ತಂಪು ಪಾನೀಯ ವಿತರಿಸಲಾಗುವುದು. ಈ ಹಿಂದೆ ಪೇಜಾವರ ಶ್ರೀಗಳ ಪರ್ಯಾಯ, ಪರ್ಕಳ ಮತ್ತು ಕಡಿಯಾಳಿಯ 50ನೇ ವರ್ಷದ ಶ್ರೀ ಗಣೇಶೋತ್ಸವ ಸಂದರ್ಭದಲ್ಲಿಯೂ ಇದೇ ರೀತಿ ತಂಪುಪಾನೀಯ ವಿತರಿಸಿದ್ದೇವೆ. ಇದು ನಮ್ಮ ಸ್ನೇಹ, ಸೌಹಾರ್ದದ ಸಂಕೇತ ಎಂದು ಪೇಜಾವರ ಬ್ಲಿಡ್ ಟೀಮ್ ಅಧ್ಯಕ್ಷ ಮಹಮ್ಮದ್ ಆರೀಫ್ ಮತ್ತು ಪ್ರ. ಕಾರ್ಯದರ್ಶಿ ಅನ್ಸಾರ್ ಅಹಮ್ಮದ್ ತಿಳಿಸಿದ್ದಾರೆ.
Advertisement
ವಿವಿಧ ಸಂಘ ಸಂಸ್ಥೆಗಳು, ಮನೆಯವರು ಪಾನೀಯ ವ್ಯವಸ್ಥೆ ಮಾಡಿದ್ದಾರೆ. ಪರ್ಕಳದ ನಿವಾಸಿ ಅಲ್ವಿನ್ ಡಿ’ಸೋಜಾ ಅಡುಗೆ ಮನೆಯಲ್ಲಿ ಬಡಿಸುವ ಕೆಲಸದಲ್ಲಿ ತೊಡಗಿದ್ದರೆ, ವಿಐಪಿ ರಘುಪತಿ ಭಟ್ ಅವರು ಮೂರೂ ದಿನ ಅಡುಗೆ ಮನೆಯಲ್ಲಿ ಬಡಿಸುವ ಸ್ವಯಂಸೇವಕರೊಂದಿಗೆ ಸೇರಿಕೊಂಡು ಸಂತಸಂತರ್ಪಣೆಯ ಕೆಲಸ ನೋಡಿಕೊಳ್ಳುತ್ತಿದ್ದಾರೆ.
ಉಡುಪಿ, ನ. 25: ಧರ್ಮಸಂಸದ್, ಹಿಂದೂ ಸಮಾಜೋತ್ಸವದ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಉಡುಪಿ ನಗರದಲ್ಲಿ ಭಗವಾಧ್ವಜವನ್ನು ಹೊತ್ತ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ವಿಶೇಷವಾಗಿ ಹೆಚ್ಚಿನ ದ್ವಿಚಕ್ರ ವಾಹನಗಳಲ್ಲಿ ಒಂದು ಇಲ್ಲವೆ ಎರಡು ಭಗವಾಧ್ವಜಗಳು ರಾರಾಜಿಸುತ್ತಿವೆ. ಹಲವು ಮಂದಿ ಯುವತಿಯರು ಕೂಡ ತಮ್ಮ ಸ್ಕೂಟಿಗಳಲ್ಲಿ ಭಗವಾಧ್ವಜ ಕಟ್ಟಿಕೊಂಡಿದ್ದಾರೆ. ಧರ್ಮಸಂಸದ್‌ನ ಸಂಭ್ರಮವೋ ಎಂಬಂತೆ ಶನಿವಾರ ಹೆಚ್ಚಿನ ಸಂಖ್ಯೆಯ ಯುವಕರು ಬೈಕ್‌ನಲ್ಲಿ ಅತ್ತಿಂದಿತ್ತ ಸಂಚರಿಸಿದರು. ಹಿಂದೂ ಸಮಾಜೋತ್ಸವ: ಮದ್ಯ ಮಾರಾಟ ನಿಷೇಧ
ಉಡುಪಿ, ನ. 25: ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆಯುವ ಹಿಂದೂ ಸಮಾಜೋತ್ಸವಕ್ಕೆ ಸಾವಿರಾರು ಸ್ವಾಮೀಜಿಗಳು, ಧರ್ಮಾಧಿಕಾರಿಗಳು, ಸಚಿವರು, ರಾಜಕೀಯ ಮುಖಂಡರು ಸಹಿತ ಒಂದು ಲಕ್ಷಕ್ಕೂ ಅಧಿಕ ಮಂದಿ ಸೇರುವ ಹಿನ್ನೆಲೆಯಲ್ಲಿ ಕಾನೂನು
ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ನ. 26ರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಮದ್ಯದ ಅಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿಗಳು ಆದೇಶಿಸಿ ಡ್ರೈ ಡೇ ಎಂದು ಘೋಷಿಸಿದ್ದಾರೆ.