Advertisement
ಬೆಂಗಳೂರಿನ ಚಂದ್ರಲೇಔಟ್ ನಿವಾಸಿಗಳಾದ ಸಾಯಿ ಸರವಣ, ಎಸ್.ಗೋಪಾಲ್ ರಾವ್, ಆನಂದ, ಮಂಜುನಾಥ ರಾವ್ ಜತೆಗುಡಿ ಕಳೆದ 20 ವರ್ಷಗಳಿಂದ ಹೊಸ ವರ್ಷಕ್ಕೆ ಮುಂಜುನಾಥ ಸ್ವಾಮಿ ದರ್ಶನ ಪಡೆಯಲೆಂದು ಆಗಮಿಸುತ್ತಿದ್ದಾರೆ. ಈ ನಡುವೆ ಕಳೆದ 12 ವರ್ಷಗಳಿಂದ ಹೊಸ ವರ್ಷವನ್ನು ದೇವರ ಸೇವೆಗಾಗಿ ಮೀಸಲಿಡುವ ನಿಟ್ಟಿನಲ್ಲಿ ಹೂವಿನ ಅಲಂಕಾರ ಸೇವೆ ನೀಡುತ್ತಿದ್ದಾರೆ.
ಭತ್ತ ತೆನೆ, ಕಬ್ಬು, ದಾಳಿಂಬೆ, ಅನನಾಸು, ಬಾಳೆ ದಿಂಡು, ತೆಂಗಿನ ಗರಿ, ತಾವರೆ, ಲಿಲಿಯಂಮ್, ಕ್ರಿಸಾಂಟಮೊ, ಆಂತೂರಿಯಂ, ಜಮೈಕಾನ್ ಎಲೆ ಏರಿದಂತೆ 6 ಲೋಡ್ ಅಲಂಕಾರಿಕ ಸಾಮಾಗ್ರಿ ಬಳಸಿ ದೇವಳ ಹೊರಾಂಗಣ ಧ್ವಾರ, ಸುತ್ತು ಪೌಳಿ ಮೇಲ್ಛಾವಣಿ, ಸ್ತಂಭಗಳನ್ನು ವಿಭಿನ್ನವಾಗಿ ಸಿಂಗರಿಸಲಾಗಿದೆ. ಹೊಸ ವರ್ಷವನ್ನು ಆಚರಿಸುವ ಸಲುವಾಗಿ ದೇವರ ಮೊರ ಹೋಗಬೇಕೆಂಬ ಸಂಕಲ್ಪದೊಂದಿಗೆ ಕಳೆದ 12 ವರ್ಷಗಳಿಂದ ಸೇವೆಯಲ್ಲಿ ತೊಡಗಿದ್ದೇವೆ. ಹೊಷ ವರ್ಷ ಎಂದು ಪಾರ್ಟಿ ಸುತ್ತಾಟ ನಡೆಸದೆ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದ ಪಡೆಯಲು ಕುಟುಂಬ ಸಮೇತರಾಗಿ ಭೇಟಿ ನೀಡುತ್ತಿದ್ದೇವೆ.
-ಎಸ್. ಗೋಪಾಲ್ ರಾವ್, ಸೇವಾಕರ್ತರು