Advertisement

Gas Cylinder: ಗ್ಯಾಸ್ ಸಿಲಿಂಡ‌ರ್ ಸ್ಫೋಟಗೊಂಡು ಓರ್ವ ಮಹಿಳೆ ಮೃತ್ಯು… ನಾಲ್ವರಿಗೆ ಗಾಯ

01:30 PM Mar 20, 2024 | Team Udayavani |

ಧಾರವಾಡ : ಸಿಲಿಂಡ‌ರ್ ಸ್ಫೋಟಗೊಂಡು ಓರ್ವ ಮಹಿಳೆ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ತಾಲೂಕಿನ ಕಲ್ಲೆ ನಡೆದಿದೆ.

Advertisement

ಮಹಾದೇವಿ ವಗೆಣ್ಣವರ (30) ಎಂಬ ಮಹಿಳೆಯೇ ಈ ಘಟನೆಯಲ್ಲಿ ಸಾವನ್ನಪ್ಪಿದ ದುರ್ದೈವಿ. ಉಳಿದಂತೆ ಸುರೇಶ ವಗೆಣ್ಣವರ, ಶ್ರೀಧರ ವಗೆಣ್ಣವರ, ಚಿನ್ನಪ್ಪ ವಗೆಣ್ಣವರ ಹಾಗೂ ಗಂಗವ್ವ ವಗೆಣ್ಣವರ ಎಂಬುವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಿಗ್ಗೆ ಗ್ಯಾಸ್ ಲಿಕೇಜ್ ಆಗಿತ್ತು. ಏಕಾಏಕಿ ಸ್ಪಾರ್ಕ್ ಆಗಿ ಸಿಲಿಂಡ‌ರ್ ಸ್ಫೋಟಗೊಂಡಿದೆ. ಇದರಿಂದ ಮನೆ ತುಂಬ ಬೆಂಕಿ ಆವರಿಸಿ ಅನಾಹುತ ಸಂಭವಿಸಿದೆ. ಅಡುಗೆ ಮನೆಯಲ್ಲೇ ಇದ್ದ ಮಹಾದೇವಿ ಹೊರಗಡೆ ಬರಲಾಗದೇ ಅಲ್ಲೇ ಸಿಲುಕಿ ಸಾವನ್ನಪ್ಪಿದ್ದಾಳೆ. ಇದರಿಂದ ಮಹಾದೇವಿ ದೇಹ ಸಂಪೂರ್ಣ ಬೆಂದು ಹೋಗಿದೆ. ಬಾಕಿ ಉಳಿದವರು, ಹಾಗೋ ಹೀಗೋ ಮಾಡಿ ಹೊರ ಬಂದಿದ್ದಾರೆ. ಅವರಿಗೂ ಗಾಯಗಳಾಗಿವೆ. ಅಕ್ಕಪಕ್ಕವೇ ಎರಡೂರು ಸಿಲಿಂಡರ್ ಇದ್ದವು. ಆದರೆ ಅವುಗಳಿಂದ ಬೆಂಕಿ ಸ್ಫೋಟಗೊಂಡಿಲ್ಲ. ಇದರಿಂದ ಮತ್ತೊಂದು ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಇದನ್ನೂ ಓದಿ: Panaji: ಮಹದಾಯಿ ಉಳಿಸುವಲ್ಲಿ ಬಿಜೆಪಿ ಸಂಪೂರ್ಣ ವಿಫಲ: ಕಾಂಗ್ರೆಸ್ ಆರೋಪ

Advertisement

Udayavani is now on Telegram. Click here to join our channel and stay updated with the latest news.

Next