Advertisement
ಇದೀಗ ಹಬ್ಬದ ಸೀಸನ್. ಈಗಾಗಲೇ ನವರಾತ್ರಿ ಕಳೆದು ಇನ್ನೇನು ಕೆಲ ದಿನಗಳಲ್ಲಿ ದೀಪಾವಳಿ ಹಬ್ಬ ಕಾಲಿಡಲಿದೆ. ಹಬ್ಬದ ಸವಿ ಸವಿಯುವುದರ ಜತೆಗೆ ಅನೇಕ ಮಂದಿ ಶಾಪಿಂಗ್ ಮಾಡುವದರಲ್ಲೂ ಬ್ಯುಸಿ ಇರುತ್ತಾರೆ. ಅದಕ್ಕೆಂದೇ ಇಲೆಕ್ಟ್ರಾನಿಕ್ ವಸ್ತುಗಳು, ಅಟೋಮೊಬೈಲ್ ಸಂಸ್ಥೆಗಳು ಹಲವಾರು ಆಫರ್‌ಗಳನ್ನು ನೀಡುತ್ತಿದೆ. ಇನ್ನು ಆನ್‌ಲೈನ್ ಶಾಪಿಂಗ್ ತಾಣಗಳಲ್ಲಂತೂ ಧಮಾಕಾ ಆಫರ್‌ಗಳು ಆರಂಭವಾಗಿದೆ.
Related Articles
ಹಬ್ಬದ ಆಫರ್ ಇರುವ ಕಾರಣ ಮೊಬೈಲ್ ಶಾಪ್‌ಗ್ಳಲ್ಲಿ ಜನಜಂಗುಳಿ ಇದೆ. ಹೆಚ್ಚಿನ ಮೊಬೈಲ್‌ಗಳಿಗೆ ಆಫರ್ ಇದ್ದು, ಹೊಸ ಮೊಬೈಲ್ ಖರೀದಿಗೆ ಸಾರ್ವಜನಿಕರು ಆಸಕ್ತಿ ತೋರುತ್ತಿದ್ದಾರೆ. ಹೊಸ ಮೊಬೈಲ್ ಖರೀದಿಗೆ ಗಿಫ್ಟ್ ವೋಚರ್, ಶೇ.0 ಬಡ್ಡಿದರದಲ್ಲಿ ಡೌನ್ ಪೇಮೆಂಟ್, ಹೆಡ್‌ಸೆಟ್, ಪವರ್ ಬ್ಯಾಂಕ್ ಸೇರಿದಂತೆ ಇತರೆ ಕೊಡುಗೆಗಳು, ಮೊಬೈಲ್ ಮೂಲ ದರದ ಮೇಲೆ ರಿಯಾಯಿತಿ, ಕೂಪನ್‌ಗಳು, ಅದೃಷ್ಟಶಾಲಿಗಳಿಗೆ ಬಹುಮಾನ ಸೇರಿದಂತೆ ವಿವಿಧ ಆಫರ್‌ಗಳಿವೆ.
Advertisement
ಪ್ರಮುಖ ಮೊಬೈಲ್ ಬ್ರ್ಯಾಂಡ್ ಆದ ಸ್ಯಾಮ್‌ಸಂಗ್ ದೀಪಾವಳಿ ಆಫರ್ ಪರಿಚಯಿಸಿದ್ದು, 64 ಜಿ.ಬಿ.ಯ ಗ್ಯಾಲಕ್ಸಿ ಎಂ30ಎಸ್ ಮೂಲ ಬೆಲೆ 15,500 ರೂ. ಆಗಿದ್ದು ಇದೀಗ 13,999 ರೂ.ಗೆ ದೊರಕಲಿದೆ. ಇನ್ನು, 10,000 ರೂ. ಬೆಲೆಯ ಗ್ಯಾಲಕ್ಸಿ ಎಂ10ಎಸ್ 7,999 ರೂ.ಗೆ, 73,600 ರೂ. ಬೆಲೆಯ ಗ್ಯಾಲಕ್ಸಿ ನೋ1-9 ಮೊಬೈಲ್ 42,999 ರೂ.ಗೆ, 62,000 ರೂ. ಬೆಲೆಯ ಗ್ಯಾಲಕ್ಸಿ ಎಸ್-9 ಮೊಬೈಲ್ 29,999 ರೂ.ಗೆ ದೊರಕಲಿದೆ. ಪ್ರಮುಖ ಬ್ರ್ಯಾಂಡ್ ಆದ ನೋಕಿಯಾ ಸಂಸ್ಥೆ ಕೂಡ ದೀಪಾವಳಿ ಆಫರ್ ನೀಡಿದ್ದು, 8,599ರೂ. ಬೆಲೆಯ ನೋಕಿಯಾ 2.2 ಮೊಬೈಲ್ 6,599ರೂ.ಗೆ, 10,199 ರೂ. ಬೆಲೆಯ ನೋಕಿಯಾ 3.2 ಮೊಬೈಲ್‌ಗೆ 7,499 ರೂ., 17,599 ರೂ. ಬೆಲೆಯ ನೋಕಿಯಾ 6.1 ಪ್ಲಸ್ 11,999 ರೂ. ಬೆಲೆಗೆ, 24, 561 ರೂ. ಬೆಲೆಯ ನೋಕಿಯಾ 7.1 ಮೊಬೈಲ್ 12,999 ರೂ.ಗೆ ದೊರಕಲಿದೆ. ರೆಡ್‌ಮಿ ಸಂಸ್ಥೆಯ ಮೊಬೈಲ್‌ಗೂ ಆಫರ್ ಇದ್ದು, 28,999 ಬೆಲೆಯ ರೆಡ್‌ಮಿ ಕೆ.20 ಪ್ರೋ ಮೊಬೈಲ್ 24,999 ರೂ., 14,999 ರೂ. ಬೆಲೆಯ ಎಂಐ ಎ3 ಮೊಬೈಲ್ 12,999 ರೂ.ಗೆ, 15,999 ರೂ. ಬೆಲೆಯ ರೆಡ್‌ಮಿ ನೋಟ್ 7 ಪ್ರೋ 11,999 ರೂ.ಗೆ ಸಿಗಲಿದೆ. ಇನ್ನು, ಒಪ್ಪೋ, ವಿವೋ, ಮೋಟೊರೋಲಾ ಸೇರಿದಂತೆ ವಿವಿಧ ಮೊಬೈಲ್ ಬ್ರಾಂಡ್‌ಗಳಿಗೂ ದೀಪಾವಳಿ ಆಫರ್‌ನಲ್ಲಿ ಸಿಗಲಿದೆ. ದಸರಾ, ದೀಪಾವಳಿ ಹಬ್ಬದ ಸಂಭ್ರಮಕ್ಕೆ ಜಿಯೋ ತನ್ನ 4ಜಿ ಎಲ್‌ಟಿಇ ಫೋನಿನ ಬೆಲೆಯನ್ನು 800 ರೂ.ಗೆ ಕಡಿತಗೊಳಿಸಿದೆ.
ಆನ್‌ಲೈನ್ ಧಮಾಕದೀಪಾವಳಿ ಹಬ್ಬದ ಪ್ರಯುಕ್ತ ಪ್ರಮುಖ ಶಾಪಿಂಗ್ ತಾಣಗಳಾದ ಫ್ಲಿಪ್‌ಕಾರ್ಟ್, ಸ್ನಾಪ್‌ಡೀಲ್, ಅಮೇಜಾನ್ ಸೇರಿದಂತೆ ವಿವಿಧ ತಾಣಗಳಲ್ಲಿ ಆಫರ್‌ಗಳನ್ನು ನೀಡಲಾಗಿದೆ. ಮುಖ್ಯವಾಗಿ ಮೂಲಬೆಲೆಗಿಂತ ಶೇ.30, 40 ರಷ್ಟು ಕಡಿಮೆ ಬೆಲೆ, ಉಚಿತ ಆನ್‌ಲೈನ್ ಡೆಲಿವೆರಿ, ಎಕ್ಸ್‌ಚೇಂಜ್ ಆಫರ್, ಶೇ.0 ಬಡ್ಡಿದರದಲ್ಲಿ ಇಎಂಐ, ಮತ್ತು ಡೀಲ್ ಆಫ್ ದಿ ಡೇ ಎಂದು ಕೊಂಡುಕೊಳ್ಳುವ ವಸ್ತುಗಳಿಗೆ ಅತ್ಯುತ್ತಮ ಆಫರ್ ನೀಡಲಾಗುತ್ತಿದೆ. - ನವೀನ್ ಭಟ್ ಇಳಂತಿಲ