Advertisement
ಇಲ್ಲಿಯ ವಿದ್ಯಾಗಿರಿಯ ಪೊಲೀಸ್ ಠಾಣೆಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಕೆಡಿಆರ್‌ಡಿಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಹುಬ್ಬಳ್ಳಿಯ ಕುಶಾಲಕುಮಾರ ಕೃಷ್ಣಾ ಸವಣೂರು (23), ನವಲಗುಂದದ ಕಳ್ಳಿಮಠ ಓಣಿಯ ಬಸವರಾಜ ಶೇಖಪ್ಪ ಬಾಬಜಿ (34), ಮಹಾಂತೇಶ ಲಕ್ಷ್ಮಣ ಹಿರಗಣ್ಣವರ (27) ಹಾಗೂ ನವಲಗುಂದದ ಜಿಲಾನಿ ಬವರಸಾಬ ಜಮಾದಾರ (25), ಪರಶುರಾಮ ಹನುಮಂತಪ್ಪ ನೀಲಪ್ಪಗೌಡ್ರ (34), ಭೋವಿ ಓಣಿಯ ರಂಗಪ್ಪ ನಾಗಪ್ಪ ಗುಡಾರದ (31), ಮಂಜುನಾಥ ಯಮನಪ್ಪ ಭೋವಿ(22), ಕುಂಬಾರ ಓಣಿಯ ಕಿರಣ ಶರಣಪ್ಪ ಕುಂಬಾರ, ಆರ್ಮಿ ಕಾಲನಿಯ ರಜಾಕ ಅಹ್ಮದ ಅಲ್ಲಾವುದ್ದೀನ ಮುಲ್ಲಾನವರ (31), ವಿದ್ಯಾರ್ಥಿ ಆಗಿರುವ ವಿರೇಶ ಸಿದ್ದಪ್ಪ ಚವಡಿ (20) ಬಂಧಿತರು. ಈ ಆರೋಪಿಗಳಿಂದ ಈವರೆಗೆ 79,89,870 ರೂ. ನಗದು, ಕೃತ್ಯಕ್ಕೆ ಬಳಸಿದ ಸ್ವಿಪ್ಟ ಡಿಸೈರ್ ಕಾರು, ಎರಡು ದ್ವಿಚಕ್ರ ವಾಹನ, ನಾಲ್ಕು ಮೊಬೆÊಲ್ ಸೇರಿದಂತೆ ಒಟ್ಟು 85,89,870 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
Related Articles
Advertisement
ವಿದ್ಯಾಗಿರಿಯ ಪಿಐ ಸಂಗಮೇಶ ದಿಡಗಿನಾಳ, ಶಹರ ಠಾಣೆಯ ಪಿಐ ನಾಗೇಶ ಕಾಡದೇವರಮಠ, ಪಿಎಸ್‌ಐಗಳಾದ ಬಾಬಾ ಎಂ., ಪ್ರಮೋದ ಎಚ್.ಜಿ, ಎಂ.ಆರ್.ಮಲ್ಲಿಗವಾಡ, ಐ.ಐ.ಮದರಖಂಡಿ ಹಾಗೂ ಸಿಬ್ಬಂದಿಗಳಾದ ಈರಣ್ಣ ಬುರ್ಜಿ, ಗಿರೀಶ ಚಿಕ್ಕಮಠ, ನಾಗರಾಜ ಗುಡಿಮನಿ, ಎಂ.ಸಿ.ಮಂಕಣಿ, ಬಿ.ಎಂ.ಪಠಾತ, ಮಹಾಂತೇಶ ವೈ. ಎಂ., ಆನಂದ ಬಡಿಗೇರ, ಲಕ್ಷ್ಮಣ ಲಮಾಣಿ, ಗಿರೀಶ ಬಿದರಳ್ಳಿ, ವಿ.ಎಚ್.ಚವರಡ್ಡಿ, ಬಸವರಾಜ ಸವಣೂರ, ವಿ.ಎಸ್.ಕುದರಿ, ರಮೇಶ ಕೋತಂಬ್ರಿ, ಉಷಾ ಎಂ.ಎಚ್., ಸಿಓಪಿ ಕಾರ್ಯಾಲಯದ ಟೆಕ್ನಿಕಲ್ ಸೆಲ್ ವಿಭಾಗದ ಸಿಬ್ಬಂದಿಗಳಾದ ಎಂ.ಎಸ್.ಚಿಕ್ಕಮಠ, ಆರ್.ಕೆ.ಬಡಂಗಕರ, ಆರ್.ಎಸ್.ಗೋಮಪ್ಪನವರ ಒಳಗೊಂಡ ತಂಡವು ಈ ಪತ್ತೆ ಕಾರ್ಯ ಮಾಡಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಪೊಲೀಸ್ ಆಯುಕ್ತ ರಾಜೀವ ಎಂ, ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ, ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ದಿಡಗಿನಾಳ, ಶಹರ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ಕಾಡದೇವರಮಠ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ: Actress; 8 ತಿಂಗಳ ಗರ್ಭಿಣಿಯಾಗಿದ್ದ 35 ವರ್ಷದ ನಟಿ ಹೃದಯಸ್ತಂಭನದಿಂದ ವಿಧಿವಶ