Advertisement
ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹಿಂದೂ ಧರ್ಮೀಯರ ಶವ ಸಂಸ್ಕಾರವನ್ನು ವ್ಯವಸ್ಥಿತವಾಗಿ ನಡೆಸಲು ಪ್ರತೀ ಗ್ರಾಮದಲ್ಲೂ ಸೂಕ್ತ ಪರಿಕರ ಒದಗಿಸಲು ಸಾರ್ವಜನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿ ಯೋಜನೆ ಯನ್ನು ಪ್ರಾರಂಭಿಸಿದರು.
1992ರಲ್ಲಿ ಪ್ರಾರಂಭಗೊಂಡ ಈಕಾರ್ಯಕ್ರಮವು ಜನಪ್ರಿಯವಾಗಿದ್ದು, ರಾಜ್ಯದ ವಿವಿಧೆಡೆ ಸ್ಥಳೀಯರು ಶ್ರಮದಾನ, ಆರ್ಥಿಕ ನೆರವಿನಿಂದ ರುದ್ರಭೂಮಿ ನಿರ್ವಹಣೆಯಲ್ಲಿ ತೊಡ ಗಿದ್ದಾರೆ. ಕ್ಷೇತ್ರದಿಂದ ಅಗತ್ಯ ಪರಿಕರ, ಉಪಕರಣ ಅಳವಡಿಸಿಕೊಳ್ಳಲು 2.50 ಲಕ್ಷ ರೂ. ವರೆಗೆ ನೆರವು ನೀಡಲಾಗುತ್ತದೆ ಎಂದ ಅವರು, ಕ್ಷೇತ್ರದ ನೆರವಿನಿಂದ ಖರೀದಿಸಲಾಗುವ ದಹನ ಚೌಕಿಯನ್ನು ವಿಶೇಷ ಕಬ್ಬಿಣದಿಂದ ಮಾಡಲಾಗಿದೆ. ಇದರಲ್ಲಿ ಶವದಹನಕ್ಕೆ ಹೆಚ್ಚೆಂದರೆ 250 ರಿಂದ 300 ಕೆ.ಜಿ. ಕಟ್ಟಿಗೆ ಸಾಕು. ಸೌದೆ ಉಳಿತಾಯ ಮತ್ತು ಸ್ವಚ್ಛತೆಯನ್ನು ಕಾಪಾಡಲು ಇದು ಸಹಕಾರಿ ಎಂದರು.
Related Articles
Advertisement
ಡಾ| ಡಿ. ವೀರೇಂದ್ರ ಹೆಗ್ಗಡೆಯವರು 667 ರುದ್ರಭೂಮಿಗಳಿಗೆ 8.91ಕೋಟಿ ರೂ. ಮೊತ್ತ ನೀಡಿದ್ದಾರೆ. ಈ ಸಾಲಿನಲ್ಲೂ 45 ರುದ್ರಭೂಮಿಗಳ ಪುನಶ್ಚೇತನಕ್ಕೆ ನೆರವು ನೀಡಲಾಗಿದೆ.-ಡಾ| ಎಲ್.ಎಚ್. ಮಂಜುನಾಥ್,
ಶ್ರೀ ಧ.ಗ್ರಾ.ಯೋ., ಕಾರ್ಯನಿರ್ವಾಹಕ ನಿರ್ದೇಶಕ