Advertisement

Kollywood: ʼಇಳಯರಾಜʼನ ಬಯೋಪಿಕ್‌ನಲ್ಲಿ ನಟ ಧನುಷ್; ಫಸ್ಟ್‌ ಲುಕ್‌ ಔಟ್

04:41 PM Mar 20, 2024 | Team Udayavani |

ಚೆನ್ನೈ: ಸದಾ ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚುವ ನಟ ಧನುಷ್‌ ಅವರ ಮುಂದಿನ ಸಿನಿಮಾದ ಟೈಟಲ್‌ ಅನೌನ್ಸ್‌ ಆಗಿದೆ.

Advertisement

ಸಂಗೀತ ದಿಗ್ಗಜ ಇಳಯರಾಜ ಅವರ ಜೀವನ ಆಧಾರಿತ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ಧನುಷ್‌ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಈ ಹಿಂದೆ ಕಾಲಿವುಡ್‌ ನಲ್ಲಿ ಹರಿದಾಡಿತ್ತು. ಈ ಸಿನಿಮಾ ಬರುವುದು ಅಧಿಕೃತವಾಗಿದೆ. ಅದರಂತೆ ಸಿನಿಮಾದ ಟೈಟಲ್‌ ಹಾಗೂ ಫಸ್ಟ್‌ ಲುಕ್‌ ಪೋಸ್ಟರ್‌ ರಿವೀಲ್ ಆಗಿದೆ. ‌

ಧನುಷ್‌ ಪ್ಯಾನ್‌ ಇಂಡಿಯಾ ʼ ರಾಯನ್ʼ, ʼಕುಬೇರʼ ಸಿನಿಮಾವನ್ನು ಇತ್ತೀಚೆಗೆ ಅನೌನ್ಸ್‌ ಮಾಡಿದ್ದಾರೆ. ಈ ನಡುವೆ ಇಳಯರಾಜ ಅವರ ಬಯೋಪಿಕ್‌ ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌ ಮಾಡಿದ್ದಾರೆ. ಕನಸು ಹೊತ್ತುಕೊಂಡು, ಹೆಗಲಿನಲ್ಲಿ ಬ್ಯಾಗ್‌ ಹಿಡಿದುಕೊಂಡು ನಿಂತಿರುವ ಪೋಸ್ಟರ್‌ ವೊಂದನ್ನು ಹಂಚಿಕೊಳ್ಳಲಾಗಿದೆ. ಪೋಸ್ಟರ್‌ ಕೆಳಗೆ ʼಕಿಂಗ್‌ ಆಫ್‌ ಮ್ಯೂಸಿಕ್‌ʼ ಎಂದು ಬರೆಯಲಾಗಿದೆ.

ಸಿನಿಮಾಕ್ಕೆ ಸಂಗೀತ ದಿಗ್ಗಜ ʼಇಳಯರಾಜʼ ನೆಂದೇ ಟೈಟಲ್‌ ಇಡಲಾಗಿದೆ. ಟೈಟಲ್‌ ರೋಲ್‌ ನಲ್ಲಿ ಧನುಷ್‌ ಕಾಣಿಸಿಕೊಳ್ಳಲಿದ್ದು, ಇಳಯರಾಜ ಅವರ ಆರಂಭಿಕ ದಿನಗಳು ಹಾಗೂ ಸಂಗೀತ ಪಯಣದ ಕಥೆಯನ್ನು ಸಿನಿಮಾದಲ್ಲಿ ತೋರಿಸಲಾಗುತ್ತದೆ.  ಸಿನಿಮಾಕ್ಕೆ ಈ ಹಿಂದೆ  ಧನುಷ್‌ ಅವರ ʼಕ್ಯಾಪ್ಟನ್‌ ಮಿಲ್ಲರ್‌ʼ ಸಿನಿಮಾವನ್ನು ನಿರ್ದೇಶನ ಮಾಡಿದ ಅರುಣ್ ಮಾಥೇಶ್ವರನ್ ಅವರು ನಿರ್ದೇಶನ ಮಾಡಲಿದ್ದಾರೆ.

ವಿಶೇಷವೆಂದರೆ ತನ್ನ ಬಯೋಪಿಕ್‌ ಸಿನಿಮಾಕ್ಕೆ ಇಳಯರಾಜ ಅವರೇ ಸಂಗೀತ ಸಂಯೋಜನೆ ಮಾಡಲಿದ್ದಾರೆ.  ನೀರವ್ ಶಾ ಛಾಯಾಗ್ರಹಣ ಮಾಡಲಿದ್ದು, ಕನೆಕ್ಟ್ ಮೀಡಿಯಾ, ಪಿಕೆ ಪ್ರೈಮ್ ಪ್ರೊಡಕ್ಷನ್ ಮತ್ತು ಮರ್ಕ್ಯುರಿ ಮೂವೀಸ್ ಬ್ಯಾನರ್‌ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ.

Advertisement

ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಸಿನಿಮಾ ತೆರೆ ಕಾಣಲಿದೆ. ಸಿನಿಮಾದ ಇತರೆ ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next