Advertisement
ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 48ನೇ ವರ್ಷದ ಸಾಮೂಹಿಕ ಉಚಿತ ವಿವಾಹ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಶುಭಾಶೀರ್ವಾದ ನೀಡಿದರು. ವಿವಾಹದಲ್ಲಿ 102 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
Related Articles
Advertisement
ನಟ ಶಿವರಾಜ್‌ಕುಮಾರ್ ಮಾತ ನಾಡಿ, ಮಂಜುನಾಥ ಸ್ವಾಮಿಯ ಸಾನ್ನಿಧ್ಯ, ಪೂಜ್ಯ ಹೆಗ್ಗಡೆ ಯವರ ಸಮ್ಮುಖದಲ್ಲಿ ವಿವಾಹವಾಗುತ್ತಿರು ವುದು ನಿಮ್ಮೆಲ್ಲರ ಭಾಗ್ಯ. ಡಾ| ಹೆಗ್ಗಡೆಯವರು ಧಾರ್ಮಿಕ ಮತ್ತು ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ. 25ನೇ ಸಾಮೂಹಿಕ ವಿವಾಹದಲ್ಲಿ ಅಪ್ಪಾಜಿ ಡಾ| ರಾಜ್ ಭಾಗವಹಿಸಿದ್ದರು. ಈ ವಿವಾಹ ಸಮಾರಂಭದಲ್ಲಿ ಭಾಗಿಯಾಗಿರುವ ಪುಣ್ಯ ನನ್ನದು ಎಂದರು. ಧರ್ಮದ ನೆಲೆಯಲ್ಲಿ ವಿವಾಹವಾದ ದಂಪತಿಯನ್ನು ಮಂಜುನಾಥಸ್ವಾಮಿ ಕಾಪಾಡಲಿ ಎಂದು ಶುಭ ಹಾರೈಸಿದರು.
ಬೆಳ್ತಂಗಡಿ ಶಾಸಕ ಹರೀಶ ಪೂಂಜ ಮತ್ತು ಚಲನಚಿತ್ರ ನಿರ್ಮಾಪಕ ಚೆನ್ನೇ ಗೌಡ ಮಾತನಾಡಿ ಡಾ| ಹೆಗ್ಗಡೆಯವರ ಕಾರ್ಯವೈಖರಿಯನ್ನು ಸ್ಮರಿಸಿ ವಧೂವರರಿಗೆ ಶುಭ ಹಾರೈಸಿದರು.
ಶಾಸಕ ಹರೀಶ್ ಕುಮಾರ್, ಅಭಯಚಂದ್ರ ಜೈನ್, ರಾಜ್ಯ ಜಲ ಸಂಪನ್ಮೂಲ ಇಲಾಖೆ ಪ್ರ. ಕಾರ್ಯದರ್ಶಿ ರಾಕೇಶ್ ಸಿಂಗ್, ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ, ಗೀತಾ ಶಿವರಾಜ್ ಕುಮಾರ್, ನಟ- ನಿರ್ಮಾಪಕ ಗುರುದತ್, ಹೇಮಾವತಿ ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹಷೇìಂದ್ರ ಕುಮಾರ್, ಸುಪ್ರಿಯಾ ಹಷೇìಂದ್ರ ಕುಮಾರ್ ಉಪಸ್ಥಿತ ರಿದ್ದರು. ಜಯಶಂಕರ್ ಶರ್ಮ ಸ್ವಾಗತಿಸಿದರು. ದೀಕ್ಷಿತ್ ರೈ ನಿರ್ವಹಿಸಿ ಪಿ. ಸುಬ್ರಹ್ಮಣ್ಯ ರಾವ್ ವಂದಿಸಿದರು.
48ನೇ ಸಾಮೂಹಿಕ ಉಚಿತ ವಿವಾಹದಲ್ಲಿ 102 ಜೋಡಿಗಳಿದ್ದರು. ಟಿ. ನರಸೀಪುರದ ಸತೀಶ್ ಮತ್ತು ಗುಂಡ್ಲುಪೇಟೆಯ ಸಿಂಧೂ ಜಿ. 12,261ನೆಯ ಜೋಡಿಯಾಗಿ ಗಮನ ಸೆಳೆದರು. ಇವರಿಬ್ಬರೂ ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಸಿಬಂದಿ. ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸತೀಶ್ ಮೇಲ್ವಿಚಾರಕರಾಗಿ, ಸಿಂಧೂ ನಗದು ಸಹಾಯಕಿಯಾಗಿದ್ದಾರೆ.
ಸಮಾರಂಭದಲ್ಲಿ ನಟ ಶಿವರಾಜ್ ಕುಮಾರ್ ಅವರು ಡಾ| ರಾಜ್ ಕಂಠದಲ್ಲಿ ಪ್ರಸಿದ್ಧಿಯಾಗಿರುವ ಎರಡು ಹಾಡುಗಳನ್ನು ಹಾಡಿ ರಂಜಿಸಿದರು. ಮೊದಲಿಗೆ “ಹೊಸಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭಾವಾಗಲಿ…’, ಬಳಿಕ “ವಿಶ್ವನಾಥನು ತಂದೆಯಾದರೆ ವಿಶಾಲಾಕ್ಷಿ ತಾಯಿಯಲ್ಲವೇ…’ ಹಾಡಿದರು. ಮೂರನೆಯದಾಗಿ “ಜೋಗಿ’ ಚಿತ್ರದ ಹಾಡನ್ನು ಹಾಡಿದರು.
ಋತ್ವಿಜರಿಂದ ವೇದಘೋಷ ನಡೆಯಿತು. ಬಳಿಕ ವಧೂ-ವರರು ಹಾರವನ್ನು ಬದಲಾಯಿಸಿಕೊಂಡರು. ಬಳಿಕ 6.48ರ ಗೋಧೂಳಿ ಲಗ್ನದಲ್ಲಿ 102 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಮುತ್ತೈದೆಯರು ಆರತಿ ಬೆಳಗಿದರು. ವಧೂವರರಿಗೆ ಪ್ರಮಾಣ ವಚನ ಬೋಧಿಸಲಾಯಿತು.
ಧರ್ಮಾಧಿಕಾರಿ ಡಾ| ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಸಚಿವ ಶಿವಾನಂದ ಪಾಟೀಲ್, ನಟ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಮತ್ತು ಗಣ್ಯರು ಮಾಂಗಲ್ಯವನ್ನು ವಧೂ-ವರರಿಗೆ ವಿತರಿಸಿ, ಆಶೀರ್ವದಿಸಿದರು.