Advertisement

ರುದ್ರಭೂಮಿ ಕಾಯಕಲ್ಪಕ್ಕೆ ಧರ್ಮಸ್ಥಳ ನೆರವು

12:58 AM Mar 10, 2024 | Team Udayavani |

ಬೆಳ್ತಂಗಡಿ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ರಾಜ್ಯಾದ್ಯಂತ 667 ಹಿಂದೂ ರುದ್ರ ಭೂಮಿಗಳನ್ನು ಅಭಿವೃದ್ಧಿಗೊಳಿಸಲಾ ಗಿದೆ ಎಂದು ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌ ತಿಳಿಸಿದ್ದಾರೆ.

Advertisement

ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹಿಂದೂ ಧರ್ಮೀಯರ ಶವ ಸಂಸ್ಕಾರವನ್ನು ವ್ಯವಸ್ಥಿತವಾಗಿ ನಡೆಸಲು ಪ್ರತೀ ಗ್ರಾಮದಲ್ಲೂ ಸೂಕ್ತ ಪರಿಕರ ಒದಗಿಸಲು ಸಾರ್ವಜನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿ ಯೋಜನೆ ಯನ್ನು ಪ್ರಾರಂಭಿಸಿದರು.

ಸ್ಥಳೀಯವಾಗಿ ರುದ್ರಭೂಮಿ ನಿರ್ವಹಣ ಸಮಿತಿ ಪ್ರಾರಂ ಭಿಸಿ, ನಿಗದಿತರುದ್ರಭೂಮಿಯಲ್ಲಿ ಶವ ದಹನಕ್ಕೆ ಬೇಕಾಗುವ ಸೌಲಭ್ಯವನ್ನು ಕಲ್ಪಿ ಸುವ ಮತ್ತು ನಿರ್ವಹಿಸುವ ಆಶಯ ನಮ್ಮದು ಎಂದರು.

2.50 ಲಕ್ಷ ರೂ. ವರೆಗೆ ನೆರವು
1992ರಲ್ಲಿ ಪ್ರಾರಂಭಗೊಂಡ ಈಕಾರ್ಯಕ್ರಮವು ಜನಪ್ರಿಯವಾಗಿದ್ದು, ರಾಜ್ಯದ ವಿವಿಧೆಡೆ ಸ್ಥಳೀಯರು ಶ್ರಮದಾನ, ಆರ್ಥಿಕ ನೆರವಿನಿಂದ ರುದ್ರಭೂಮಿ ನಿರ್ವಹಣೆಯಲ್ಲಿ ತೊಡ ಗಿದ್ದಾರೆ. ಕ್ಷೇತ್ರದಿಂದ ಅಗತ್ಯ ಪರಿಕರ, ಉಪಕರಣ ಅಳವಡಿಸಿಕೊಳ್ಳಲು 2.50 ಲಕ್ಷ ರೂ. ವರೆಗೆ ನೆರವು ನೀಡಲಾಗುತ್ತದೆ ಎಂದ ಅವರು, ಕ್ಷೇತ್ರದ ನೆರವಿನಿಂದ ಖರೀದಿಸಲಾಗುವ ದಹನ ಚೌಕಿಯನ್ನು ವಿಶೇಷ ಕಬ್ಬಿಣದಿಂದ ಮಾಡಲಾಗಿದೆ. ಇದರಲ್ಲಿ ಶವದಹನಕ್ಕೆ ಹೆಚ್ಚೆಂದರೆ 250 ರಿಂದ 300 ಕೆ.ಜಿ. ಕಟ್ಟಿಗೆ ಸಾಕು. ಸೌದೆ ಉಳಿತಾಯ ಮತ್ತು ಸ್ವಚ್ಛತೆಯನ್ನು ಕಾಪಾಡಲು ಇದು ಸಹಕಾರಿ ಎಂದರು.

ಈ ದಹನ ಚೌಕಿಯನ್ನು ಮಳೆ, ಬಿಸಿಲು, ಗಾಳಿಯಿಂದ ರಕ್ಷಿಸಲು ಸೂಕ್ತ ಛಾವಣಿ ನಿರ್ಮಿಸಿ, ಕಟ್ಟಿಗೆ ದಾಸ್ತಾನು, ಸ್ನಾನ, ಶೌಚದ ವ್ಯವಸ್ಥೆ, ಪೂಜಾ ಕೊಠಡಿಯ ವ್ಯವಸ್ಥೆ ಒದಗಿಸಲಾಗುತ್ತಿದೆ. ಕ್ಷೇತ್ರದಿಂದ ಪ್ರೇರ ಣೆ ಪಡೆದ ಅನೇಕ ಸ್ಥಳೀಯ ಸಂಸ್ಥೆಗಳು ತಮ್ಮೂರಿನಲ್ಲಿ ಉತ್ತಮ ಗುಣಮಟ್ಟದ ರುದ್ರಭೂಮಿಯನ್ನು ನಿರ್ಮಿಸಿವೆ. ಮುಖ್ಯವಾಗಿ ಹಿಂದೂ ರುದ್ರ ಭೂಮಿಗಳ ನಿರ್ವಹಣೆಯ ಬಗ್ಗೆ ಸ್ಥಳೀಯರಲ್ಲಿ ಹೊಣೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ಶಿವನ ಆವಾ ಸಸ್ಥಾನವಾದ ರುದ್ರಭೂಮಿಗೆತಕ್ಕ ಗೌರವವೂ ಪ್ರಾಪ್ತಿಯಾಗಿದ್ದು, ಶವ ಸಂಸ್ಕಾರವನ್ನು ಭಯ ರಹಿತವಾಗಿ, ಗೌರವಯುತವಾಗಿ ಮಾಡಲು ಇದ ರಿಂದ ಸಾಧ್ಯವಾಗಿದೆ ಎಂದರು.

Advertisement

ಡಾ| ಡಿ. ವೀರೇಂದ್ರ ಹೆಗ್ಗಡೆಯವರು 667 ರುದ್ರಭೂಮಿಗಳಿಗೆ 8.91ಕೋಟಿ ರೂ. ಮೊತ್ತ ನೀಡಿದ್ದಾರೆ. ಈ ಸಾಲಿನಲ್ಲೂ 45 ರುದ್ರಭೂಮಿಗಳ ಪುನಶ್ಚೇತನಕ್ಕೆ ನೆರವು ನೀಡಲಾಗಿದೆ.
-ಡಾ| ಎಲ್‌.ಎಚ್‌. ಮಂಜುನಾಥ್‌,
ಶ್ರೀ ಧ.ಗ್ರಾ.ಯೋ., ಕಾರ್ಯನಿರ್ವಾಹಕ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next