Advertisement

ಎಎಪಿಗೆ ಸೇರ್ಪಡೆಯಾದ ಧರಂಸಿಂಗ್‌ ಮೊಮ್ಮಗಳು

03:16 PM Apr 12, 2022 | Team Udayavani |

ಮೈಸೂರು: ಮಾಜಿ ಮುಖ್ಯಮಂತ್ರಿ ಧರಂಸಿಂಗ್‌ ಅವರ ಮೊಮ್ಮಗಳಾದ ಧರ್ಮಶ್ರೀ ಅಮ್‌ ಆದ್ಮಿ ಪಕ್ಷ ಸೇರ್ಪಡೆಯಾದರು. ಸೋಮವಾರ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಅವರು, ಧರ್ಮಶ್ರೀ ಅವರಿಗೆ ಎಎಪಿ ಟೋಪಿ ತೊಡಿಸಿ, ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.

Advertisement

ಬಳಿಕ ಮಾತ ನಾಡಿದ ಪೃಥ್ವಿರೆಡ್ಡಿ, ಪಂಜಾಬ್‌ ಚುನಾವಣೆಗೂ ಮುನ್ನ ಎಎಪಿ ಕೇವಲ ದೆಹಲಿಗೆ ಮಾತ್ರ ಸೀಮಿತ, ಬೇರೆ ರಾಜ್ಯಗಳಲ್ಲಿ ಭ್ರಷ್ಟ ವ್ಯವ ಸ್ಥೆಯ ವಿರುದ್ಧ ಗೆಲ್ಲಲು ಸಾಧ್ಯವಿಲ್ಲ ಎಂದೇ ಭಾವಿ ಸಿದ್ದರು. ಆದರೆ, ಪಂಜಾಬ್‌ ಗೆಲುವು ಜನಾಂ ದೋಲನವಾಗಿ, ರಾಜಕೀಯ ಕ್ರಾಂತಿ ಯಾಗಿ ಬದಲಾಯಿತು. ಚುನಾವಣೆಯಲ್ಲಿ 13 ವೈದ್ಯರು, 7 ಮಂದಿ ವಕೀಲರು ಗೆಲುವು ಸಾಧಿಸಿ ದ್ದು, ಮೊಬೈಲ್‌ ರಿಪೇರಿ ಮಾಡುವ ವ್ಯಕ್ತಿ ಮುಖ್ಯ ಮಂತ್ರಿಯನ್ನೇ ಸೋಲಿಸಿದ್ದಾರೆ ಎಂದರು.

ಮೈಸೂರು ಭಾಗದಲ್ಲಿ ಮತದಾರರು ಮೂರೂ ಪಕ್ಷಗಳಿಗೆ ಸಾಕಷ್ಟು ಅವಕಾಶ ಕೊಟ್ಟಿದ್ದಾರೆ. ಆದರೆ, ಜನರ ತೆರಿಗೆ ಹಣ ವಾಪಸ್‌ ಬಂದಿದೆಯೇ? ಮೂಲ ಸೌಲಭ್ಯ ಸಿಕ್ಕಿದೆಯೇ? ರಾಜ್ಯದ ಶೇ.64ರಷ್ಟು ಶಾಲೆಗಳಲ್ಲಿ ಶೌಚಾಲಯ ಇಲ್ಲ. ಕುಡಿಯುವ ನೀರು, ವಿದ್ಯುತ್‌ ಸಮರ್ಪಕವಾಗಿಲ್ಲ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ಸಾರ್ವಜನಿಕರು ಬದಲಾವಣೆ ಬಯಸಿದ್ದಾರೆ. ಪರ್ಯಾಯ ಪಕ್ಷದತ್ತ ಮುಖ ಮಾಡಿದ್ದಾರೆ. ಬದಲಾವಣೆ ಬಯಸುವವರು, ಅಭಿವೃದ್ಧಿ ಪರವಾಗಿರುವವರು ಎಎಪಿಯೊಂದಿಗೆ ಕೈಜೋಡಿಸಿ ಎಂದರು.

ಎಎಪಿ ಜಿಲ್ಲಾಧ್ಯಕ್ಷೆ ಮಾಳವಿಕಾ ಗುಬ್ಬಿವಾಣಿ ಮಾತನಾಡಿ, ಪಂಜಾಬ್‌ ಚುನಾವಣೆ ಬಳಿಕ ಎಎಪಿ ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವವರು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಪಕ್ಷದ ಹೆಬ್ಟಾಳಿನಲ್ಲಿರುವ ಕಚೇರಿಯಲ್ಲಿ ಹಲವರು ಪಕ್ಷ ಸೇರುವರು ಎಂದು ತಿಳಿಸಿದರು.

ಎಎಪಿ ಅಭಿವೃದ್ಧಿ ಪರವಾಗಿದೆ. ಬೇರೆ ಪಕ್ಷಗಳು ಅಭಿವೃದ್ಧಿ ಕಡೆಗಣಿಸಿ ಧರ್ಮ, ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿವೆ. ದೆಹಲಿ ಮಾದರಿಯಲ್ಲಿ ರಾಜ್ಯವೂ ಅಭಿವೃದ್ಧಿಯಾಗಬೇಕು. ಭ್ರಷ್ಟಾಚಾರ ಮುಕ್ತವಾಗಿ ಆಡಳಿತ ನೀಡುತ್ತಿರು ವುದರಿಂದ, ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ಕಲ್ಪಿಸುತ್ತಿರುವುದರಿಂದ ಎಎಪಿ ಸೇರಿದ್ದೇನೆ.ಧರ್ಮಶ್ರೀ, ಧರಂಸಿಂಗ್‌ ಮೊಮ್ಮಗಳು

Advertisement
Advertisement

Udayavani is now on Telegram. Click here to join our channel and stay updated with the latest news.

Next