ಪಡುಪಣಂಬೂರು: ಭಕ್ತಿ ಭಾವನೆಯು ಏಕ ತೆೆಯಿಂದ ಕೂಡಿದಲ್ಲಿ, ಧಾರ್ಮಿಕ ಪ್ರಜ್ಞೆ ಜಾಗೃತವಾಗುತ್ತದೆ. ಭಕ್ತಿಯ ಆರಾಧನೆಯ ಕೇಂದ್ರಗಳು ಮನಸ್ಸಿನ ಭಾವನೆಗಳನ್ನು ಅರಳಿಸುವ, ಆಲಿಸುವ ಕೇಂದ್ರಗಳಾಗಬೇಕು ಎಂದು ಮೂಡುಬಿದಿರೆಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಪಡುಪಣಂಬೂರು ಬೈಲಂಗಡಿ ಶ್ರೀ ಚಂದ್ರನಾಥ ಸ್ವಾಮೀ ಬಸದಿಯಲ್ಲಿ ಮೇ 8ರಂದು ಆರಂಭಗೊಂಡ ಧಾಮ ಸಂಪ್ರೋಕ್ಷಣೆ ಪೂರ್ವಕ ಪುನಃಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ವಿಧಿ ವಿಧಾನಕ್ಕೆ ಚಾಲನೆ ನೀಡಿ ಅವರು ಆಶೀರ್ವಚಿಸಿದರು.
ಬೆಳಗ್ಗೆ ತೋರಣ ಮುಹೂರ್ತ, ವಿಮಾನ ಶುದ್ಧಿ, ಮುಖವಸ್ತ್ರ ಉದ್ಘಾಟನೆ, ನಾಂದಿ ಮಂಗಲ, ವಾಸ್ತು ಪೂಜಾ ವಿಧಾನ, ನವಗ್ರಹ ಮಹಾಶಾಂತಿ, ದಿಕಾಲಕ ಬಲಿ ಶ್ರೀ ಚಂದ್ರನಾಥ ಸ್ವಾಮಿಗೆ ಕಲಶಾಭಿಷೇಕ ಜರಗಿತು.
ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರರು ಹಾಗೂ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎಂ. ದುಗ್ಗಣ್ಣ ಸಾವಂ ತರು, ಸಮಿತಿಯ ಗೌರವಾಧ್ಯಕ್ಷ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಅಶೋಕ್ ರಾಜ್ ಎರ್ಮಾಳು ಬೀಡು, ಅರ್ಕುಳಬೀಡು ವಜ್ರನಾಭ ಶೆಟ್ಟಿ, ಕಾರ್ಯಾಧ್ಯಕ್ಷ ಪುಷ್ಪರಾಜ್ ಜೈನ್ ಮಂಗಳೂರು, ಪ್ರಸನ್ನ ಕುಮಾರ ಉಡುಪಿ, ಗೌರವ ಸಲಹೆಗಾರರ ಎಲ್. ಡಿ. ಬಲ್ಲಾಳ್, ಕೋಶಾಧಿಕಾರಿ ರತ್ನಾಕರ ಜೈನ್ ಮಂಗಳೂರು, ಕಾರ್ಯದರ್ಶಿ ಧನಂಜಯ್‌ಕುಮಾರ್ ಬೆಳ್ಳಾಯರು, ಸೇವಾಕರ್ತ ಮೂಲ್ಕಿ ಅರಮನೆಯ ಗೌತಮ್ ಜೈನ್, ಆಶಾಲತಾ, ವರ್ಷ, ಪವಿತ್ರೇಶ್, ರಕ್ಷಾ, ಶೀತಲ್, ನಿಶ್ಚಲ್ ಸಮಿತಿಯ ಸದಸ್ಯರು, ಪಡುಪಣಂಬೂರು ಜೈನ ಸಮಾಜ ಸೇವಾ ಸಂಘದ ಸದಸ್ಯರು, ಗ್ರಾಮದ ಶ್ರಾವಕ ಮತ್ತು ಶ್ರಾವಕಿಯರು ಉಪಸ್ಥಿತರಿದ್ದರು.