ಸಾಹಿತಿ ಕುಂ. ವೀರಭದ್ರಪ್ಪ ಅವರ ಕಥೆಯನ್ನು ಆಧರಿಸಿ ತಯಾರಾಗಿರುವ “ಮಾನ’ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗಿದೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳನ್ನು ಪೂರ್ಣಗೊಳಿಸಿರುವ “ಮಾನ’ ಚಿತ್ರದ ಬಿಡುಗಡೆಗೆ ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ.
“ಶ್ರೀಸಾಯಿ ಲಕ್ಷ್ಮೀ ಸಿನಿ ಕ್ರಿಯೇಶನ್ಸ್’ ಬ್ಯಾನರ್‌ನಲ್ಲಿ ಕಾಂತಲಕ್ಷ್ಮೀ ರಮೇಶ್ ಬಾಬು ನಿರ್ಮಿಸಿರುವ “ಮಾನ’ ಚಿತ್ರಕ್ಕೆ ಸೆಬಾಸ್ಟಿಯನ್ ಡೇವಿಡ್ ನಿರ್ದೇಶನವಿದೆ. ನಟ ದೇವರಾಜ್, ಹಿರಿಯ ನಟಿ ಉಮಾಶ್ರೀ, ಶ್ರೀನಿವಾಸ ಪ್ರಭು, ಮೂಗು ಸುರೇಶ್, ಸರಿಗಮ ವಿಜಿ, ರತ್ನ ಕುಮಾರಿ, ಹರಿಣಿ ಮೊದಲಾದವರು “ಮಾನ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದೇ ವೇಳೆ ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿರುವ ಚಿತ್ರತಂಡ, “ಮಾನ’ ಚಿತ್ರದ ಮೊದಲ ಟೀಸರ್ ಅನ್ನು ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದೆ.
“ಮಾನ’ ಟೀಸರ್ ಬಿಡುಗಡೆಯ ಬಳಿಕ ಮಾತನಾಡಿದ ನಟ ದೇವರಾಜ್, “ಕುಂ. ವೀರಭದ್ರಪ್ಪನವರ ಅನೇಕ ಕಥೆಗಳನ್ನು ಓದಿ, ಅದರಿಂದ ಪ್ರಭಾವಿತವಾದವನು ನಾನು. ಅವರದ್ದೇ ಒಂದು ಕಥೆಯನ್ನು ಸಿನಿಮಾ ಮಾಡುತ್ತೇನೆ ಎಂದು ನಿರ್ದೇಶಕರು ಹೇಳಿದಾಗ ಖುಷಿಯಿಂದ ಒಪ್ಪಿಕೊಂಡೆ. ಇದರಲ್ಲಿ ಶೋಷಣೆಗಳನ್ನು ಎದುರಿಸಿಕೊಂಡು ಬದುಕುವ ಹಳ್ಳಿಯ ಜೀತದಾಳಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇಡೀ ಸಿನಿಮಾ ಹಳ್ಳಿಯ ವಾತಾವರಣದಲ್ಲಿಯೇ ಚಿತ್ರಿಸಲಾಗಿದೆ. ಬಹಳ ಸಮಯದ ನಂತರ ಇಂಥದ್ದೊಂದು ಪಾತ್ರ ಮಾಡಿರುವುದಕ್ಕೆ ಖುಷಿಯಾಗಿದೆ. ಸಿನಿಮಾ ಮತ್ತು ಪಾತ್ರ ಪ್ರೇಕ್ಷಕರಿಗೂ ಇಷ್ಟವಾಗಲಿದೆ’ ಎಂಬ ಭರವಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ:ಮೊದಲ ಪಂದ್ಯಕ್ಕೆ ಮಯಾಂಕ್ ಕೂಡಾ ಅಲಭ್ಯ; ರೋಹಿತ್ ಜೊತೆ ಆರಂಭಿಕನ್ಯಾರು?
“ಇದೊಂದು ಕಲಾತ್ಮಕ ಸಿನಿಮಾ ರೀತಿಯಲ್ಲಿ ಮೂಡಿಬಂದಿದೆ. ಸಿನಿಮಾದಲ್ಲಿ ಹಾಸ್ಯ ಕೂಡ ಚೆನ್ನಾಗಿದೆ. ಅದು ಜನರಿಗೆ ಇಷ್ಟವಾದರೆ ಇದು ಕಮರ್ಷಿಯಲ್ ಸಿನಿಮಾ ಆಗಲಿದೆ’ ಎಂಬುದು ದೇವರಾಜ್ ಅಭಿಪ್ರಾಯ.
ಬಳಿಕ ಮಾತನಾಡಿದ ಹಿರಿಯ ನಟಿ ಉಮಾಶ್ರೀ, “ಒಂದು ಒಳ್ಳೆಯ ಸಂದೇಶವಿರುವಂಥ ಸಿನಿಮಾದಲ್ಲಿ ಅಭಿನಯಿಸಿರುವುದಕ್ಕೆ ಖುಷಿಯಿದೆ. ದೇವರಾಜ್ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂದ ಕೂಡಲೇ ನಾನು ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡೆ ಎಂದರು