ಚೆನ್ನೈ: ತಮಿಳು ನಟ ಧನುಷ್ ಮತ್ತು ಸೂಪರ್ ಸ್ಟಾರ್ ರಜಿನಿಕಾಂತ್ ಪುತ್ರಿ ಐಶ್ವರ್ಯಾ ತಮ್ಮ 18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ. ಡಿವೋರ್ಸ್ ಪಡೆಯುವ ಬಗ್ಗೆ ಧನುಷ್ ಸೋಮವಾರ ಅಧಿಕೃತ ಮಾಹಿತಿ ನೀಡಿದ್ದಾರೆ.
“18 ವರ್ಷಗಳ ಒಟ್ಟಿಗೆ ಸ್ನೇಹಿತರಂತೆ, ದಂಪತಿಗಳು ಪೋಷಕರಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ ಪ್ರಯಾಣವು ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿದೆ. ಇಂದು ನಾವು ನಮ್ಮ ದಾರಿಗಳು ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ. ಐಶ್ವರ್ಯ ಮತ್ತು ನಾನು ದಂಪತಿಗಳಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ” ಎಂದು ಧನುಷ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಹೊಸ ಸೌರಮಂಡಲ ಪತ್ತೆ ಹಚ್ಚಿದ ಖಗೋಳ ಸಂಶೋಧಕರೆನಿಸಿರುವ ಟಾಮ್ ಜಾಕೋಬ್ಸ್
ಐಶ್ವರ್ಯ ಕೂಡ ಅದೇ ಹೇಳಿಕೆಯನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. “ಶೀರ್ಷಿಕೆ ಅಗತ್ಯವಿಲ್ಲ … ನಿಮ್ಮ ತಿಳುವಳಿಕೆ ಮತ್ತು ನಿಮ್ಮ ಪ್ರೀತಿ ಮಾತ್ರ ಅಗತ್ಯ!” ಅವರು ಬರೆದುಕೊಂಡಿದ್ದಾರೆ.
Related Articles
ಧನುಷ್ ಮತ್ತು ಐಶ್ವರ್ಯ 18 ನವೆಂಬರ್ 2004 ರಂದು ವಿವಾಹವಾದರು. ದಂಪತಿಗೆ ಯಾತ್ರಾ ಮತ್ತು ಲಿಂಗ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಹಿರಿಯ ಪುತ್ರಿಯಾಗಿರುವ ಐಶ್ವರ್ಯ ಚಿತ್ರ ನಿರ್ಮಾಪಕಿಯಾಗಿ ಮತ್ತು ಹಿನ್ನೆಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.