Advertisement

Elephant Death: ಶ್ರೀಕ್ಷೇತ್ರ ಧರ್ಮಸ್ಥಳದ ಆನೆ ಲತಾ ಇನ್ನಿಲ್ಲ

12:41 AM Mar 09, 2024 | Team Udayavani |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಳೆದ 50 ವರ್ಷಗಳಿಂದ ದೇವರ ಸೇವಾರೂಪದಲ್ಲಿದ್ದ ಲತಾ ಆನೆ (60) ಶುಕ್ರವಾರ ಅಲ್ಪಕಾಲದ ಅನಾ ರೋಗ್ಯದಿಂದ ಮೃತಪಟ್ಟಿದೆ.

Advertisement

ಕ್ಷೇತ್ರದಲ್ಲಿ ಪ್ರತಿವರ್ಷ ನೆರವೇರುವ ಲಕ್ಷ ದೀಪೋತ್ಸವ, ವರ್ಷಾವಧಿ ಜಾತ್ರೆ, ನಡಾವಳಿ ಸೇರಿದಂತೆ ಮೊದಲಾದ ವಿಶೇಷ ಸಂದರ್ಭಗಳಲ್ಲಿ ಗಾಂಭೀ ರ್ಯತೆ ಮೆರೆದಿದ್ದ ಲತಾ ಆನೆ ಉತ್ತಮ ಸೇವೆ ನೀಡಿ ಸೌಮ್ಯ ಸ್ವಭಾವದೊಂದಿಗೆ ಎಲ್ಲರ ಮುಕ್ತ ಪ್ರಶಂಸೆಗೆ ಪಾತ್ರವಾಗಿತ್ತು.

ಶುಕ್ರವಾರ ಬೆಳಗ್ಗೆ 11.20ರ ಸುಮಾರಿಗೆ ಮೃತಪಟ್ಟಿರುವುದು ಖಚಿತವಾಗಿದೆ. ಕ್ಷೇತ್ರದಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳ ಸಮಕ್ಷಮದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಜೆ ದಫನ ಮಾಡಲಾಯಿತು.

ಮಂಗಳೂರು ಎಸಿಎಫ್‌ ಶ್ರೀಧರ್‌, ಆರ್‌ಎಫ್‌ಒ ಮೋಹನ್‌ ಕುಮಾರ್‌, ಡಿಆರ್‌ಎಫ್‌ಒ ಹರಿಪ್ರಸಾದ್‌ ಸಹಿತ ಅರಣ್ಯ ಇಲಾಖೆ ವೈದ್ಯಾಧಿಕಾರಿ ಡಾ| ಯಶಸ್ವಿ, ಧರ್ಮಸ್ಥಳದ ಪಶುವೈದ್ಯಾಧಿಕಾರಿ ಡಾ| ಯತೀಶ್‌ ಕುಮಾರ್‌ ನೇತೃತ್ವ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next