಸವಕ್ಕೆ ಸಾಂಪ್ರದಾಯಿಕ ಮಹತ್ವವಿದೆ. ಈ ಕ್ಷಣ ಧರ್ಮಸ್ಥಳವನ್ನು ಸೂಕ್ಷ್ಮವಾಗಿ ಗಮನಿಸಿದರೆ ಪ್ರತೀ ಪಾರ್ಶ್ವದಿಂದ ಬೃಹತ್‌ ಕಟ್ಟಡದವರೆಗೆ ಸಂಪೂರ್ಣ ಶುದ್ಧೀಕರಿಸಿ, ಬಣ್ಣ ಬಳಿದು ಸುಸ್ಥಿತಿಗೆ ತರುವಂಥ ಕೆಲಸ ಕಳೆದ 150 ವರ್ಷಗಳಿಂದ ನಡೆಯುತ್ತ ಬಂದಿದೆ. ಮಹಾದ್ವಾರ ದಿಂದ ದೇವಸ್ಥಾನ ಮತ್ತು ಎಲ್ಲೆಡೆ ವಿದ್ಯುದ್ದೀಪ ಗಳ ಅಲಂಕಾರ ತುಂಬಿದೆ. ಎಲ್ಲ ಚಟು ವಟಿಕೆ ಗಳನ್ನು ಶುದ್ಧೀಕರಿಸಿಕೊಂಡು ಅಲಂಕಾರ ದೊಂದಿಗೆ ಹೊಸ ಕಳೆ ಕೊಡುವುದೇ ಲಕ್ಷದೀಪೋತ್ಸವದ ಕಲ್ಪನೆಯಾಗಿದೆ.

ಮನೆಯಲ್ಲೇ ವೀಕ್ಷಣೆಗೆ ಆನ್‌ಲೈನ್‌ ಸೇವೆ
ಲಕ್ಷದೀಪೋತ್ಸವದ ಅವಧಿಯಲ್ಲಿ ನಡೆಯುವ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳೇ ವಿಶೇಷ ಆಸಕ್ತಿಯ ವಿಷಯ. ಆದರೆ ಈ ವರ್ಷ ಜನಸಂದಣಿ ತಡೆಯುವ ಸಲುವಾಗಿ ಇವು ಗಳನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡುವುದಕ್ಕೆ ಮುಂದಾಗಿ ದ್ದೇವೆ. ಇವುಗಳನ್ನು www.youtube.com/c/SrikshetraDharmasthalaManjunatha ಮತ್ತು facebook.com/Sri.Kshetra.Dharmasthala.Manjunatha ಎಂಬ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next