Advertisement

Dharmasthala”ಧರ್ಮ ಜೀರ್ಣೋದ್ಧಾರದ ಭಕ್ತಿ ಕ್ರಾಂತಿ ಭಜನೆ’

12:29 AM Oct 05, 2023 | Team Udayavani |

ಬೆಳ್ತಂಗಡಿ: ಈ ದೇಶದ ಸಾಂಸ್ಕೃತಿಕ ಪರಂಪರೆಯಲ್ಲಿ ಭಕ್ತಿಯ ಬೇರುಗಳನ್ನು ಆಳವಾಗಿ ಕೊಂಡೊಯ್ದ ಶ್ರೇಷ್ಠ ಪರಂಪರೆ ಭಜನೆ. ಭಜನ ಪದ್ಧತಿಗೊಂದು ಸಂವಿಧಾನವನ್ನೇ ಸೃಷ್ಟಿಸಿರುವ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಧರ್ಮ ಜೀರ್ಣೋದ್ಧಾರದ ಸಾಮೂಹಿಕ ಭಕ್ತಿ ಕ್ರಾಂತಿ ಮಾಡಿದ್ದಾರೆ ಎಂದು ಹುಬ್ಬಳ್ಳಿ ಹಾನಗಲ್‌ ವಿರಕ್ತ ಮಠ ಶ್ರೀ ಜಗದ್ಗುರು ಮೂರುಸಾವಿರ ಮಠ ಮಹಾ ಸಂಸ್ಥಾನದ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಡಾ| ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿ ನುಡಿದರು.

Advertisement

ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್‌ನಿಂದ ಸೆ. 28ರಿಂದ ಒಂದು ವಾರ ಕಾಲ ನಡೆದ 25ನೇ ವರ್ಷದ ಭಜನ ತರಬೇತಿ ಕಮ್ಮಟದ ಪ್ರಯುಕ್ತ ಅ. 4ರಂದು ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸಮಾರೋಪದಲ್ಲಿ ಆಶೀರ್ವ ಚನಗೈದರು.

ಮುಖ್ಯ ಅಭ್ಯಾಗತರಾದ ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಮಾತನಾಡಿ, ಗ್ರಾಮೀಣಾಭಿವೃದ್ಧಿ ಚಿಂತನೆಯಡಿ ಲಕ್ಷಾಂತರ ಯುವಕ ಯುವತಿಯರ ಸಶಕ್ತೀಕರಣ ಕ್ಷೇತ್ರದಿಂದಾಗಿದೆ ಎಂದು ಶ್ಲಾಘಿ ಸಿದರು.

ವರ್ಣಿಸಲಸದಳ
ರಾಜ್ಯ ಸಭಾ ಸದಸ್ಯ, ಚಲನಚಿತ್ರ ಸಂಗೀತ ನಿರ್ದೇಶಕ ಮತ್ತು ಗಾಯಕ ಇಳಯರಾಜ ಭಾಗವಹಿಸಿ, ಧರ್ಮಸ್ಥಳ ಕ್ಷೇತ್ರ ಹಾಗೂ ಭಜನ ಕಮ್ಮಟವನ್ನು ಮಾತಿನಲ್ಲಿ ವರ್ಣಿಸಲಸಾಧ್ಯ. ನಾನು ಕರ್ನಾಟಕದಲ್ಲಿ ಹುಟ್ಟದಿದ್ದರೂ ಕೊಲ್ಲೂರು ಮೂಕಾಂಬಿಕೆ ನನ್ನಲ್ಲಿ ನೆಲೆಸಿದ್ದಾಳೆ ಎಂದುಕೊಂಡವ ನಾನು.

ಹಾಗಾಗಿ 1,500ಕ್ಕೂ ಅಧಿಕ ಸಿನೆಮಾಗಳಿಗೆ ಸಂಗೀತ ನೀಡುವಂತಾ ಗಿದೆ. ಧರ್ಮಸ್ಥಳ ಕ್ಷೇತ್ರದ ಧಾರ್ಮಿಕ ಶ್ರೀಮಂತಿಕೆಯನ್ನು “ಆನಂದ ಕಂಡೆ ನಾನಿಂದು… ಮಾತಿಗೆ ಸಿಕ್ಕೋದಲ್ಲ… ಹೇಳ್ಳೋದು ಬಾರದಲ್ಲ’ ಪದ್ಯವನ್ನು ಹಾಡುವ ಮೂಲಕ ವರ್ಣಿಸಿದರು.

Advertisement

ನಾಯಕತ್ವ ಬೆಳೆಸುವ ಉದ್ದೇಶ
ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಸುಭಿಕ್ಷೆ ನೆಲೆಸಿ ನಾಯಕತ್ವ ಬೆಳೆಯಬೇಕೆಂಬುದು ನಮ್ಮ ಇಚ್ಛೆ. ಅಂತಹ ಸಂಘಟನೆ ಪ್ರಾರಂಭಿಸುವುದು ಕ್ಷೇತ್ರದ ಉದ್ದೇಶ. ಬದಲಾವಣೆ ಎಂದರೆ ವ್ಯಕ್ತಿತ್ವ ದಲ್ಲಲ್ಲ. ಅದು ಮಾತು, ವಾತ್ಸಲ್ಯ, ನಡವಳಿಕೆಯಿಂದ ಆಗಬೇಕಿದೆ. ಸ್ವಚ್ಛತೆ,ಆರೋಗ್ಯ ಕಾಳಜಿ, ಶಿಸ್ತು ಬೆಳೆಸಿ ಎಂದು ಹಾರೈಸಿ ಭಜಕರನ್ನು ಹಾಗೂ ತರಬೇತುದಾರರನ್ನು ಶ್ಲಾಘಿಸಿದರು.

ಪುಲಿಯಾರು ಸಿದ್ಧಪ್ಪ ಅಯ್ಯಪ್ಪ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪಸಿಂಹ ನಾಯಕ್‌, ಕನ್ನಡ ಅರ್ಚಕ ಹಿರೇಮಗಳೂರು ಕಣ್ಣನ್‌, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನ ಪರಿಷತ್‌ ಉಪಾಧ್ಯಕ್ಷರಾದ ಡಾ| ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್‌, ಸುಪ್ರಿಯಾ ಹರ್ಷೇಂದ್ರ ಕುಮಾರ್‌, ಭಜನ ಪರಿಷತ್‌ ಅಧ್ಯಕ್ಷ ಬಾಲಕೃಷ್ಣ ಪಂಜ, ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಎಸ್‌ಡಿಎಂ ಟ್ರಸ್ಟಿ ಎಸ್‌.ಡಿ. ಸಂಪತ್‌ ಸಾಮ್ರಾಜ್ಯ ಶಿರ್ತಾಡಿ, ಸೋನಿಯಾ ವರ್ಮಾ ಉಪಸ್ಥಿತರಿದ್ದರು.

ಗೌರವಾರ್ಪಣೆ
ಇಳಯರಾಜ ಅವರಿಗೆ ಕ್ಷೇತ್ರದ ವತಿಯಿಂದ, ಡಾ| ಹೆಗ್ಗಡೆಯವರಿಗೆ ಸಚಿವರಿಂದ ಗೌರವಾರ್ಪಣೆ ನಡೆ ಯಿತು. ಭಜನ ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಅಭಿಮಾನಿಗಳು ಡಾ| ಹೆಗ್ಗಡೆಯವರಿಗೆ ರಜತ ಕಿರೀಟ ತೊಡಿಸಿ ಗೌರವಿಸಿದರು.

ಭಜನ ಪರಿಷತ್‌ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್‌ ಪ್ರಸ್ತಾವನೆಗೈದರು. ಭಜನ ಪರಿಷತ್‌ ಕಾರ್ಯದರ್ಶಿ ಪುರುಷೋತ್ತಮ ಪಿ.ಕೆ., ವಂದಿಸಿದರು. ಡಾ| ಐ. ಶಶಿಕಾಂತ್‌ ಜೈನ್‌, ಶ್ರೀನಿವಾಸ್‌ ರಾವ್‌ ನಿರೂಪಿಸಿದರು. ಕಾರ್ಯದರ್ಶಿ ಸುರೇಶ್‌ ಮೊಲಿ ವರದಿ ವಾಚಿಸಿದರು.

ಡಾ| ಹೆಗ್ಗಡೆ ಶ್ರೇಷ್ಠ ಸಂತ
ಗ್ರಾಮ ಗ್ರಾಮದಲ್ಲಿ ಭಜನ ತಂಡ ಸಂಘಟಿಸಿ ಲಕ್ಷಾಂತರ ಜನರನ್ನು ದುಶ್ಚಟ ಮುಕ್ತಗೊಳಿಸಿರುವ ಡಾ| ಹೆಗ್ಗಡೆಯವರು ಸಾವಿರಾರು ಮಠಾಧೀಶರು, ಸಂತರು, ಸರಕಾರ ಮಾಡುವ ಕೆಲಸ ಒಬ್ಬರೇ ಮಾಡಿದ್ದಾರೆ. ಹಾಗಾಗಿ ಎಲ್ಲ ಧರ್ಮಗಳ ಧರ್ಮಾಧಿಕಾರಿಯಾಗಿ 21ನೇ ಶತಮಾನದ ಶ್ರೇಷ್ಠ ಸಂತರೆನಿಸಿದ್ದಾರೆ ಎಂದು ವಿರಕ್ತ ಮಠ ಶ್ರೀಗಳು ಬಣ್ಣಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next