Advertisement

ಧನಯೋಗ, ರಾಜಯೋಗ ಸೌಭಾಗ್ಯ ಯೋಗಗಳು ಹೇಗೆ ಸಿದ್ಧಿಸುತ್ತದೆ?

09:30 PM Nov 18, 2016 | |

ಎಲ್ಲಾ ರೀತಿಯ ಯೋಗಗಳು ಜೀವನದ ಸಂದರ್ಭದಲ್ಲಿ ಇರುತ್ತದೆ. ವಿವಿಧ ಹೆಸರುಗಳಿಂದ ನಾವು ಅವುಗಳನ್ನು ಹೆಸರಿಸುತ್ತೇವೆ. ರಾಜಯೋಗ, ಧನಯೋಗ, ಬುಧಾದಿತ್ಯ ಯೋಗ ಗಜಕೇಸರಿ ಯೋಗ, ಧರ್ಮ ಕರ್ಮಾಧಿಪ ಯೋಗ, ಪಂಚಮಹಾಗ್ರಯ ಯೋಗ, ಲಕ್ಷಿ$¾ಯೋಗ, ಮೃದಂಗ ಯೋಗ, ಗೃಹಯೋಗ, ವಾಹನ ಯೋಗ, ಚತುಸ್ಸಾಗರ ಯೋಗ ವಿಪರೀತ ರಾಜಯೋಗ,  ನೀಚಭಂಗ ರಾಜಯೋಗ ಇತ್ಯಾದಿ. ಈ ಒಳ್ಳೆಯ ಯೋಗಗಳ ಜೊತೆಗೆ ಕಾಳಸರ್ಪ ಯೋಗ, ಕೇಮದ್ರುಮ ಯೋಗ, ಅರಿಷ್ಟ ಯೋಗ, ಪುತ್ರನಾಶ ಯೋಗ ಮಾತೃಶಾಪ ಪಿತೃಶಾಪ, ಸರ್ಪ ಶಾಪ, ಧನನಾಶ ಯೋಗ ಇತ್ಯಾದಿ ಇತ್ಯಾದಿ ಕೆಡುಕು ತರುವ ಯೋಗಗಳೂ ಇವೆ. ಮೃತ್ಯು ಯೋಗ, ಕಾರಾಗೃಹ ವಾಸ ಯೋಗ, ಅಂಗಛೇದನ ಯೋಗಗಳೂ ಕೆಟ್ಟ ಯೋಗಗಳೇ ಆಗಿವೆ. ಇವು ಜಾತಕದಲ್ಲಿ ಇರುತ್ತದೆ. ಈ ಎಲ್ಲಾ ಯೋಗಗಳೂ ಇರುತ್ತದೆ ಎಂದಲ್ಲ. ಯೋಗ ಇದ್ದ ಮಾತ್ರಕ್ಕೆ ಶಕ್ತಿಯನ್ನೂ ಯೋಗಗಳೂ ದಟ್ಟವಾಗಿ ಪಡೆದಾಗ ಈ ಯೋಗಗಳಿಗೆ ಒಂದು ಅರ್ಥ ಬರುತ್ತದೆ. ಒಳ್ಳೆಯ ಯೋಗಗಳಿಗೆ ಶಕ್ತಿ ಸಿಕ್ಕಿದಾಗ ಕೀರ್ತಿ ಸುಖಗಳು ಲಭ್ಯ. ದಿರ್ಯೋಗಗಳಿಗೆ ಶಕ್ತಿ ಸಿಕ್ಕಿದಾಗ ಕೆಟ್ಟ ಫ‌ಲಗಳು ಲಭ್ಯ. 

Advertisement

ಅಮೆರಿಕದ ಹೊಸ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ಜೋತಿಷಿಗೆ ಒಂದು ಸವಾಲಾಗುವ ರೀತಿಯಲ್ಲಿ ಸಧ್ಯ ಅಮೇರಿಕಾದ ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್‌ ಟ್ರಂಪ್‌ ಜನ್ಮ ಕುಂಡಲಿಯ ಯೋಗಗಳು ಗ್ರಹಗಳು ತಮ್ಮ ಆಸ್ತಿತ್ವ ಪಡೆದಿದೆ. ಕುಜನು ಅದ್ಭುತವಾಗಿದ್ದು ವ್ಯಕ್ತಿತ್ವಕ್ಕೆ ತೂಕ ಒದಗಿಸುತ್ತಾನೆ. ಆದರೆ ರಾಹುವು ದಿಕºಲ ಪಡೆದ ಸೂರ್ಯನನ್ನು ಸೂರ್ಯನ ವೈರಿಯ ಸ್ಥಾನದಲ್ಲಿ ಸುತ್ತುವರೆದ ಕಾರಣದಿಂದ ವಿಚಿತ್ರವಾದ ನಿಲುವು ನಡೆ ವ್ಯವಹಾರಗಳನ್ನು ಪ್ರದರ್ಶಿಸಿ ಕ್ಷಿಪ್ತರಾಗಿ ಕಾಣಿಸಿಕೊಳ್ಳುತ್ತಾರೆ. ಮಾತಿನ ಚಾತುರ್ಯ ಇದ್ದರೂ ಶನೈಶ್ಚರನ ದೃಷ್ಟಿಯಿಂದಾಗಿ ಪ್ರಕ್ಷುಬ್ಧವಾಗಿರುವ ಗುರು ಯೋಚನೆ ಮಾಡದೆಯೇ ಮಾತಾಡುವ ಶಕ್ತಿ ಒದಗಿಸುತ್ತಾನೆ. 2017 ರಿಂದ 2020ಆಗಸ್ಟ್‌ ತಿಂಗಳ ಒಳಗಡೆ ಸರ್ವೋತೃಷ್ಟ ಪ್ರಜಾಸತ್ತೆಯ ಅನೇಕ ಸಮಸ್ಯೆಗಳಿದ್ದರೂ ಅತ್ಯಂತ ಬಲಾಡ್ಯ ದೇಶವಾದ ಅಮೆರಿಕಾದ ಅಧ್ಯಕ್ಷರಾಗಿ ಆಡಳಿತ ನಡೆಸಬೇಕಾದ ಟ್ರಂಪ್‌ಗೆ ಮುಳ್ಳಿನ ಹಾಸಿಗೆ ಇದ್ದೇ ಇದೆ. ಒಂದು ದೇಶದ ಆಡಳಿತ ನಡೆಸುವುದು ಬೇರೆ, ತನ್ನ ಸ್ವಂತದ, ಶ್ರೀಮಂತದ ವಹಿವಾಟು, ವೈಭೋಗ ಸಾಮ್ರಾಜ್ಯ ದೌಲತ್ತುಗಳನ್ನು ನಡೆಸುವುದು ಬೇರೆ ಎಂಬ ಅನುಭವವನ್ನು ಅವರು ಹಣ್ಣು ಮಾಡಲೇ ಬೇಕಾದ ಶನೈಶ್ಚರ ಮಾಡಿಯೇ ತೀರುತ್ತಾನೆ. ಆಡಳಿತ ಸುಲಭವಲ್ಲ ಎಂಬುದನ್ನು ಈಗ ಸಧ್ಯ ಇರುವ ಸಾಡೇ ಸಾತಿ ಟ್ರಂಪ್‌ ಅವರಿಗೆ ಮನವರಿಕೆ ಮಾಡಿಕೊಡಲಿದೆ. ಅಧಿಕಾರದ ಅವಧಿಯಲ್ಲಿ ಹಲವು ಅಗ್ನಿಪರೀಕ್ಷೆಗಳಿವೆ. ಇಲ್ಲಿಯವರೆಗಿನ ರಾಜಯೋಗದ ಮೊತ್ತವೇ ಬೇರೆ. ಅದು ಶಿಥಿಲಗೊಳ್ಳುವ ವರ್ತಮಾನ ಚಿಗುರು ಪಡೆಯುವ ಸ್ಥಿತಿಯೇ ಬೇರೆ. ಮೂರು ಮದುವೆಗಳಿಂದ ಪಡೆದ ಮಕ್ಕಳ ದೊಡ್ಡ ಗುಂಪನ್ನು ಟ್ರಂಪ್‌ ನಿಯಂತ್ರಿಸದಿದ್ದರೆ ಕಷ್ಟ ಇದೆ. ಟ್ರಂಪ್‌ ಪಾಲಿನ ‘ಅಯ್ಯೋ ಬಿಡಿ ನನ್ನ ನಿಯಂತ್ರಣಕ್ಕೆ ಸಿಗದಿದ್ದು ಏನಿದೆ’ ಎಂಬ ಧೊರಣೆ ಕಷ್ಟಕ್ಕೆ ದೂಡುತ್ತದೆ. ಮಾತು ಕೈಕೊಡುತ್ತದೆ. ಇಲ್ಲಿ ಈ ಅಂಶಗಳ ಮೂಲಕವೇ ರಾಹುಕೇತುಗಳು ಕೈಕೊಡುತ್ತದೆ. ಹಠಮಾರಿತನವೇ ಟ್ರಂಪ್‌ ಅವರನ್ನು ಈಗ ಗೆಲ್ಲಿಸಿದೆ. ಅದೇ ಅವರಿಗೆ ಮಿತಿಯೂ ಆಗುತ್ತದೆ. 

ನರೇಂದ್ರ ಮೋದಿ ಮತ್ತು ಸ್ವಾರ್ಥ ರಹಿತ ಆಡಳಿತ
ರಾಜಯೋಗ ಒದಗಿಸಿದ ಶಶಿಮಂಗಳ ಯೋಗದ ಸಂದರ್ಭದಲ್ಲಿ ಮೋದಿಯವರಿಗೆ ಸಾಡೆಸಾತಿ ಶನಿಕಾಟದ ಸಂದರ್ಭ ಅವರ ಅಭಿಮಾನಿಗಳು ತಿಳಿದುಕೊಂಡಷ್ಟು ಶರವೇಗದಲ್ಲಿ ಅಭಿವೃದ್ಧಿಯತ್ತ ಗಮನ ಹಾಕಿ ಗೆಲ್ಲುವುದು ದುಸ್ತರವಾಗುತ್ತಿದೆ. ಕಳೆದ ಗೋವಾ ಭೇಟಿಯ ಸಂದರ್ಭದಲ್ಲಿ ದುಷ್ಟಶಕ್ತಿಗಳನ್ನು ನಿಯಂತ್ರಿಸಲು ನೋಟು ರದ್ಧತಿ ಉಗ್ರಕ್ರಮಕ್ಕೆ ಕೈಹಾಕಲೇ ಬೇಕಾಯ್ತು ಎಂದು ಹೇಳಿದರು. ಹೇಳುವಾಗ ಭಾವನಾತ್ಮಕವಾಗಿ ಕೊಂಚ ಗದ್ಗದಿತರೂ ಆಗಿದ್ದರು. ರಾಜಕಾರಣಿಗಳು ಮೊಸಳೆ ಕಣ್ಣಿರು ಸುರಿಸುವವರು ತುಂಬ ಜನರಿದ್ದಾರೆ. ಆದರೆ ಮೋದಿಯವರು ಮೊಸಳೆ ಕಣ್ಣೀರು ಸುರಿಸುವ ರಾಜಕಾರಣಿಯಲ್ಲ ಎಂಬುದನ್ನು ಅವರ ವಿರೋಧಿಗಳೂ ಒಪ್ಪುತ್ತಾರೆ. ಆದರೆ ಒಳ್ಳೆಯ ನಿರ್ಧಾರ ಮಾಡಿ, ನಿರ್ಧಾರ ಕಾರ್ಯಗತವೂ ಆಗಿ ಜನರ ಬೆಂಬಲವೂ ಪ್ರಸ್ತುತ ನಿರ್ಧಾರಸಿಕ್ಕಿದಾಗ ಮೋದಿ ತನ್ನನ್ನು ವಿರೋಧಿಗಳು ಉತ್ತಮ ಕೆಲಸ ಮಾಡಲು ಬಿಡುವುದಿಲ್ಲ ಎಂದು ಏಕೆ ಭಾವುಕರಾಗಬೇಕು. ರಾಜಯೋಗಗಳು ಕೆಲವು ಕಾರಣಗಳಿಂದಾಗಿ  ಭಂಗಗೊಳ್ಳುತ್ತವೆ. ಜಾತಕ ಕುಂಡಲಿಯಲ್ಲಿನ ಗ್ರಹಗಳಿಂದಾಗಿ ಎಂಬುದಕ್ಕೆ ಮೋದಿಯವರು ಭಾವುಕತೆಯಿಂದ ಗದ್ಗದಿತರಾಗಿದ್ದೇ ಸಾಕ್ಷಿ.

ಈ ಕಠಿಣ ನಿರ್ಧಾರವನ್ನು ಕಾರ್ಯಗತಗೊಳಿಸುವುದಕ್ಕೂ ಮುಂಚೆ ಮಾಡಿ ಮುಗಿಸಿಕೊಳ್ಳಲೇ ಬೇಕಿದ್ದ ಪೂರ್ವತಯಾರಿಗಳನ್ನು ಮೋದಿಯವರು ನಿರೀಕ್ಷಿಸಿಕೊಂಡ ರೀತಿಯಲ್ಲಿ ಮಾಡಿರಲಿಲ್ಲ. ಸಹಜವಾಗಿ ಭ್ರಷ್ಟರು ಮೋದಿಯವರ ಯೋಜನೆಗಳನ್ನು ವಿಫ‌ಲಗೊಳಿಸಿಯೇ ತೀರುತ್ತಾರೆ. ಬಿಸಿ ತಗಲುತ್ತಿದೆ ಮೋದಿಯವರಿಗೆ. ಪ್ರಧಾನ ಮಂತ್ರಿಯಾಗುವ ಯೋಗ ಯಾರಿಗೆ ಸಿಗುತ್ತದೆ, ಯಾರಿಗೆ ಸಿಗುವುದಿಲ್ಲ ಮೋದಿಯಂತ ಸಾಮಾನ್ಯ ಮನೆತನದ ಹಿನ್ನೆಲೆಯಿಂದ ಬಂದ ಹುಡುಗ ಪ್ರಧಾನಿ ಪಟ್ಟ ಎಂದರೆ ಸಾಮಾನ್ಯವೇ? ಆದರೆ ಅದೃಷ್ಟದ ಮುಂದೆ ಯಾವುದೂ ಇಲ್ಲ. ಆದರೆ ಅಂಟಿಕೊಂಡಿರುವ ಸಾಡೇ ಸಾತಿ ಅಂದು ಕೊಂಡಷ್ಟು ವೇಗದಿಂದ ಫ‌ಲ ಕೊಡದಂತೆ ತಡೆಯುತ್ತಿದೆ. ಸಧ್ಯ ಹೊರದೇಶದಲ್ಲಿ ಭ್ರಷ್ಟರು ಕೂಡಿಸಿಟ್ಟ ಕಳ್ಳಹಣ ತರುತ್ತೇವೆ ಎಂಬ ಮಾತು ಆಡಳಿತಕ್ಕೆ ಬಂದ ಎರಡೂವರೆ ವರ್ಷಗಳ ನಂತರವೂ ಸಾಧ್ಯವಾಗಿಲ್ಲ. ಸಾಧ್ಯವಾಗುವಂತೆ ಕಾಣಿಸುತ್ತಿಲ್ಲ ಎಂಬ ಕೋಲಾಹಲ. ಧರಿಸುವ ಉಡುಪುಗಳ ಬಗ್ಗೆಯೂ ಟೀಕೆಗಳು. ಕೇವಲ ವಿಮಾನದಲ್ಲೇ ಪರದೇಶ ಸುತ್ತುವ ಪ್ರಧಾನಿ ಎಂಬ ಬಾಂಬು. ಕಾಳಧನ ಭಯೋತ್ಪಾದಕತೆ ನೆರೆರಾಷ್ಟ್ರದವರ ಕುಮ್ಮಕ್ಕು ಇತ್ಯಾದಿ ಒಂದೇ ಎರಡೇ ಮೋದಿ ಎದುರಿಸುತ್ತಿರುವ ಸಮಸ್ಯೆ? ಅಮೆರಿಕಾ ತನಗೆ ಬೇಕಾದ ಬಿನ್‌ ಲಾಡೆನ್‌ ನನ್ನು ಪಾಕಿಸ್ತಾನದ ಒಳನುಗ್ಗಿ ಕೊಂದು ಬರುತ್ತದೆ. ಆದರೆ ನಿರಂತರವಾಗಿ ಯಾತನೆ ಕೊಡುತ್ತಲೇ ಇರುವ ದಾವುದ್‌ ಇಬ್ರಾಹಿಂನ ಹುಟ್ಟಡಗಿಸಲು ಏಕೆ ಸಾಧ್ಯವಾಗುತ್ತಿಲ್ಲ ?

Advertisement

 ಚಹಾಕುಡಿಸಿ, ಓಡಾಡಿಸಿ ಗಣರಾಜ್ಯೋತ್ಸವದ ಅತಿಥಿಯಾಗಿ ಕರೆದು ಹಸ್ತಲಾಘವ ನೀಡಿ ನಮ್ಮ ಪ್ರಾಣ ಮಿತ್ರನೇ ಆದ ಇನ್ನು ಎಂದಂದುಕೊಂಡ ಒಬಾಮ ಉಂಡು ತಿಂದು ವಾಪಸಾಗುವಾಗ ಭಾರತ ಸಷ್ಣುತೆಯ ಗುಣ ಹೊಂದಿರಬೇಕು ಎಂದು ಭಾರತಕ್ಕೆ ಕಿವಿಮಾತು ಹೇಳಿ ಹೋಗುವುದು ಮೋದಿಯವರಿಗೆ ಕಾದ ಬಿಸಿ ಸೀಸ ಕಿವಿಗೆ ಸುರಿದ ಅನುಭವವಾಗದೇ? ಎಂಟು ವರ್ಷಗಳ ಅಧ್ಯಕ್ಷೀಯ ದಿನಗಳ ಸ್ಮರಣಾರ್ಥ ಹೊರಬಂದ ಚಿತ್ರಗಳೇ ತುಂಬಿದ ಒಬಾಮ ಪುಸ್ತಕದಲ್ಲಿ ಮನಮೋಹನ್‌ ಸಿಂಗ್‌ ಜೊತೆಗಿನ ಒಬಾಮ ಚಿತ್ರವಿದೆ. ಪ್ರಪಂಚವೇ ಮೋದಿಯತ್ತ ನೋಡುತ್ತಿದ್ದರೂ ಒಬಾಮ ಆಲ್ಬಂನಲ್ಲಿ ಮೋದಿಯ ಚಿತ್ರ ಇಲ್ಲ. ಇದು ವ್ಯವಸ್ಥಿತ ಸಂಚಿನ ಭಾಗವೋ ಅಥವಾ ಮೋದಿ ಅದೃಷ್ಟ ರಾಜಯೋಗವಿದ್ದರೂ ಅಸಹಾಯಕತೆಯಲ್ಲಿ ನರಳುವರಾಗಿದ್ದಾರೆಯೇ? ಬೆಲೆ ಏರಿಕೆ ರೂಪಾಯಿ ಅಪಮೌಲ್ಯ ಭಯೋತ್ಪಾದನೆ ಕೋಮುವಾದಿಯಲ್ಲ ಎಂದು ಬಿಂಬಿಸಿಕೊಳ್ಳಬೇಕಾದ ಅನಿವಾರ್ಯತೆಗಳ ನಡುವೆ ಸಧ್ಯ ನೋಟು ರದ್ಧತಿ ಕಿರಕಿರಿ ಬೇರೆ. 

ಪ‌ರಿವರ್ತಿತ ಶನಿ ಮತ್ತು ಇಂದಿರಾರ ಏರಿಳಿತಗಳು
 ಪರಿವರ್ತನಾ ಯೋಗವನ್ನು ಚಂದ್ರನೊಂದಿಗೆ ಪಡೆದಿದ್ದ ಶನೈಶ್ಚರ ಇಂದಿರಾ ಗಾಂಧಿಯನ್ನು ದಿಟ್ಟೆಯನ್ನಾಗಿ ಖ್ಯಾತಿಯ ಶಿಖರ ಏರಿಸಿದ್ದು ಸುಳ್ಳಲ್ಲ. ಆದರೆ ಇಂದಿರಾ ತಾವೇ ಹೆಣೆದ ಬಲೆಯಲ್ಲಿ ತಾವೇ ನರಳಿದ್ದರು. ಬಿಂದ್ರನ್‌ ವಾಲೆಯನ್ನು ಪೋಸಿದ್ದರು. ಅವನೇ ಕೈಕೊಟ್ಟಿದ್ದ. ಆಪರೇಷನ್‌ ಬ್ಲೂ ಸ್ಟಾರ್‌ ಮಾಡಿಸಲೇ ಬೇಕಾಗಿ  ಬಂತು. ಮಗನನ್ನೂ ಕಳೆದುಕೊಂಡರು ತಾವೂ ಹಂತಕರ ಗುಂಡಿಗೆ ಬಲಿಯಾದರು. ಇನ್ನೂ ಹೀಗೆ ಸಾವಿರ ಉದಾಹರಣೆಗಳಿವೆ.  

Advertisement

Udayavani is now on Telegram. Click here to join our channel and stay updated with the latest news.

Next