ಬೆಂಗಳೂರು: ಜೀವಬೆದರಿಕೆ ಆರೋಪ ಪ್ರಕರಣದಲ್ಲಿ ಬಂಧಿತನಾಗಿ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಯನ್ನು ಬಿಡುವಂತೆ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ಗೆ (ಪಿಎಸ್‌ಐ) ಧಮ್ಕಿ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಯೊಬ್ಬನನ್ನು ಕೆ.ಜಿ ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಫ್ರೆಜರ್ ಟೌನ್ ನಿವಾಸಿ ಸುಹೈಲ್ ಸೇs್ ಬಂಧಿತ ಆರೋಪಿ. ಹಲ್ಲೆ, ಜೀವಬೆದರಿಕೆ ಒಡ್ಡಿದ ಆರೋಪ ಸಂಬಂಧ ಸೈಯದ್ ಫರಾಜ್ ಶಾ ಎಂಬಾತ ನೀಡಿದ ದೂರಿನ ಅನ್ವಯ, ರಹಮತ್ ಎಂಬಾತನನ್ನು ಬಂಧಿಸಿದ್ದ ಪಿಎಸ್‌ಐ ಆನಂದ ಕೊಕ್ಕಮನವರ್ ಜ.23ರಂದು ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದರು. ಅದೇ ದಿನ ರಾತ್ರಿ 9 ಗಂಟೆ ಸುಮಾರಿಗೆ ಠಾಣೆಗೆ ಆಗಮಿಸಿದ್ದ ಆರೋಪಿ ಸುಹೈಲ್ ಸೇs್, ಸೈಯದ್ ಫರಾಜ್ ಶಾ ನೀಡಿದ್ದ ದೂರು ಆತ ಹಿಂಪಡೆಯುತ್ತಾನೆ. ಹೀಗಾಗಿ ರಹಮತ್‌ನನ್ನು ಬಿಟ್ಟು ಬಿಡಿ ಎಂದು ಪಿಎಸ್‌ಐ ಆನಂದ್‌ಗೆ ಕೇಳಿದ್ದಾರೆ.
ಈಗಾಗಲೇ ಪ್ರಕರಣದ ಎಫ್ಐಆರ್ ದಾಖಲಾಗಿದ್ದು, ಆರೋಪಿ ರಹಮತ್‌ನನ್ನು ಬಂಧಿಸಲಾಗಿದೆ ಎಂದು ಪಿಎಸ್‌ಐ ತಿಳಿಸಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಸುಹೈಲ್ ಸೇs್, ಎಫ್ಐಆರ್ ಆದರೆ ಏನಾಗುತ್ತೆ. ನಾವು ಹೊರಗಡೆ ಸೆಟಲ್‌ಮೆಂಟ್ ಮಾಡಿಕೊಳ್ಳುತ್ತೇವೆ ರಹಮತ್‌ನನ್ನು ಬಿಟ್ಟುಬಿಡಿ ಎಂದು ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ಜತೆಗೆ, ರಹಮತ್‌ನನ್ನು ಬಿಡಲು ಒಪ್ಪದ ಪಿಎಸ್‌ಐರನ್ನು ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.
ಹೀಗಾಗಿ ಪಿಎಸ್‌ಐ ನೀಡಿದ ದೂರಿನ ಅನ್ವಯ ಸುಹೈಲ್ ಸೇs್ ವಿರುದ್ಧ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಸಮಾಜ ಸೇವಕ ಎಂದು ಹೇಳಿಕೊಳ್ಳುವ ಸುಹೈಲ್ ಸೇs್ ‘ರಹಮತ್‌ನನ್ನು ಬಿಡದಿದ್ದರೆ ಠಾಣೆ ಮುಂದೆ ಜನರನ್ನು ಕರೆಯಿಸಿ ಪ್ರತಿಭಟನೆ ನಡೆಸುತ್ತೇನೆ” ಎಂದು ಬೆದರಿಕೆ ಒಡ್ಡಿದ್ದಾನೆ ಎಂದು ಅಧಿಕಾರಿ ಹೇಳಿದರು.