Advertisement
ಪಣಿಕಲ್ಲಿನ ರಾಘವೇಂದ್ರ ಪಟವರ್ಧನ್ ಅವರ ತೋಟಕ್ಕೆ ರಾತ್ರಿ 12ರ ಬಳಿಕ ಕಾಡಾನೆಗಳು ಪ್ರವೇಶಿಸಿವೆ. ತತ್‌ಕ್ಷಣ ಮನೆಯವರ ಗಮನಕ್ಕೆ ಬಂದಿದ್ದು ಅವರು ಪರಿಸರದ ಮಂದಿಗೆ ವಿಚಾರ ತಿಳಿಸಿ ಪಟಾಕಿ ಸಿಡಿಸಿ ಹಿಂಡನ್ನು ಕಾಡಿಗೆ ಅಟ್ಟಲು ಪ್ರಯತ್ನಿಸಿದರು. ಅಷ್ಟರಲ್ಲೇ ಆನೆಗಳು ಹತ್ತಕ್ಕಿಂತ ಅಧಿಕ ಅಡಿಕೆ ಮರಗಳನ್ನು ಮುರಿದು ಹಾಕಿದ್ದವು.
ಸೋಮವಾರ ಕಂಡುಬಂದ ಹಿಂಡಿನಲ್ಲಿ 6ಕ್ಕಿಂತ ಅಧಿಕ ಆನೆಗಳಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಸೋಮವಾರ ರಾತ್ರಿ ಚಾರ್ಮಾಡಿ ಕಡೆಯಿಂದ ಆಗಮಿಸಿದ ಆನೆಗಳು ಮತ್ತೆ ಚಾರ್ಮಾಡಿ ಅರಣ್ಯದತ್ತ ಹೋಗಿವೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Related Articles
Advertisement
ಜನರಲ್ಲಿ ಆತಂಕಒಂದು ವಾರದಿಂದ ತಾಲೂಕಿನಲ್ಲಿ ಕಾಡಾನೆಗಳ ಸಂಚಾರ ವಿಪರೀತವಾಗಿದ್ದು, ಚಾರ್ಮಾಡಿ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಭೀತಿ ಮೂಡಿಸಿದೆ. ರಾತ್ರಿಯಾದರೆ ಜನರು ಮನೆಗಳಿಂದ ಹೊರಬರಲು ಭಯಪಡುತ್ತಿದ್ದಾರೆ. ತೋಟದಲ್ಲಿದ್ದ ದನ ಕಾಡಾನೆಗೆ ಬಲಿ
ಕಡಬ/ಸುಬ್ರಹ್ಮಣ್ಯ: ತೋಟದಲ್ಲಿದ್ದ ದನವೊಂದು ಕಾಡಾನೆ ದಾಳಿ ಯಿಂದ ಮೃತಪಟ್ಟಿರುವ ಘಟನೆ ಕಡಬ ತಾಲೂಕಿನ ಕೊಣಾಜೆಯಲ್ಲಿ ಸಂಭವಿಸಿದೆ. ಸಿಆರ್‌ಸಿ ಕಾಲನಿ ಬಳಿಯ ಕೊಣಾಜೆ ದೊಡ್ಡಮನೆಯ ಅಶೋಕ ಅವರಿಗೆ ಸೇರಿದ ದನವನ್ನು ಮಂಗಳವಾರ ಮೇಯಲು ಬಿಟ್ಟಿದ್ದು ಸಂಜೆ ಮನೆಯ ವರಿಗೆ ಸಿಕ್ಕಿರಲಿಲ್ಲ. ಬುಧವಾರ ಬೆಳಗ್ಗೆ ಹುಡುಕಾಡಿದಾಗ ತೋಟದಲ್ಲಿ ಗಾಯ
ಗೊಂಡು ಸತ್ತು ಬಿದ್ದಿರುವುದು ಕಂಡುಬಂದಿತು. ತೋಟದಲ್ಲಿ ಪೈಪ್‌ಗಳಗೂ ಹಾನಿಯಾಗಿದೆ. ರಾತ್ರಿ ವೇಳೆ ಕಾಡಾನೆ
ಸಾಗುವಾಗಿ ದನಕ್ಕೆ ಎಡವಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಕಾಡಾನೆ ದಾಳಿ ವೇಳೆ ಹೃದಯಾಘಾತದಿಂದ ದನ ಸಾವನ್ನಪ್ಪಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಕಂಡು ಬಂದಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.