Advertisement

ದೀಪಾವಳಿ ಹಬ್ಬದ ಖರೀದಿಗೆ ಮುಗಿಬಿದ್ದ ಜನ

05:27 PM Nov 04, 2021 | Team Udayavani |

ಹೊನ್ನಾಳಿ: ಬೆಳಕಿನ ಹಬ್ಬ ದೀಪಾವಳಿಗೆ ಪಟ್ಟಣದಹಾಗೂ ತಾಲೂಕಿನ ಜನತೆ ಬುಧವಾರ ಪಟ್ಟಣದಪ್ರಮುಖ ಬೀದಿಗಳ ಅಂಗಡಿ ಮುಂಗಟ್ಟುಗಳ ಮುಂದೆಮುಗಿಬಿದ್ದು, ವ್ಯಾಪಾರ ವಹಿವಾಟು ನಡೆಸಿದರು.

Advertisement

ಜನರು ಹಬ್ಬಕ್ಕಾಗಿ ಕೊಂಡುಕೊಳ್ಳಲುಸಾಗರೋಪಾದಿಯಲ್ಲಿ ಸೇರಿದ್ದರು. ಜನಜಂಗುಳಿನೋಡಿದಾಗ ಪಟ್ಟಣದಲ್ಲಿ ಯಾವುದಾದರು ಜಾತ್ರೆನಡೆಯುತ್ತದೆಯೋನೋ ಎಂಬುವ ಭಾಸವಾಗುತ್ತಿತ್ತು.ಪಟ್ಟಣದ ಪ್ರಮುಖ ರಸ್ತೆಗಳಾದ ಸಂಪಿಗೆ, ತುಮ್ಮಿನಕಟ್ಟೆ,ಕುರಿ ಮಾರ್ಕೆಟ್‌, ನ್ಯಾಮತಿ ರಸ್ತೆಗಳು ಸೇರಿದಂತೆ ಇತರಎಲ್ಲಾ ರಸ್ತೆಗಳು ಜನರಿಂದ ತುಂಬಿ ತುಳುಕುತ್ತಿದ್ದವು. ಕೆಲಸಮಯ ಟ್ರಾಫಿಕ್‌ ಜಾಂ ನಿರ್ಮಾಣವಾಗಿ ಮಕ್ಕಳು,ಮಹಿಳೆಯರು ಸಂಚರಿಸುವುದೇ ದುಸ್ತಾರವಾಗಿತ್ತು.

ದಿನಸಿ ಅಂಗಡಿ, ಬಟ್ಟೆ ಅಂಗಡಿ, ಒಡವೆಗಳ ಅಂಗಡಿ,ಅಲಂಕಾರಿಕಾ ವಸ್ತುಗಳ ಮಾರಾಟ ಅಂಗಡಿ ಸೇರಿದಂತೆಎಲ್ಲ ಅಂಗಡಿಗಳು ಜನರಿಂದ ಭರ್ತಿಯಾಗಿದ್ದಲ್ಲದೆರಸ್ತೆ ಬಳಿ ಮಾರಾಟ ಮಾಡುತ್ತಿದ್ದ ಹಣ್ಣು, ಹೂ, ಬಾಳೆ,ಉತ್ತರಾಣಿ ಕಡ್ಡಿ, ಮಾವಿನ ಎಲೆ ಮಾರಾಟಗಾರರಮುಂದೆ ಜನರು ಸೇರಿ ವ್ಯಾಪಾರ ಮಾಡುತ್ತಿದ್ದುದುಕಂಡು ಬಂತು.

ಹಣ್ಣುಗಳ ಬೆಲೆ ದುಬಾರಿ: ಎಲ್ಲ ಹಣ್ಣುಗಳ ಬೆಲೆಗಗನಕ್ಕೇರಿದ್ದರೂ ದೀಪಾವಳಿ ಹಬ್ಬ ಆಚರಿಸಲೇಬೇಕುಎಂದು ಜನರು ಹಣ್ಣುಗಳನ್ನು ಕೊಳ್ಳಲು ಮುಗಿಬಿದ್ದದೃಶ್ಯ ಕಂಡು ಬಂತು. ಸೇಬುಹಣ್ಣು ಪ್ರತಿ ಕೆ.ಜಿಗೆ ರೂ.80ರಿಂದ 120, ದ್ರಾಕ್ಷಿ ರೂ.160, ಸಪೋಟ ರೂ.60,ಪೇರಲ ರೂ. 50, ದಾಳಿಂಬೆ ರೂ. 150, ಕಿತ್ತಳೆ ರೂ.50,ಮೊಸಂಬಿ ರೂ.80 ಹೀಗೆ ಎಲ್ಲ ಹಣ್ಣುಗಳ ಬೆಲೆ ಹೆಚ್ಚುಇದ್ದರೂ ಜನರು ಕೊಂಡುಕೊಂಡರು.

ದೀಪಾವಳಿ ಹಬ್ಬಕ್ಕೆ ಅವಶ್ಯವಾಗಿ ಬೇಕಾದ ವಿವಿಧಹೂಗಳು ಬೆಲೆಗಳು ಕಡಿಮೆ ಇರಲಿಲ್ಲ. ಚಂಡು ಹೂಕೆಜಿಗೆ 50ರಿಂದ 60, ಸೇವಂತಿ ಹೂ. ರೂ.40ರಿಂದ 50ಹೀಗೆ ವ್ಯಾಪಾರಿಗಳು ಹೂಗಳ ವ್ಯಾಪಾರ ಮಾಡಿದರು.ಮನೆ ಬಾಗಿಲಿಗೆ ಹಾಗೂ ಹಟ್ಟಿ ದೇವರಿಗೆ ಇಡುವ ಉತ್ತರಾಣಿ ಕಡ್ಡಿ, ಮಾವಿನ ಎಲೆ, ಬಾಳೆ ಎಲೆ ರಸ್ತೆಗಳಇಕ್ಕೆಲಗಳಲ್ಲಿ ಮಾರಾಟವಾದವು. ಒಟ್ಟಾರೆ ಹಬ್ಬಕ್ಕಾಗಿಖರೀದಿ ಜೋರಾಗಿಯೇ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next