Advertisement

ಧಾರವಾಡ 84 ಜನರಲ್ಲಿ ಕೋವಿಡ್ ಪಾಸಿಟಿವ್ : ಐದು ಮಂದಿ ಸಾವು

10:07 PM Jul 21, 2020 | sudhir |

ಧಾರವಾಡ : ಜಿಲ್ಲೆಯಲ್ಲಿ ಮಂಗಳವಾರ 84 ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 2327 ಕ್ಕೆ ಏರಿಕೆಯಾಗಿದ್ದು, ಇದರ ಜೊತೆಗೆ ಮತ್ತೆ ಐದು ಜನ ಸೋಂಕಿತರು ಕೋವಿಡ್ ಗೆ ಬಲಿಯಾಗಿದ್ದಾರೆ.

Advertisement

ಸೋಂಕಿತರ ಪೈಕಿ ಗುಣಮುಖವಾಗಿ ಮಂಗಳವಾರ ಯಾರೂ ಬಿಡುಗಡೆಯಾದ ಕಾರಣ ಗುಣಮುಖರಾದವರ ಸಂಖ್ಯೆ 710
ಸೀಮಿತವಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 1544 ಕ್ಕೆ ಏರಿಕೆ ಕಂಡಿದೆ. ಇದರ ಮಧ್ಯೆ ಮತ್ತೆ ಐದು ಜನ ಮೃತಪಟ್ಟು,ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 73ಕ್ಕೆ ಏರಿಕೆಯಾಗಿದೆ, ಸೋಂಕಿತರ ಪೈಕಿ 23 ಜನರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.

ಜು.12 ರಂದು ಸೋಂಕು ಧೃಡಪಟ್ಟಿದ್ದ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 70 ವರ್ಷದ ಮಹಿಳೆ ಜು.14 ರಂದು ಮೃತಪಟ್ಟಿದ್ದು, ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದ 76 ವರ್ಷದ ವೃದ್ದ ಜು.15 ರಂದು, 66 ವರ್ಷದ ವೃದ್ದ ಜು.16 ರಂದು ಮೃತಪಟ್ಟಿದ್ದಾರೆ. ಇನ್ನೂ ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ಜು.16 ರಂದೇ ಮೃತಪಟ್ಟ 50 ವರ್ಷದ ಪುರುಷನಿಗೆ ಸೋಂಕು ಇರುವುದು ಈಗ ಧೃಡಪಟ್ಟಿದೆ. ಇನ್ನೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 91 ವರ್ಷದ ವೃದ್ದ ಮಹಿಳೆಗೆ ಜು.17 ರಂದು ಸೋಂಕು ಧೃಡಪಟ್ಟಿದ್ದು ಅವರು ಜು.19 ರಂದು ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next