Advertisement

ಏಕಾದಶ ಸಂಭ್ರಮಕ್ಕೆ ಏಕಾದಶಿ ದೇವಿ ಮಹಾತ್ಮೆ

06:44 PM Mar 06, 2020 | mahesh |

ಇದೇ ಮೊದಲ ಬಾರಿಗೆ ಗೆಜ್ಜೆ ಕಟ್ಟಿ ರಂಗಸ್ಥಳವೇರಿದ ಬಾಲ ಕಲಾವಿದರು ಮತ್ತು ಹಲವು ವೇದಿಕೆಗಳಲ್ಲಿ ಮೇರು ಪ್ರದರ್ಶನ ನೀಡಿದ ಯುವ ಕಲಾವಿದರಿಂದ ಪ್ರದರ್ಶಿತಗೊಂಡ ಪ್ರಸಂಗವೇ ಏಕಾದಶಿ ದೇವಿ ಮಹಾತ್ಮೆ. ಕದ್ರಿ ಬಾಲಯಕ್ಷ ಕೂಟ ಸಂಸ್ಥೆಯ ಏಕಾದಶ ಸಂಭ್ರಮಕ್ಕೆ ಸಾಕಾರಗೊಂಡ ಈ ವಿನೂತನ ಪ್ರಸಂಗದ ಪ್ರದರ್ಶನಕ್ಕೆ ಕದ್ರಿ ಶ್ರೀ ಮಂಜುನಾಥ ದೇವಳದ ರಾಜಾಂಗಣ ಸಾಕ್ಷಿಯಾಯಿತು.

Advertisement

ದೇವೇಂದ್ರನಾಗಿ ಪ್ರಕೃತಿ ಜೋಗಿ, ನಾಡಿಜಂಘನಾಗಿ ನಿಧೀಶ್‌ ಶೇಕ, ಮುರಾಸುರನಾಗಿ ರಂಜಿತಾ ಎಲ್ಲೂರು, ವಿಷ್ಣುವಾಗಿ ನಿಶಾ ದೇವಾಡಿಗ, ಗರುಡನಾಗಿ ರಕ್ಷಿತಾ ಎಲ್ಲೂರು ತಮ್ಮ ಪಾತ್ರಗಳನ್ನು ಅದ್ಭುತವಾಗಿ ನಿರ್ವಹಿಸಿ ಭೇಷ್‌ ಎನಿಸಿಕೊಂಡರು. ಪುಟಾಣಿ ಕಲಾವಿದರಾದ ವಿಶ್ವತೇಜ ಕುಂದೇಶ್ವರ, ಹನ್ಸಿಕಾ ವೈ, ರಿಶಿಕಾ ಕುಂದೇಶ್ವರ, ರಕ್ಷಿತಾ ಕದ್ರಿ, ಪ್ರಣವ್‌ ಕದ್ರಿ, ಅನಿಕೇತ್‌ ಹೆಬ್ಟಾರ್‌ ದೇವೇಂದ್ರ ಬಲಗಳಾಗಿ ಉತ್ತಮವಾದ ಪ್ರದರ್ಶನ ನೀಡಿದರು. ರಿತ್ವಿಕ್‌ ಹೆಬ್ಟಾರ್‌, ಅಮೃತವರ್ಣ, ಅಮೃತವರ್ಷ, ಅನಂತದೀಪ, ಶ್ರೀಕಾಂತ್‌ ಪುರಾಣಿಕ್‌ ಮತ್ತು ಆಯುಷ್‌ ವೈ ನಾಡಿಜಂಘನ ಬಲಗಳಾಗಿ ಅಬ್ಬರದ ರಂಗಪ್ರವೇಶ ವೇದಿಕೆಯನ್ನು ನಡುಗಿಸಿತು. ಮೇಘಮುಖೀಯ ಪಾತ್ರದಲ್ಲಿ ಕಾಣಿಸಿಕೊಂಡ ದುರ್ಗಾಶ್ರೀ ಉತ್ತಮವಾಗಿ ಪಾತ್ರ ನಿರ್ವಹಿಸಿದರು. ಅಷ್ಟಭುಜೆಯಾಗಿ ಅನನ್ಯಾ ಬಳಂತಿಮುಗರು ಪ್ರದರ್ಶನ ಉತ್ತಮವಾಗಿತ್ತು. ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡ ಪುಟಾಣಿ ಕಲಾವಿದೆ ರಿಶಿಕಾ ಕುಂದೇಶ್ವರ ಅವರು ಕಲಾರಸಿಕರನ್ನು ನಗೆಗಡಲಲ್ಲಿ ತೇಲಾಡಿಸಿದರು.

ಮುಮ್ಮೇಳ ಕಲಾವಿದರ ಹೆಜ್ಜೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ, ಕೆಲವೊಂದು ಕಡೆ ಕಂಡುಬಂದಂತಹ ಲೋಪದೋಷಗಳನ್ನು ಸರಿಪಡಿಸಿಕೊಂಡು ಪ್ರಸಂಗವನ್ನು ಸಾಂಗವಾಗಿ, ಯಶಸ್ವಿಯಾಗಿ ಮುನ್ನಡೆಸಿದ ಗೌರವ ಹಿಮ್ಮೇಳ ಕಲಾವಿದರಿಗೆ ಸಲ್ಲಬೇಕು. ವಾಸುದೇವ ಕಲ್ಲೂರಾಯ ಮಧೂರು ಮತ್ತು ದಯಾನಂದ ಕೋಡಿಕಲ್‌ ಇವರ ಸುಮಧುರ ಕಂಠದ ಭಾಗವತಿಕೆಗೆ ಮದ್ದಳೆಯಲ್ಲಿ ಕೃಷ್ಣರಾಜ್‌ ಭಟ್‌ ನಂದಳಿಕೆ, ಅನಿರುದ್ಧ್, ಚೆಂಡೆಯಲ್ಲಿ ಸುಬ್ರಹ್ಮಣ್ಯ ಚಿತ್ರಾಪುರ ಮತ್ತು ಚಕ್ರತಾಳದಲ್ಲಿ ವಿಕ್ರಮ್‌ ಮಾಯಿರ್ಪಾಡಿ ಸಾಥ್‌ ನೀಡಿದ್ದರು.

ಇಂದಿರಾ ಎನ್‌. ಕೆ. ಕೂಳೂರು

Advertisement

Udayavani is now on Telegram. Click here to join our channel and stay updated with the latest news.

Next