Advertisement

ಡಿಜಿಪಿ ದತ್ತ ಬಿ.ಸಿ.ರೋಡ್‌ಗೆ; ಶರತ್‌ ಹತ್ಯೆ ಸ್ಥಳ ಪರಿಶೀಲನೆ

10:41 AM Jul 15, 2017 | Team Udayavani |

ಬಂಟ್ವಾಳ: ಬಿ.ಸಿ.ರೋಡಿಗೆ ಶುಕ್ರವಾರ ಆಗಮಿಸಿದ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಕೆ.ಆರ್‌. ದತ್ತ ಅವರು ದುಷ್ಕರ್ಮಿಗಳಿಂದ ಹತನಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಶರತ್‌ ಅವರ ಉದಯ ಲಾಂಡ್ರಿಯನ್ನು ಪರಿಶೀಲಿಸಿದರು. ಸಮೀಪದ ಅಂಗಡಿಯ ಪ್ರವೀಣ್‌ ಅವರಿಂದ  ಪ್ರಕರಣದ ಮಾಹಿತಿ ಪಡೆದುಕೊಂಡರು. ಮಾಧ್ಯಮ ಪ್ರತಿನಿಧಿಗಳಿಗೆ ಯಾವುದೇ ಪ್ರತಿಕ್ರಿಯೆ  ನೀಡದ ಅವರು ಬಳಿಕ ಲಾಂಡ್ರಿಯ ಒಳಗೆ ಹೋಗಿ, ಹೊರ ಪ್ರದೇಶವನ್ನು ವೀಕ್ಷಿಸಿದರು. ಆರೋಪಿಗಳು ದ್ವಿಚಕ್ರ ವಾಹನವನ್ನು ನಿಲ್ಲಿಸಿದ್ದ ಸ್ಥಳವನ್ನು ಅವರಿಗೆ ಎಸ್‌ಪಿ ಅವರು ತೋರಿಸಿದರು. ಯಾವು ದಿಕ್ಕಿನಿಂದ ಬಂದು ಪುನಃ ಹೇಗೆ ಹೋದರು ಎಂಬ ವಿವರಗಳನ್ನು ಹೇಳಿದರು.

Advertisement

ಇದಕ್ಕೂ ಮೊದಲು ಅವರು ಬೆಂಜನಪದವಿನಲ್ಲಿ ಜೂ. 21ರಂದು ಮಹಮ್ಮದ್‌ ಅಶ್ರಫ್‌ ಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪ್ರದೇಶ ಪರಿಶೀಲನೆ ಮಾಡಿದರು. ಅವರ ಜತೆಗೆ ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಆಲೋಕ್‌ ಮೋಹನ್‌, ಪಶ್ಚಿಮ ವಲಯ ಐಜಿಪಿ ಹರಿಶೇಖರನ್‌, ಜಿಲ್ಲಾ ಎಸ್‌ಪಿ ಸುಧೀರ್‌ ಕುಮಾರ್‌ ರೆಡ್ಡಿ, ಹೆಚ್ಚುವರಿ ಎಸ್‌ಪಿ ವಿಷ್ಣುವರ್ಧನ್‌, ಬಂಟ್ವಾಳ ಉಪವಿಭಾಗ ಎಎಸ್‌ಪಿ ಡಾ| ಅರುಣ್‌, ಬಂಟ್ವಾಳ ವೃತ್ತ ನಿರೀಕ್ಷಕ ಬಿ.ಕೆ. ಮಂಜಯ್ಯ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next