Advertisement

ತಮ್ಮನ್ನೇ ತಾವೇ ಕಂಡು, ಖುಷಿ ಪಟ್ಟು ಆತ್ಮ ಮೋಹಿಗಳಾಗುವ ಧನುರ್‌ ರಾಶಿ

08:50 AM Sep 10, 2016 | |

ಧನುರ್‌ ರಾಶಿಯವರು ಸಾಮಾನ್ಯವಾಗಿ ಶೂರರೂ ಯೋಧರೂ ಆಗಿರುತ್ತಾರೆ. ಒಳಿತಿಗಾಗಿನ ವಿಚಾರದಲ್ಲಿ ಜಗತ್ತಿನ ಕುರಿತಾಗಿ ಇವರ ಕಾಳಜಿ ಹಾಗೂ ಕಕ್ಕುಲತೆಗಳು ಯಾವಾಗಲೂ ಅಪಾರ. ಪರರ ಬಗೆಗೆ ಇವರ ಗೌರವಾದರಗಳು ಅಧಿಕ. ಪ್ರತ್ಯಕ್ಷವಾಗಿ ನಿಷ್ಠುರತೆಯನ್ನು ಮೆರೆಯುವುದು ಇವರ ಸ್ವಭಾವವಾದರೂ ಇವರು ಅವಶ್ಯಕತೆ ಬಿದ್ದಾಗ ತಮ್ಮ ತೊಂದರೆಗಳನ್ನು ಲೆಕ್ಕಿಸದೆಯೇ ಸಹಾಯಕ್ಕೆ ಮುಂದಾಗುತ್ತಾರೆ. ಯಾವುದೇ ವಿಷಯದ ಕುರಿತು ಪೂರ್ತಿ ಸಮಸ್ಯೆಯೊಂದನ್ನು ತಿಳಿದು ಮುಂದಡಿ ಇಡಬೇಕಾದ ವಿಚಾರದಲ್ಲಿ ಹಿಂದೆ ಬೀಳಲಾರರು. ಕೆಲವು ಸಲ ತಮ್ಮನ್ನೇ ತಾವು ಕಂಡು ಖುಷಿ ಪಟ್ಟು ಆತ್ಮ ಮೋಹಿಯಾಗಿ ಕಾಣಿಸಿಕೊಳ್ಳುತ್ತಾರೆ. ಇವರಿಗೆ ಸಾಮಾನ್ಯವಾಗಿ ರೋಗದ ಬಾಧೆ ತಟ್ಟಲಾರದು. ಆದರೆ ದೇಹದ ಸ್ಥೂಲತೆ ಜಾಸ್ತಿಯಾಗಿ ಮಧುಮೇಹ ಅಥವಾ ರಕ್ತದೊತ್ತಡಳು ಇವರನ್ನು ಬಾಧಿಸಲು ಕಾರಣವಾಗಬಹುದು. ತೀರಾ ಒತ್ತಡದ ಸಂದರ್ಭದಲ್ಲಿ ಮುಂಗೋಪದಿಂದ ವರ್ತಿಸುವ 
ರೀತಿ ಇವರ ದೌರ್ಬಲ್ಯವಾಗುತ್ತದೆ. ಒಳಗಿರುವ ಕೋಪವನ್ನು ತಟ್ಟೆಂದು ಹೊರಚೆಲ್ಲುವುದು ಬಿಟ್ಟರೆ ಯಾವುದೇ ರೀತಿಯ ಕೆಟ್ಟದ್ದು ಮಾಡಬೇಕೆನ್ನುವ ದ್ವೇಷವನ್ನು ತೋರಲಾರರು. ಬಚ್ಚಿಡಲಾರರು. ಗುರುದಶಾಕಾಲದಲ್ಲಿ ರಾಜಯೋಗಗಳು ಸಂಭವಿಸಲು ಇವರ ಜಾತಕದ ಪ್ರಕಾರ ಉತ್ತಮ ಸಂದರ್ಭವಾಗುತ್ತದೆ. ಮಾಟಮಂತ್ರಗಳು ಇವರಿಗೆ ಯಾರೂ ಇವರ ವಿರುದ್ಧ ಕೃತ್ರಿಮಗಳನ್ನು ಮಾಡಿಸಿದ್ದಾರೋ ಅವರಿಗೇ ತಿರುಗಿ ಹೋಗಿ ಬಡಿಯುತ್ತದೆ. 

Advertisement

ಭಾರತದ ಬಹು ಮುಖ್ಯ ರಾಜ್ಯವೊಂದರ ಮುಖ್ಯಮಂತ್ರಿಗಳಿಗೆ ವಿರೋಧಿಗಳು ಇಂಥ ಪ್ರಯೋಗವನ್ನು ಮಾಡಿಸಿದ್ದಾಗ ಕೃತ್ರಿಮ ಮಾಡಿಸಿದ ನಾಯಕರಿಗೆ ಹತ್ತಿರದ ಕುಟುಂಬ ಸದಸ್ಯರೊಬ್ಬರ ದಾರುಣ ಅಂತ್ಯಕ್ಕೆ ಇಂಥ ಪ್ರಯೋಗ ಕಾರಣವಾಗಿತ್ತು. ಜಾತಕವನ್ನು ಇನ್ನಿತರ ರೀತ್ಯಾ ವಿಶ್ಲೇಷಿಸಿಯೇ ಧನುರಾಶಿಯ ಜನರು ಕನಕ ಪುಷ್ಯರಾಗ ಧರಿಸಬೇಕೇ ವಿನಾ ಸುಖಾ ಸುಮ್ಮನೆ ಅಂದಕ್ಕೆ ಧರಿಸಲು ಹೋಗಬಾರದು. ಅನುಷ್ಠಾನದ ಕೊರತೆಯಿಂದ ತೊಂದರೆ ಎದ್ದೇಳಲು ಸಾಧ್ಯದೆ. ಕಪಟ, ವೃತ್ತಿ ಹಠಮಾರಿತನ, ಅಸೂಯೆಗಳು ಕುಜಗ್ರಹದ ವಿಷಮ ಸಂಯೋಜನೆಯ ಕಾರಣವಾಗಿ ಇವರಿಗೆ ಒದಗಿಬರಲು ಸಾಧ್ಯವಾಗಿ ರಾಹುದಶಾಕಾಲದಲ್ಲಿ ತೀವ್ರವಾದ ಕಷ್ಟಕ್ಕೆ ಸಿಲುಕುತ್ತಾರೆ.

ಗುರುಗ್ರಹದ ಬಲಾಡ್ಯತೆ ಮತ್ತು ಧನುರ್‌ರಾಶಿ
 ಜಾತಕದಲ್ಲಿ ಗುರುಗ್ರಹ ಪ್ರಬಲವಾಗಿದ್ದಾಗ ವ್ಯಕ್ತಿತ್ವದಲ್ಲಿನ ಘನತೆಗೆ ವಿದ್ಯೆಯ ಮೂಲಕವೂ, ವಿದ್ಯೆಯ ಕಾರಣದಿಂದಾಗಿ ವಿನಯವೂ ಅರ್ಥಪೂರ್ಣವಾಗುತ್ತದೆ. ಸಂಪನ್ನತೆ ಒದಗಿಬರುತ್ತದೆ. ಸಾಮಾನ್ಯವಾಗಿ ಘನಪಾಟಿತನವು ಶಿಖರಗೊಳ್ಳಬೇಕಾದರೆ ಗುರುಗ್ರಹದ ಪ್ರಾಭಲ್ಯ ಅತ್ಯವಶ್ಯಕ. ನಮ್ಮ ಈ ಹಿಂದಿನ ಪ್ರದಾನ ಮಂತ್ರಿ ಮನಮೋಹನ ಸಿಂಗ್‌ ಅಧಿಕಾರದಲ್ಲಿದ್ದಾಗ ಗೃಹಖಾತೆ, ಆರ್ಥಿಕ ಖಾತೆಗಳ ಮಂತ್ರಿಗಳಾಗಿದ್ದ ಚಿದಂಬರಂ ಧನುರಾಶೀಯ ಜಾತಕದವರು. ಚಂದ್ರ ಬೃಹಸ್ಪತಿ ಕೇಂದ್ರ ಯೋಗಾರೂಢರಾಗಿದ್ದ ಅವರು ಯಾವಾಗಲೂ ಹಿಡಿದ ಕೆಲಸ ಕೈಬಿಡದ ಚಾಲಾಕಿತನ ಪ್ರದರ್ಶಿಸಲು ಗುರುಗ್ರಹದ ಹಾಗೂ ಚಂದ್ರನ ಕಾರಣದಿಂದಾಗಿ ಸಾಧ್ಯವಾಗುತ್ತಿತ್ತು. ಆದರೆ ಧನುರಾಶಿಯವರಾದ ಅವರ ಜಾತಕದ ದೊಡ್ಡ ತೊಂದರೆ ಚಂದ್ರನನ್ನು ನಿರಂತರವಾಗಿ ಕೆಣಕುತ್ತಲೇ ಇದ್ದ ಕೇತುವಿನಿಂದಾಗಿ.  ಸುಖಸ್ಥಾನದಲ್ಲಿ ಪರಸ್ಪರರನ್ನು ಘಾತಿಸುತ್ತಲೇ ಇದ್ದ ಮಂಗಳ ಶನಿ ರಾಹುಗಳಿಂದಾಗಿ ತಾಳ್ಮೆಯನ್ನು ಪ್ರದರ್ಶಿಸುವಲ್ಲಿ ಅದರಲ್ಲೂ ವಿರೋಧಿಗಳನ್ನು ಉದ್ದೇಶಿಸಿ ಸಂಹನಿಸುವಾಗ ಮುಖ್ಯವಾಗಿ ಹೊಂದಿರಬೇಕಿದ್ದ ಶಾಂತತೆಯನ್ನು  ಪ್ರದರ್ಶಿಸುವಲ್ಲಿ ತೊಂದರೆ ಉದ್ಭವಿಸುತ್ತಿತ್ತು. ಅತ್ಯದ್ಭುತ ವಾಕಾjಣ್ಮೆ ಇದ್ದತ್ತಾದರೂ ತಮಿಳುನಾಡಿನ ಜನರನ್ನು  ತನ್ನ ನಾಯಕತ್ವದಲ್ಲಿ ಎಂಜಿಆರ್‌, ಕರುಣಾನಿಧಿ ಮೂಪನಾರ್‌ ಜಯಲಲಿತಾ ಮಾದರಿಯಲ್ಲಿ ಸೆಳೆಯಲು ಸಾಧ್ಯವಾಗಲಿಲ್ಲ.ಅರ್ಥಶಾಸ್ತ್ರಜ್ಞರಾಗಿ ಮಿಂಚಲು ಗುರುಚಂದ್ರರ ಜೊತೆ ಸೂರ್ಯನ ದಿಕºಲ ಶಕ್ತಿ ಕೂಡಿಸಿ ಕೊಟ್ಟಿತಾದರೂ ತನ್ನ ಪಾರದರ್ಶಕ ವ್ಯಕ್ತಿತ್ವವನ್ನು ಶ್ರುತಪಡಿಸುವಲ್ಲಿ ವಿರೋಧಿಗಳ ಕೈಗೆ ಪ್ರದರ್ಶನಾರ್ಹವಾದ ವಿಚಾರಗಳ ಗ್ರಾಸ ಒದಗಿಸುತ್ತಲೇ ಫ‌ಲರಾಗುತ್ತಿದ್ದರು.
ಯುಪಿಎ ಸರಕಾರದ ಕೊನೆಯ ದಿನಗಳಲ್ಲಿ ವಿರೋಧ ಪಕ್ಷಗಳು ಚಿದಂಬರಂ ಶುದ್ಧ ಹಸ್ತದ ಬಗ್ಗೆ ಟೀಕೆ ನಡೆಸುತ್ತಲೇ ಬಂದಿದ್ದನ್ನು ಹಲವು ರೀತಿಯ ಖಾರವಾದ ಆರೋಪಗಳನ್ನು ಹೊರಿಸುತ್ತಲೇ ಬಂದಿದ್ದು ಈಗ ಇತಿಹಾಸ. ತನ್ನದು ಶುದ್ಧ ವ್ಯಕ್ತಿತ್ವ ಎಂಬುದನ್ನು ಪ್ರತಿಪಾದಿಸುತ್ತಲೇ ಬಂದ ಚಿದಂಬರಂ ವಿರೋಧಿಗಳ ಟೀಕೆಗಳಿಗೆ, ಮಾತಿನ ಪ್ರಹಾರಗಳಿಗೆ ತತ್ತರಿಸಿದ ಸ್ಥಿತಿಯಂತೂ ಇತ್ತು. ನಾವೆಲ್ಲಾ ಈ ಬಗ್ಗೆ ಓದುತ್ತಲೇ ಬಂದಿದ್ದೇವೆ. ಸಾಡೆಸಾತಿ ಕಾಟ 2014 ರ ಹೊತ್ತಿಗೆ ಸುತ್ತಿಕೊಂಡಿರುವುದರಿಂದ ಇವರು ಪ್ರತಿನಿಧಿಸುತ್ತಿದ್ದ ಯುಪಿಎ ಸರ್ಕಾರ ಬಿಜೆಪಿಯ ಎದುರು ನೆಲಕಚ್ಚಿತ್ತು. ಗೃಹ ಮಂತ್ರಿಗಳಾಗಿ ಇವರ ಅನೇಕ ರೀತಿಯ ಕಾರ್ಯ ವೈಖರಿಗಳನ್ನು ಬಿಜೆಪಿ ಸರ್ಕಾರದ ಆಡಳಿತದ ಪ್ರಸ್ತುತ ಸಂದರ್ಭದಲ್ಲಿ ರಾಜಕೀಯ ವಿಶ್ಲೇಷಕರು ಹಾಗೂ ಒದಗಿ ಬರುತ್ತಿರುವ ಮಾಹಿತಿಗಳು ಅನೇಕ ರೀತಿಯಲ್ಲಿ ಪ್ರಶ್ನಿಸುತ್ತಲೇ ಇವೆ. ಇವರ ಧನುಸ್ಸು ರಾಶಿಯಲ್ಲಿನ ಚಂದ್ರನೊಂದಿಗೆ ಕುಜಗ್ರಹವು ನಿರ್ಮಿಸಿದ ಶಶಿಮಂಗಳ ಯೋಗವು ಇನ್ನೂ ಇವರ ಪಾಲಿಗೆ ಇರುವ ಐದೂಕಾಲು ವರ್ಷಗಳ ಸಾಡೇಸಾತಿ ಸಂದರ್ಭದಲ್ಲಿ ಮಾನಸಿಕ ಶಾಂತಿಗೆ ಕೊರತೆಯಾಗುವ ಬಾಣಗಳನ್ನು ಪ್ರಹಾರ ಮಾಡಿಸಿಕೊಳ್ಳಲು ಚಿದಂಬರಂಗೆ ಒತ್ತಡದಲ್ಲಿಯೇ ಇಟ್ಟು ಇಕ್ಕಟ್ಟಿಗೆ ಸಿಲುಕಿಸುತ್ತದೆ. 

ಭೋಗವನ್ನು, ಪಾರಮಾರ್ಥಿಕವನ್ನೂ ಬೆಸೆಯುವ ಧನುರಾಶಿಯ ಚಂದ್ರ
ಪ್ರಶ್ನಾರ್ಹವಾದ ಪಂಥವೊಂದನ್ನು ಪ್ರತಿಪಾದಿಸಿ ಸಂಭೋಗದಿಂದ ಸಮಾಧಿಯ ತನಕ ಎಂಬ ಜೀವನದ ಸಂದರ್ಭದ ಕಾಮ ಹಾಗೂ ಆಧ್ಯಾತ್ಮಿಕ ಚಿಂತನೆಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಿದ ರಜನೀಶ್‌ ಉಫ್ì ಓಶೋ ತನ್ನ ಜೀವಿತದ ಕಾಲದಲ್ಲಿ ದಂತಕತೆಯಾದವರು. ಶುಕ್ರ ಮತ್ತು ಕುಜರ ಯುತಿ ಅದೂ ಅಷ್ಟಮ ಸ್ಥಾನದಲ್ಲಿ, ಅದೂ ಚಂದ್ರನ ಜೊತೆಗೆ ಶನೈಶ್ಚರನೂ ಅಷ್ಟಮವನ್ನು ತನ್ನ ಉಪಸ್ಥಿತಿಯಿಂದಾಗಿ ಸಂವೇದಿಸಿದಾಗ ಜಾnನವನ್ನು ಒದಗಿಸುವ ಉತ್ಛ ಗುರು ಯಾವುದನ್ನೂ ಮುಚ್ಚಿಡದ ಸ್ಥಿತಿಯನ್ನು ಬುಧಚಂದ್ರರ ಮೂಲಕ ಹರಳು ಗಟ್ಟಿಸುತ್ತಾನೆ. ಓಶೋ ಕಾಮದ ಬಗ್ಗೆ ಎಗ್ಗಿರದ ಒಂದು ರೀತಿಯ ಮುಕ್ತ ಸ್ಥಿತಿಯನ್ನು ಪ್ರತಿಪಾದಿಸಿದರು. ದುಃಸ್ಥಾನಗಳ ಅಧಿಪತಿಗಳಾದ ಚಂದ್ರ ಹಾಗೂ ಗುರುಗ್ರಹಗಳು ಹಿಂಜರಿಕೆ ಇರದ ಅಂಶಗಳನ್ನು ಕಾಮದ ಬಗೆಗೆ ಕೂಡುವ ಹೆಣ್ಣೂಗಂಡುಗಳು ನಡೆಸುವ ಸಂಭೋಗದ ಬಗೆಗೆ ಜೀವಕ್ಕೆ ಅಂತಿಮ ಭಾಗ ಆಗಲೇ ಬೇಕಾದ ಸಾವಿನ ಬಗೆಗೆ ಓಶೋರಿಂದ ಧೈರ್ಯದಿಂದ ಬೆಸೆದವು. ಸರಿಯೋ ತಪ್ಪೋ ಓಶೋ ಒಟ್ಟು ಐದು ಗ್ರಹಗಳ ಸಂವೇದನೆಯಿಂದ ಅಳುಕಿರದೆ ಕಾಮದ ವಿಶ್ಲೇಷಣೆ, ಭೋಗದ ಬಗೆಗಿನ ಅಭೀಪ್ಸೆಗೆ ಮುಕ್ತವಾಗಿ ತೆರೆದಿಟ್ಟ ಹೆಣ್ಣುಗಂಡುಗಳಿಗಾಗಿ ನಡೆಸಿದರು. ಹಿಂದೆ ಚಾರ್ವಾಕರು ಬದುಕಿನ ಕ್ಷಣಿಕತೆಯ ಬಗ್ಗೆ ತೆರೆದ ಮನಸ್ಸಿನಿಂದ ಮಾತಾಡಿ ಸನಾತನಿಗಳಿಂದ ಕ್ರೋಧಕ್ಕೆ ತುತ್ತಾಗಿದ್ದರೆ ಓಶೋಗೆ ವಾಕ್‌ ಸ್ವಾತಂತ್ರ್ಯದ ಅಪ್ಪಟ ಪ್ರಜಾಸತ್ತೆಯ ಹಿನ್ನೆಲೆಯಲ್ಲಿ ಅನಿಸಿದ್ದನ್ನು ತಿಳಿಸಲು ತಡೆ ಇರಲಿಲ್ಲ. ಆದರೂ ಧನುರ್‌ ರಾಶಿಯಲ್ಲಿ ಶನೈಶ್ಚರನ ಸೇರ್ಪಡೆಯಾದಾಗ ಸುಖಾಧಿಪತಿಗೆ ಗಟ್ಟಿತನದ್ದರೆ ಲೈಂಗಿಕ ವಿಚಾರಗಳಲ್ಲಿ ಹಿಂಜರಿಕೆ ಬರಲು ಸಾಧ್ಯವೇ ಇಲ್ಲ. ಯಾವುದನ್ನು ಮುಚ್ಚಿಡುವುದಕ್ಕೆ ಅನ್ಯರು ತಡಕಾಡುತ್ತಾರೋ ಅದನ್ನು ಬಿಚ್ಚಿಡಲು ಓಶೋರಂಥ ಧನುರಾಶಿಯ ಜಾತಕದವರು ಕ್ರಿಯಾಶೀಲರಾಗುತ್ತಾರೆ.

ಸೌಂದರ್ಯ ಮತ್ತು ಧನುರಾಶಿಯ ಚಂದ್ರ
ಭುವನ ಸುಂದರಿ ಐಶ್ವರ್ಯ ರೈ ಬಚ್ಚನ್‌ ಧನುರಾಶಿಯವರು. ಭಾಗ್ಯವನ್ನು ನೋಡಿದ ಬುಧನು ಐಶ್ವರ್ಯಾ ಅವರನ್ನು ವ್ಯಕ್ತಿತ್ವದ ವಿಚಾರದಲ್ಲಿ ಚೆಲ್ಲುಚೆಲ್ಲಾಗಿ ಆಡದಿರಲು ಒಂದು ತೂಕವನ್ನು ಒದಗಿಸುತ್ತಾನೆ. ಆದರೆ ಧನುರಾಶಿಯ ಚಂದ್ರನ, ರಾಹುದೋಷ, ಗುರುಗ್ರಹದ ನೀಚ ಸ್ಥಿತಿಯಿಂದಾಗಿ ಐಶ್ವರ್ಯಾರನ್ನು ಪ್ರಶ್ನಾರ್ಹ ವ್ಯಕ್ತಿತ್ವದ ಸ್ಥಿತಿಯಲ್ಲಿ ಹೊಯ್ದಾಡಿಸುತ್ತಾನೆ. ಇತ್ತೀಚೆಗೆ ಐಶ್ವರ್ಯಾ, ರಣಬೀರ್‌ ಕಪೂರ್‌ ಜೊತೆ ಮುಕ್ತವಾಗಿ ಅಭಿನಯಿಸಿದ ದೃಶ್ಯಾವಳಿಗಳನ್ನು ಮಾವ ಅಮಿತಾಬ್‌ ಆಕ್ಷೇಪಿಸಿದರು ಎಂಬ ಸುದ್ದಿ ಕೇಳಿದ್ದೇವೆ. ಸಲ್ಮಾನ್‌ ಖಾನ್‌ ವಿವೇಕ್‌ ಒಬೆರಾಯ್‌ ಮುಂತಾದವರ ಜೊತೆಗಿನ ಐಶ್ವರ್ಯ ಅವರ ಒಡನಾಟದ ಸ್ವರೂಪಗಳು ಪತ್ರಿಕೆಗಳಿಗೆ ಗ್ರಾಸವಾದವು. ಇಂಥ ಮನೋಸ್ಥಿತಿಯಲ್ಲೂ ಐಶ್ವರ್ಯ ದಿಟ್ಟೆಯಾಗುವ ಬಗೆಯನ್ನು ಒದಗಿಸಿದವನು ಬುಧನಾದರೂ, ಗುರು ಹಾಗೂ ಮಂಗಳರ ಪಾತ್ರ 
ವ್ಯಕ್ತಿತ್ವಕ್ಕೆ ಧಕ್ಕೆಯಾಗದಂಂತೆ  ಧನುರಾಶಿಯನ್ನು ಪ್ರಚೋದಿಸಿ ಶುಕ್ರನ ಮೂಲಕ ವೃತ್ತಿಯನ್ನು ಪ್ರವೃತ್ತಿಯನ್ನು ಸಂರಕ್ಷಿಸುತ್ತಾನೆ. ನಿಜಹೇಳಬೇಕೆಂದರೆ ಅಹಂ ಆಗಿಬಿಡಬಹುದಾದ 
ಸ್ವಭಾವವನ್ನು ಗುರು ನಿಯಂತ್ರಿಸದಿದ್ದರೆ ಐಶ್ವರ್ಯ ಜೀವನದ ಕಥೆ ಚಂದ್ರನಿಂದಾಗಿ ಬೇರೆ ಆಗುತ್ತಿತ್ತು. 

Advertisement

ಒಟ್ಟಿನಲ್ಲಿ ಧನುರಾಶಿಯವರಿಗೆ ಗುರು ಬೆಂಬಲಕ್ಕೆ ಸಿಕ್ಕಿದರೆ ಅಥವಾ ಜ್ಞಾನ, ಬೌದ್ಧಿಕತೆ ತರ್ಕ ಮೇಧಾಶಕ್ತಿ ಸರ್ವರ ಶ್ಲಾಘನೆ ದೊರಕುವ ಹಾಗೆ ಬದುಕಿನ ಓಟದ ರಭಸದಲ್ಲಿಯೂ ಸಮತೋಲನ ಪಡೆಯುತ್ತದೆ. ಚಂದ್ರನ ನಿಯಂತ್ರಣ ಅನ್ಯ ಗ್ರಹಗಳಿಂದ ಸಾಧ್ಯವಾಗದಿದ್ದರೆ ಬ್ರೇಕು ಇರದ ಗಾಡಿಯಂತೆ. ದೇವರೇ ಕಾಯಬೇಕಾಗುತ್ತದೆ. 

ಅನಂತಶಾಸ್ತ್ರೀ 

Advertisement

Udayavani is now on Telegram. Click here to join our channel and stay updated with the latest news.

Next