Advertisement
ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಆಶಯದಂತೆ ಮಠಕ್ಕೆ ಬರುವ ಭಕ್ತರ ಆರೋಗ್ಯ ತಪಾಸಣೆ ಮತ್ತು ಶುಶ್ರೂಷೆಗೆ ಸುಸಜ್ಜಿತ ಧನ್ವಂತರಿ ಕ್ಲಿನಿಕ್ ತೆರೆಯಲಾಗಿದೆ. ಇಲ್ಲಿ ಭಕ್ತರು, ಆವಶ್ಯಕತೆಯುಳ್ಳವರಿಗೆ ಸೇವೆ ದೊರಕುತ್ತಿದೆ.
ಮಠದ ಪಟ್ಟದ ಆನೆ ಲಾಯವಿದ್ದ 700 ಚ.ಅಡಿ ಜಾಗದಲ್ಲಿ ಸುಮಾರು 10 ಲ.ರೂ. ವೆಚ್ಚದಲ್ಲಿ ಧನ್ವಂತರಿ ಚಿಕಿತ್ಸಾಲಯ ನಿರ್ಮಿಸಲಾಗಿದೆ. ಕ್ಲಿನಿಕ್‌ನಲ್ಲಿ ಮೆಡಿಕಲ್ ರೂಮ್, ವೈದ್ಯರ ಕೊಠಡಿ, ಲ್ಯಾಬ್, ರೋಗಿಗಳ ನಿರೀಕ್ಷಣಾ ಕೊಠಡಿಗಳಿವೆ. ಶ್ರೀ ಕೃಷ್ಣ ಚಿಕಿತ್ಸಾಲಯ ಸ್ಥಳಾಂತರ
ಅನೇಕ ವರ್ಷದಿಂದ ರಥಬೀದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಕೃಷ್ಣ ಚಿಕಿತ್ಸಾಲಯವನ್ನು ಹೊಸದಾಗಿ ನಿರ್ಮಿಸಲಾದ ಧನ್ವಂತರಿ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗಿದೆ.
Related Articles
ಈ ಚಿಕಿತ್ಸಾಲಯದಲ್ಲಿ ಬರುವವರಿಗೆ ಚಿಕಿತ್ಸೆ ಒದಗಿಸಲು ದಿನವಿಡೀ ವೈದ್ಯರ ಸೇವೆ ಲಭ್ಯವಿರಲಿದೆ. ಉಡುಪಿ ಸುತ್ತಮುತ್ತಲಿನ ತಜ್ಞ ವೈದ್ಯರು ವಾರಕ್ಕೊಮ್ಮೆ ಇಲ್ಲಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ವೈದ್ಯರು ಯಾವ ದಿನ ಲಭ್ಯರಿರುತ್ತಾರೆ ಎಂಬ ಮಾಹಿತಿಯನ್ನು ನೋಟಿಸ್ ಬೋರ್ಡ್‌ನಲ್ಲಿ ತಿಳಿಸುವ ಉದ್ದೇಶವಿದೆ.
Advertisement
ತೃಪ್ತಿ ಕುಮ್ರಗೋಡು