Advertisement

ಆ. ಭಾರತ್‌-ಆ. ಕರ್ನಾಟಕ ಅನುಷ್ಠಾನದಲ್ಲಿ ದ.ಕ. ಪ್ರಥಮ

11:21 AM Aug 29, 2019 | Team Udayavani |

ಮಂಗಳೂರು: ಆಯುಷ್ಮಾನ್‌ ಭಾರತ್‌ – ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನ ದಲ್ಲಿ ದ.ಕನ್ನಡ ಜಿಲ್ಲೆ ರಾಜ್ಯದಲ್ಲಿಯೇ ನಂ. ವನ್‌ ಸ್ಥಾನದಲ್ಲಿದೆ.

Advertisement

2018ರ ಅ. 30ರಿಂದ 2019ರ ಜೂ.30ರ ವರೆಗೆ ಜಿಲ್ಲೆಯ 5,808 ಮಂದಿ ರೋಗಿಗಳು 20.37 ಕೋ.ರೂ. ಮೌಲ್ಯದ ಚಿಕಿತ್ಸೆ ಪಡೆದಿದ್ದಾರೆ. 3,459 ರೋಗಿಗಳು ಪಡೆದಿರುವ ಚಿಕಿತ್ಸೆಗೆ ಸಂಬಂಧಿಸಿ 12.42 ಕೋ.ರೂ. ಮೊತ್ತದ ಬಿಲ್‌ ಪಾವತಿ ಪರಿಶೀಲನೆಯ ಹಂತದಲ್ಲಿದೆ.

ಜಿಲ್ಲೆಯ 7 ಸರಕಾರಿ ಆಸ್ಪತ್ರೆಗಳಲ್ಲಿ 2,126 ರೋಗಿಗಳು ಚಿಕಿತ್ಸೆ ಪಡೆದಿದ್ದು, 2.37 ಕೋ.ರೂ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದ ಪಾವತಿಯಾಗಿದೆ. ಖಾಸಗಿ ಆಸ್ಪತ್ರೆಗಳ ಮೂಲಕ ಪಡೆದಿರುವ ಪ್ರಯೋಜನ ಇದಕ್ಕಿಂತ ಹೆಚ್ಚಿದೆ. 8 ತಿಂಗಳಲ್ಲಿ 18 ಖಾಸಗಿ ಆಸ್ಪತ್ರೆಗಳಲ್ಲಿ 3,682 ರೋಗಿ ಗಳು 17.99 ಕೋ.ರೂ. ಮೌಲ್ಯದ ಚಿಕಿತ್ಸೆ ಪಡೆದು ಕೊಂಡಿದ್ದಾರೆ. 2,072 ರೋಗಿಗಳು ಪಡೆದಿರುವ ಚಿಕಿತ್ಸೆಗಳಿಗೆ ಸಂಬಂಧಿಸಿ 10.69 ಕೋ.ರೂ. ಬಿಲ್‌ ಪಾವತಿ ಪರಿಶೀಲನೆಯ ಹಂತದಲ್ಲಿದೆ.

ಸರಕಾರಿ ಆಸ್ಪತ್ರೆಗಳ ಪೈಕಿ ವೆನಾÉಕ್‌ನಲ್ಲಿ ಅತ್ಯಧಿಕ 1,221 ಮಂದಿ 1.89 ಕೋ.ರೂ.ಗಳ ಚಿಕಿತ್ಸೆ ಪಡೆದುಕೊಂಡಿದ್ದು, ಇದು ರಾಜ್ಯದಲ್ಲಿಯೇ ಗರಿಷ್ಠ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಮಕೃಷ್ಣ ರಾವ್‌ ತಿಳಿಸಿದ್ದಾರೆ.

4 ತಿಂಗಳಲ್ಲಿ 3,988 ಶಸ್ತ್ರಚಿಕಿತ್ಸೆ, 10.98 ಕೋ.ರೂ. ವೆಚ್ಚ
ಯೋಜನೆಯಡಿ ವಿವಿಧ ಶಸ್ತ್ರಚಿಕಿತ್ಸೆಗಳಿಗೂ ಅವಕಾಶವಿದ್ದು, 2019ರ ಎಪ್ರಿಲ್‌ನಿಂದ ಜುಲೈ ವರೆಗೆ 3,988 ಶಸ್ತ್ರ ಚಿಕಿತ್ಸೆಗಳು ನಡೆದಿವೆ. ಒಟ್ಟು ವೆಚ್ಚ 10.98 ಕೋಟಿ ರೂ.

Advertisement

ಮಂಗಳೂರು ತಾಲೂಕಿನ ಆಸ್ಪತ್ರೆಗಳಲ್ಲಿ 1,186, ಬಂಟ್ವಾಳ 1,062, ಪುತ್ತೂರು 677, ಬೆಳ್ತಂಗಡಿ 666 ಮತ್ತು ಸುಳ್ಯದ ವಿವಿಧ ಆಸ್ಪತ್ರೆಗಳಲ್ಲಿ 397 ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ.

ಅರ್ಹತೆ, ಚಿಕಿತ್ಸಾ ಮೊತ್ತ
ಬಿಪಿಎಲ್‌ ಕಾರ್ಡ್‌ದಾರರು ಮತ್ತು ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಫಲಾನುಭವಿಗಳು ವರ್ಷಕ್ಕೆ 5 ಲಕ್ಷ ರೂ. ತನಕ ಉಚಿತ ಚಿಕಿತ್ಸೆ ಪಡೆಯ ಬಹುದು. ಎಪಿಎಲ್‌ ಅಥವಾ ಬಿಪಿಎಲ್‌ ಕಾರ್ಡ್‌ ಇಲ್ಲದ ವರಿಗೆ ಸರಕಾರಿ ಪಾವತಿ ದರದ ಶೇ. 30ರಷ್ಟು ಚಿಕಿತ್ಸಾ ವೆಚ್ಚ ನೀಡಲಾಗುತ್ತಿದ್ದು, ವಾರ್ಷಿಕ ಮಿತಿ 1.50 ಲಕ್ಷ ರೂ. ಆಗಿರುತ್ತದೆ. ಬಿಪಿಎಲ್‌ ಕಾರ್ಡಿನವರು ಪಡೆದಿರುವ ಚಿಕಿತ್ಸೆಯ ಶೇಕಡಾವಾರು ಲೆಕ್ಕದಲ್ಲಿ ದ.ಕ. ನಂಬರ್‌ ವನ್‌ ಸ್ಥಾನದಲ್ಲಿದೆ. ಜಿಲ್ಲೆಯ 30 ಖಾಸಗಿ ಆಸ್ಪತ್ರೆಗಳು ಆರೋಗ್ಯ ಕರ್ನಾಟಕ ಯೋಜನೆಯಡಿ ಒಪ್ಪಂದ ಮಾಡಿಕೊಂಡಿವೆ.

ಗೊಂದಲ ಬೇಡ
ಯೋಜನೆಯ ಸೌಲಭ್ಯ ಪಡೆಯುವ ಬಗ್ಗೆ ಜನರಲ್ಲಿ ಗೊಂದಲವಿದೆ. ಖಾಸಗಿ ಆಸ್ಪತ್ರೆಗೆ ಹೋಗಲು ಬಯಸುವವರು ಮೊದಲು ಸರಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿಂದ ಶಿಫಾರಸು ಪತ್ರ ಪಡೆದು ರೆಫೆರಲ್‌ (ಖಾಸಗಿ) ಆಸ್ಪತ್ರೆಗೆ ಹೋದರೆ ಸಮಸ್ಯೆ ಆಗುವುದಿಲ್ಲ.

ಇಲ್ಲಿಗೆ ದೂರು ಕೊಡಿ
– ಮಾಹಿತಿ- ದೂರುಗಳಿದ್ದರೆ ಸಹಾಯ ವಾಣಿ 1800- 4258330 ಸಂಪರ್ಕಿಸಬಹುದು. ನೇರವಾಗಿಯೂ ದೂರು ನೀಡಬಹುದು.

– ಎಲ್ಲ ಆಸ್ಪತ್ರೆಗಳಲ್ಲಿ ಎಲ್ಲ ರೋಗಗಳಿಗೆ ಚಿಕಿತ್ಸೆಯ ಟೈ ಅಪ್‌ ಇಲ್ಲ. ಈ ಬಗ್ಗೆ ಮುಂಚಿತವಾಗಿ ಮಾಹಿತಿ ಪಡೆದು ಯಾವ ಆಸ್ಪತ್ರೆ ಎಂದು ನಿರ್ಧರಿಸಬೇಕು. ಇದಕ್ಕಾಗಿ ಎಲ್ಲ ಆಸ್ಪತ್ರೆಗಳಲ್ಲಿ “ಆರೋಗ್ಯ ಮಿತ್ರ’ ಕೌಂಟರ್‌ ಇದೆ.

– 5 ಲಕ್ಷ ರೂ. ತನಕ ಚಿಕಿತ್ಸೆ ಪಡೆಯಬಹುದಾದರೂ ಒಬ್ಬರಿಗೇ ಅಥವಾ ಏಕಗಂಟಿನಲ್ಲಿ ಅಷ್ಟು ಮೊತ್ತ ಲಭಿಸುವುದಿಲ್ಲ. ಐಸಿಯು ನಲ್ಲಿ ದಾಖಲಾದರೆ ಹಂತಗಳಲ್ಲಿ ಪಾವತಿ.

ಈಗ ಜನರಿಗೆ ಸರಕಾರಿ ಆಸ್ಪತ್ರೆಗಳ ಬಗ್ಗೆ ಅರಿವು, ನಂಬಿಕೆ ಮೂಡಿದೆ. ಸರಕಾರಿ ಆಸ್ಪತ್ರೆಗಳಲ್ಲೂ ಉತ್ತಮ ಸೇವೆ ಸಿಗುತ್ತದೆ ಎಂದು ಗೊತ್ತಾಗಿದೆ. ಹಾಗಾಗಿ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
– ಕೆ. ಜಗನ್ನಾಥ್‌, ಆಯುಷ್ಮಾನ್‌ ಆರೋಗ್ಯ ಕರ್ನಾಟಕ ಜಿಲ್ಲಾ ಸಂಯೋಜಕ

ದ.ಕ. ಜಿಲ್ಲೆ ಆರೋಗ್ಯ ಸೇವೆ ಗಳಿಗೆ ಹೆಸರಾಗಿದ್ದು, ವೆನಾÉಕ್‌ ಜಿಲ್ಲಾ ಆಸ್ಪತ್ರೆಯಲ್ಲಿಯೂ ಉತ್ತಮ ಸೌಲಭ್ಯ ಗಳಿವೆ. ಹಾಗಾಗಿ ರೋಗಿಗಳು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಖಾಸಗಿ ಆಸ್ಪತ್ರೆಗಳೂ ಅಧಿಕ ಪ್ರಮಾಣದಲ್ಲಿ ಈ ಯೋಜನೆಯಡಿ ಒಡಂಬಡಿಕೆ ಮಾಡಿಕೊಂಡಿವೆ. ಈ ಎಲ್ಲ ಅಂಶಗಳು ಯೋಜನೆ ಜಾರಿಯಲ್ಲಿ ಜಿಲ್ಲೆ ಪ್ರಥಮ ಸ್ಥಾನಿಯಾಗಲು ಪೂರಕವಾಗಿವೆ.
– ಡಾ| ರಾಮಕೃಷ್ಣ ರಾವ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next