Advertisement

ಪ್ರಕರಣ ಬೇಧಿಸಲು ಜನರ ಸಹಕಾರ ಅತ್ಯಗತ್ಯ: ಡಿಜಿಪಿ ಪ್ರವೀಣ್ ಸೂದ್

11:32 AM Aug 01, 2022 | Team Udayavani |

ಮಂಗಳೂರು: ಯಾವುದೇ ಪ್ರಕರಣವಿದ್ದರೂ ಅದರ ಬಗ್ಗೆ ಕೆಲವು ನಾಗರಿಕರಿಗೆ ಮಾಹಿತಿ ಇರುತ್ತದೆ. ಅಂಥವರು ಮುಂದೆ ಬಂದು ಪೊಲೀಸರಿಗೆ ಮಾಹಿತಿ ನೀಡಿದರೆ ಪ್ರಕರಣ ಬೇಧಿಸಲು ಸುಲಭವಾಗುತ್ತದೆ. ಮಾಹಿತಿ ನೀಡದಿದ್ದಲ್ಲಿ ಅವರೂ ಇದರಲ್ಲಿ ಭಾಗಿದಾರರೆಂದು ನಾವು ತಿಳಿಯಬೇಕಾಗುತ್ತದೆ ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದರು.

Advertisement

ಮಂಗಳೂರಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರಷ್ಟೇ ನಾಗರಿಕರ ಜವಾಬ್ದಾರಿಯೂ ಇದೆ. ಆದ್ದರಿಂದ ಎಲ್ಲಾ ಸಮುದಾಯಗಳ, ಸಂಘಟನೆಗಳ ಮುಖಂಡರು ಪೊಲೀಸರೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.

ಮಸೂದ್ ಹಂತಕರಲ್ಲಿ ಎಂಟು ಮಂದಿಯ ಬಂಧನವಾಗಿದೆ. ಪ್ರವೀಣ್ ಹಂತಕರಿಬ್ಬರ ಬಂಧನವಾಗಿದ್ದು, ತನಿಖೆ ಮುಂದಿವರಿದಿದೆ. ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತೇವೆ. ಫಾಝಿಲ್ ಹತ್ಯೆ ಪ್ರಕರಣದಲ್ಲೂ ಈಗಾಗಲೇ ಹಂತಕರು ಬಳಸಿರುವ ಕಾರು ಪತ್ತೆಯಾಗಿದ್ದು, ಕಾರು ಮಾಲಕನನ್ನೂ ವಶಪಡಿಸಿಕೊಳ್ಳಲಾಗಿದೆ. ಆತನ ಮೂಲಕ ಉಳಿದ ಆರೋಪಿಗಳನ್ನೂ ಬಂಧಿಸಲಾಗುತ್ತದೆ. ಸದ್ಯದಲ್ಲೇ ಮೂರೂ ಪ್ರಕರಣವನ್ನು ಬೇಧಿಸಲಾಗುತ್ತದೆ ಎಂದು ಪ್ರವೀಣ್ ಸೂದ್ ಹೇಳಿದರು.

ಐಜಿ, ದ.ಕ.ಜಿಲ್ಲಾ ಎಸ್ಪಿ, ಮಂಗಳೂರು ಪೊಲೀಸ್ ಕಮಿಷನರ್, ಡಿಸಿಯರೊಂದಿಗೆ ಚರ್ಚಿಸಿ ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ಸವಿವರವಾಗಿ ಚರ್ಚೆ ನಡೆಸಿ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ಗಡಿ ಪ್ರದೇಶದಲ್ಲಿ ತಪಾಸಣೆಯನ್ನು ಬಿಗಿಗೊಳಿಸಲಾಗುತ್ತದೆ. ಅದರೊಂದಿಗೆ ದ.ಕ.ಜಿಲ್ಲೆಯಲ್ಲಿ ಪೊಲೀಸ್ ಬಲ ಕಡಿಮೆಯಿದ್ದು, ಅದನ್ನು ಹೆಚ್ಚು ಮಾಡಲು ಸಿಎಂ ಜೊತೆಗೆ ಮಾತನಾಡಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ:ಸಿದ್ದರಾಮೋತ್ಸವದಿಂದ ನಮಗೆ ಆಪತ್ತಿಲ್ಲ..: ಸಿಎಂ ಬೊಮ್ಮಾಯಿ

Advertisement

ದ.ಕ.ಜಿಲ್ಲೆಯಲ್ಲಿ ನಡೆದಿರುವ ಮೂರು ಪ್ರಕರಣಗಳಲ್ಲೂ ಹಂತಕರನ್ನು ಬಂಧಿಸಲಾಗುವುದು.  ಯಾವುದೇ ಸಂಘಟನೆ, ವ್ಯಕ್ತಿ, ಸಿದ್ಧಾಂತದವರು ಭಾಗಿಯಾಗಿದ್ದರೂ ಯಾರನ್ನೂ ಬಿಡುವುದಿಲ್ಲ. ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ‌ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next