Advertisement

ದ.ಕ.: ಒಂದೇ ದಿನ 8 ಜನ ದುರ್ಮರಣ

06:25 AM Nov 08, 2017 | Team Udayavani |

ಉಳ್ಳಾಲ/ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಸಂಭವಿಸಿದ ಎರಡು ಪ್ರತ್ಯೇಕ ದುರ್ಘ‌ಟನೆಗಳಲ್ಲಿ 8 ಮಂದಿ ಮೃತಪಟ್ಟಿದ್ದಾರೆ. ಆದರೆ ಎರಡೂ ಪ್ರಕರಣಗಳು ಮಂಗಳವಾರವಷ್ಟೇ ಬೆಳಕಿಗೆ ಬಂದಿವೆ.

Advertisement

ಬಂಟ್ವಾಳ ತಾಲೂಕಿನ ಮೂಲರಪಟ್ನ ಫಲ್ಗುಣಿ ನದಿಯಲ್ಲಿ ಮುಳುಗಿ ಐವರು ಬಾಲಕರು ಮೃತಪಟ್ಟರೆ, ಮಂಗಳೂರು ಸಮೀಪದ ಕೋಟೆಕಾರಿನಲ್ಲಿ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಕೆ.ಸಿ.ರೋಡ್‌ ಶಾಖೆಯಲ್ಲಿ ಗಾಢ ನಿದ್ದೆಯಲ್ಲಿದ್ದ ಮೂವರು ಭದ್ರತಾ ಸಿಬಂದಿ ಜನರೇಟರ್‌ನ ವಿಷಾನಿಲ ಸೇವನೆಯಿಂದ ಮೃತಪಟ್ಟಿದ್ದಾರೆ.

ಮೂಲರಪಟ್ನದಲ್ಲಿ ನೀರುಪಾಲಾದವರು ಅಸ್ಲಾಂ (16), ಮುದಾಸಿರ್‌ (17), ಸವಾದ್‌ (17), ರಮೀಜ್‌ (17) ಹಾಗೂ ಅಜ್ಮಲ್‌ (17). ಎಲ್ಲರೂ ಸ್ಥಳೀಯ ನಿವಾಸಿಗಳು. ಇವರ ಪೈಕಿ ಸವಾದ್‌ ಹೊರತುಪಡಿಸಿ ಉಳಿದೆಲ್ಲರೂ ಪಿಯುಸಿ ವಿದ್ಯಾರ್ಥಿಗಳು. ಸವಾದ್‌ ಬೇಕರಿಯೊಂದರ ಸಿಬಂದಿ. ಬಾಲಕರು ಫಲ್ಗುಣಿ ನದಿಯಲ್ಲಿ ಸ್ನಾನಕ್ಕೆ ಹೋಗಿದ್ದ ವೇಳೆ ದುರ್ಘ‌ಟನೆ ಸಂಭವಿಸಿದೆ. 

ಕೋಟೆಕಾರಿನಲ್ಲಿ ಸಂಭವಿಸಿದ ಇನ್ನೊಂದು  ಅವಘಡ ದಲ್ಲಿ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಕೆ.ಸಿ.ರೋಡ್‌ ಶಾಖೆಯಲ್ಲಿ ಸೆಕ್ಯುರಿಟಿ ಗಾರ್ಡ್‌ಗಳಾಗಿ ಕೆಲಸ ಮಾಡುತ್ತಿದ್ದ ಮಂಜನಾಡಿ ನಿವಾಸಿ ಸಂತೋಷ್‌ (38), ಕೊಲ್ಯ ಕಾಸಿಂಬೆಟ್ಟು ನಿವಾಸಿ ಸೋಮನಾಥ (58), ಕೆ.ಸಿ.ರೋಡ್‌ ಕಾಲನಿ ನಿವಾಸಿ ಉಮೇಶ್‌ (60) ಮೃತಪಟ್ಟವರು.

Advertisement

Udayavani is now on Telegram. Click here to join our channel and stay updated with the latest news.

Next