Advertisement

ಅಯೋಧ್ಯೆಯಲ್ಲಿ ಧರ್ಮಪರ್ವ

11:54 AM Dec 04, 2018 | Karthik A |

ಲಕ್ನೋ: ರಾಷ್ಟ್ರವ್ಯಾಪಿ ಹರಡಿರುವ ರಾಮಮಂದಿರ ನಿರ್ಮಾಣದ ಕಿಚ್ಚಿನ ಬಿಸಿ ದಿನೇ ದಿನೆ ತಾರಕಕ್ಕೇರುತ್ತಿದ್ದು, ರಾಮನ ಜನ್ಮಭೂಮಿಯಾದ ಅಯೋಧ್ಯೆ ಈಗ ಧಾರ್ಮಿಕ ಚಟುವಟಿಕೆಗಳ, ರಾಜಕೀಯ ಮೇಲಾಟಗಳ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ಇತ್ತೀಚೆಗೆ, ಅಯೋಧ್ಯೆಯಲ್ಲಿ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ವತಿಯಿಂದ ಆಯೋಜಿಸಲಾಗಿದ್ದ ‘ಧರ್ಮ ಸಭಾ’ದ ಅನಂತರ ಬಲಪಂಥೀಯ ಸಂಘಟನೆಗಳಲ್ಲಿ ಉತ್ಸಾಹ ಮೇರೆಮೀರಿದ್ದು, ಬಾಬ್ರಿ ಮಸೀದಿ ಉರುಳಿಸಿದ ದಿನವಾದ ಡಿ. 6ನ್ನು ‘ಶೌರ್ಯ ದಿನ’ವೆಂದು, ಡಿ. 18ರಂದು ‘ಗೀತಾ ಜಯಂತಿ’ ಆಚರಿಸಲು ನಿರ್ಧರಿಸಿವೆ.

Advertisement

ಈ ಕಾರ್ಯಕ್ರಮಗಳ ವಿವರ ನೀಡಿದ ವಿಎಚ್‌ಪಿಯ ಅಯೋಧ್ಯೆ ಘಟಕದ ವಕ್ತಾರ ಶರದ್‌ ಶರ್ಮಾ, ‘ಧಾರ್ಮಿಕ ಕಾರ್ಯ ಕ್ರಮಗಳ ಅಂಗವಾಗಿ ಸರಸ್ವತಿ ದೇವಿಯ ಆರಾಧನೆ ಕೈಗೊಳ್ಳಲಾಗಿದೆ. ರಾಮಮಂದಿರ ನಿರ್ಮಾಣಕ್ಕಿರುವ ಅಡೆತಡೆಗಳ ನಿವಾರಣೆಗಾಗಿ ‘ಸರ್ವ ಬಾಧೆ ಮುಕ್ತಿ ಹವನ’ಗಳನ್ನು ನಡೆಸಲಾಗುತ್ತದೆ. ರಾಮಮಂದಿರಕ್ಕಾಗಿ ಜೀವತೆತ್ತ ಕರಸೇವಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಅಯೋಧ್ಯೆಯ 500 ಆಶ್ರಮಗಳಲ್ಲಿ ತುಪ್ಪದ ದೀಪ ಹಚ್ಚಲಾಗುತ್ತದೆ’ ಎಂದಿದ್ದಾರೆ.

ಡಿ. 9ರಂದು ದಿಲ್ಲಿಯಲ್ಲಿ ಧರ್ಮ ಸಂಸತ್‌ ಆಯೋಜಿಸಲಾಗಿದ್ದು, 5 ಲಕ್ಷಕ್ಕೂ ಹೆಚ್ಚು ಜನ ಸೇರಲಿದ್ದಾರೆ. 2019ರ ಜ. 31 ಮತ್ತು ಫೆ. 1ರಂದು ನಡೆಯಲಿರುವ ಧರ್ಮಪರ್ವದಲ್ಲಿ ದೇಶದ 5,000 ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ. ಈಶಾನ್ಯ ರಾಜ್ಯಗಳ ಹಿಂದೂ ಸ್ವಾಮೀಜಿಗಳಿಗೆ ವಿಶೇಷ ಆಹ್ವಾನವಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next