Advertisement

ಹಂಪಿ ಮಾದರಿಯಲ್ಲಿ ಧರ್ಮಸ್ಥಳಕ್ಕೆ ಪ್ರಾಧಿಕಾರ

12:31 AM Dec 18, 2022 | Team Udayavani |

ಬೆಳ್ತಂಗಡಿ: ಧಾರ್ಮಿಕ ಸ್ಥಳಗಳನ್ನು ಪಾವಿತ್ರ್ಯವಾಗಿರಿಸುವ ನೆಲೆಯಲ್ಲಿ ಹಂಪಿಯಲ್ಲಿ ಪ್ರಾಧಿಕಾರ ರಚಿಸಿ ಸಂರಕ್ಷಿಸುವ ಕಾರ್ಯವಾಗಿದೆ. ಅದೇ ಮಾದರಿಯಲ್ಲಿ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಬೇಡಿಕೆಯನ್ನು ಸರಕಾರದ ಮುಂದಿರಿಸಿ ಪ್ರಾಧಿಕಾರ ರಚಿಸಲು ಸೂಕ್ತ ಕ್ರಮ ವಹಿಸಲಾಗು ವುದು ಎಂದು ಪ್ರವಾಸೋದ್ಯಮ ಇಲಾಖೆ, ಪರಿಸರ ಸಚಿವ ಆನಂದ ಸಿಂಗ್‌ ತಿಳಿಸಿದ್ದಾರೆ.

Advertisement

ಜಿಲ್ಲಾಡಳಿತ, ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಇಲಾಖೆ ಸಹಯೋಗದೊಂದಿಗೆ 4.80 ಕೋ.ರೂ. ವೆಚ್ಚದಲ್ಲಿ ಶ್ರೀಕ್ಷೇತ್ರ ಧರ್ಮ ಸ್ಥಳದ ಸ್ನಾನಘಟ್ಟ ಅಭಿವೃದ್ಧಿ ಕಾಮ ಗಾರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಂಬಿಕೆ ವಿಶ್ವಾಸವೇ ಧರ್ಮ. ಬಂದ ಭಕ್ತರಿಗೆ ಯಾವುದೇ ಅಡಚಣೆ ಯಾಗದಂತೆ ಧರ್ಮಸ್ಥಳ ಸ್ನಾನಘಟ್ಟ ಸುಂದರವಾಗಿ ಮೂಡಿಬರಲು ಡಾ| ಹೆಗ್ಗಡೆ ಅವರು ಅತ್ಯಂತ ಮುತು ವರ್ಜಿ ವಹಿಸಿದ್ದಾರೆ. ಶಾಸಕ ಹರೀಶ್‌ ಪೂಂಜ ಅವರು ಅಭಿವೃದ್ಧಿ ಕಾರ್ಯಕ್ಕೆ ಮುನ್ನುಡಿ ಬರೆದಿದ್ದಾರೆ ಎಂದರು.

ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ತೀರ್ಥ ಮತ್ತು ಕ್ಷೇತ್ರ ಎರಡು ಪ್ರಾಮುಖ್ಯವಾದುದು. ನೇತ್ರಾವತಿಯ ಪಾವಿತ್ರ್ಯತೆಯನ್ನು ಉಳಿಸಲು ಸ್ವತ್ಛತೆಗೆ ಆದ್ಯತೆ ನೀಡಲಾಗಿದೆ ಎಂದರು. ಇದೇ ವೇಳೆ ಅವರು ಕ್ಷೇತ್ರದ ಪಾವಿತ್ರ್ಯ ರಕ್ಷಣೆ ದೃಷ್ಟಿಯಿಂದ ದೇಗುಲದ ಸನ್ನಿಧಿ ಸುತ್ತ ಒಂದೂವರೆ ಕಿ.ಮೀ. ವ್ಯಾಪ್ತಿಯಲ್ಲಿ ಖಾಸಗಿ ಕಟ್ಟಡ, ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಬಾರದೆಂದು ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಬಳಿ ಬೇಡಿಕೆ ಮುಂದಿಟ್ಟರು.

ಶಾಸಕ ಹರೀಶ್‌ ಪೂಂಜ ಅಧ್ಯಕ್ಷತೆ ವಹಿಸಿದ್ದರು.

Advertisement

ಡಿ. ಹಷೇìಂದ್ರ ಕುಮಾರ್‌, ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪ್‌ಸಿಂಹ ನಾಯಕ್‌, ಜಿಲ್ಲಾಧಿಕಾರಿ ರವಿ ಕುಮಾರ್‌ ಎಂ.ಆರ್‌. ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷೆ ಜಯಾ ಮೋನಪ್ಪ ಗೌಡ, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕ ಜನಾರ್ದನ್‌, ಉಪ ನಿರ್ದೇಶಕ ಎನ್‌. ಮಾಣಿಕ್ಯ, ಕಾರ್ಯಪಾಲಕ ಎಂಜಿನಿಯರ್‌ ಯಶವಂತ್‌ ಕುಮಾರ್‌ ಎಸ್‌. ಉಪಸ್ಥಿತರಿದ್ದರು.
ಮಂಗಳೂರು ಹೆ¨ªಾರಿ ವಿಭಾಗ ಕಾರ್ಯಪಾಲಕ ಎಂಜಿನಿಯರ್‌ ಶಿವಪ್ರಸಾದ್‌ ಅಜಿಲ ಸ್ವಾಗತಿಸಿದರು. ಶಿಕ್ಷಕ ಅಜಿತ್‌ ಕುಮಾರ್‌ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.

82 ಹೋಂ ಸ್ಟೇಗೆ ಅನುಮೋದನೆ ಕ್ರೂಸ್‌ ಟೂರಿಸಂಗೆ ಅವಕಾಶ
ಪ್ರವಾಸೋದ್ಯಮ ಇಲಾಖೆಯಿಂದ ಕರಾವಳಿಯ ಪಣಂಬೂರು, ಸೋಮೇಶ್ವರ, ಸಸಿಹಿತ್ಲು, ಸುರತ್ಕಲ್, ಉಳ್ಳಾಲ ಸಹಿತ ಇತರ ಬೀಚ್‌ ಅಭಿವೃದ್ಧಿಗೆ 23.6 ಕೋ.ರೂ. ಒದಗಿಸಲಾಗಿದೆ. ಪ್ರವಾಸಿಗರ ಆಕರ್ಷಣೆಯಾಗಿ ಕ್ರೂಸ್‌ ಟೂರಿಸಂ ಪರಿಚಯಿಸುವ ಪ್ರಸ್ತಾವ ಸರಕಾರದಲ್ಲಿದೆ. ಜಿಲ್ಲೆಯಲ್ಲಿ 82 ಹೋಂ ಸ್ಟೇಗೆ ಅನುಮೋದನೆ ನೀಡಲಾಗಿದೆ. ಜತೆಗೆ ಧರ್ಮಸ್ಥಳ ಸ್ನಾನಘಟ್ಟದ ಹೆಚ್ಚವರಿ ಕಾಮಗಾರಿಗೆ 5 ಕೋ.ರೂ. ಒದಗಿಸುವುದಾಗಿ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next