Advertisement

ಹಣವೂ ಹೋಯ್ತು, ಪ್ರಾಣವೂ ಹೋಯ್ತು 

09:39 PM Mar 23, 2019 | Team Udayavani |

ಧಾರವಾಡ: ಕಾಂಪ್ಲೆಕ್ಸ್‌ ಧರಾಶಾಹಿಯಾಗಿ 13 ಜನರನ್ನು ಬಲಿ ಪಡೆದಿದ್ದು ಆಯಿತು. ಆದರೆ, ಈ ಕಾಂಪ್ಲೆಕ್ಸ್‌ನಲ್ಲಿ ಮಳಿಗೆ ಕೊಂಡ ಕುಟುಂಬಗಳ ಸ್ಥಿತಿ ಏನು ಎನ್ನುವ ಪ್ರಶ್ನೆ ಇದೀಗ ಎದುರಾಗಿದೆ. ನೆಲಮಹಡಿ ಮತ್ತು ಮೊದಲ ಮಹಡಿಯಲ್ಲಿ ಈಗಾಗಲೇ ಎಲ್ಲಾ ಬಗೆಯ ಕಚೇರಿಗಳು, ಹೋಟೆಲ್‌, ಔಷಧಿ ಮಳಿಗೆ, ಇಂಟರ್‌ನೆಟ್‌ ಕೇಂದ್ರಗಳು ಕಾರ್ಯ ಆರಂಭಿಸಿದ್ದವು. ಇವರೆಲ್ಲರೂ ಕೂಡ ನೇರವಾಗಿ ಮಾಲೀಕರಿಗೆ ಹಣ ಕೊಟ್ಟು ಮಳಿಗೆಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದರು.

Advertisement

ನೆಲಮಹಡಿಯಲ್ಲಿದ್ದ ಹೋಟೆಲ್‌ ಮಾಲೀಕರು ತಿಂಗಳಿಗೆ 6 ಸಾವಿರ ರೂ. ನಂತೆ ಬಾಡಿಗೆ ಕಟ್ಟುತ್ತಿದ್ದು, 10 ತಿಂಗಳ ಅಡ್ವಾನ್ಸ್‌ ಹಣ ಕೊಟ್ಟಿದ್ದರು ಎನ್ನಲಾಗಿದೆ. ಅದೇ ರೀತಿ ಅಪೋಲೋ ಔಷಧಿ ಮಳಿಗೆ ಕಂಪನಿ ನೇರವಾಗಿ ಮಾಲೀಕರ ಜೊತೆಗೆ ಒಪ್ಪಂದ ಮಾಡಿಕೊಂಡು ಮಳಿಗೆಯನ್ನು ಬಾಡಿಗೆಗೆ ಪಡೆದುಕೊಂಡಿತ್ತು. ಜಿಲ್ಲಾಡಳಿತಕ್ಕೆ ಸಿಕ್ಕ ಮಾಹಿತಿ ಅನ್ವಯ ನೆಲ ಮತ್ತು ಮೊದಲ ಮಹಡಿಯಲ್ಲಿನ 35ಕ್ಕೂ ಹೆಚ್ಚು ಮಳಿಗೆಗಳು ಬಾಡಿಗೆಗೆ ಒಪ್ಪಂದ ಮಾಡಿಕೊಂಡಿದ್ದವು ಎನ್ನಲಾಗಿದೆ. ಖರೀದಿ ಸತ್ಯವೇ?: ಕೆಲವರು ಹೇಳುವಂತೆ ಆಯಾ ಮಹಡಿಯಲ್ಲಿನ ಮಳಿಗೆಗಳನ್ನು ಚದರಡಿ ಆಧಾರದಲ್ಲಿ ಖರೀದಿ ಕೂಡ ಮಾಡಿದ್ದರು ಎನ್ನಲಾಗಿದೆ. ಪ್ರತಿ ಚದುರಡಿಗೆ 6 ಸಾವಿರ ರೂ.ನಂತೆ ಮಾರಾಟ ಮಾಡಲಾಗಿತ್ತು ಎನ್ನಲಾಗಿದೆ. ಆದರೆ, ಈ ಕುರಿತು ಅಂಗಡಿ ಕೊಂಡುಕೊಂಡವರಾರೂ ಜಿಲ್ಲಾಡಳಿತಕ್ಕೆ ಈವರೆಗೂ ಅಧಿಕೃತ ಮಾಹಿತಿ ನೀಡಿಲ್ಲ. ಇನ್ನು ಕೆಲ ಮಳಿಗೆಗಳನ್ನು ಕೊಂಡುಕೊಂಡು ಇತರರಿಗೆ ಭೋಗ್ಯಕ್ಕೆ ಕೊಟ್ಟಿದ್ದರು ಎನ್ನಲಾಗಿದೆ. ನಾಲ್ಕುಕ್ಕೂ ಹೆಚ್ಚು ಮಳಿಗೆಗಳನ್ನು ಮಾಲೀಕರಿಂದ ಖರೀದಿಸಿ ಬಾಡಿಗೆಗೆ ನೀಡಿಲಾಗಿತ್ತು ಎನ್ನಲಾಗಿದೆ. ಒಟ್ಟಿನಲ್ಲಿ ಹೊಟ್ಟೆಪಾಡಿಗಾಗಿ ಬೆವರು ಹರಿಸಿ ದುಡಿದು ಗಳಿಸಿದ ಹಣವನ್ನು ಕೊಟ್ಟು ಮಳಿಗೆ ಖರೀದಿಸಿದ ಮಧ್ಯಮ ವರ್ಗದವರ ಹಣವೂ ಹೋಯಿತು, ಪ್ರಾಣವೂ ಹೋದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next