Advertisement
ಶ್ರೀ ಪಾಂಡುರಂಗ ದೇವಸ್ಥಾನ ಬಡಾವಣೆಯ ಸದ್ಭಕ್ತರು ದೇವಿಗೆ ಉಡಿ ತುಂಬಿದರು. ಭಕ್ತಿ ಭಾವದೊಂದಿಗೆ ಪರಸ್ಪರ ಭಂಡಾರ ಎರಚಿ ಹೊನ್ನಾಟದಲ್ಲಿ ತೊಡಗಿದ್ದರು. ಮಾರ್ಗದುದ್ದಕ್ಕೂ ಭಂಡಾರ ರಾಶಿಯೇ ಇತ್ತು. ಡೊಳ್ಳು, ಚಂಡಿವಾದ್ಯ, ಹೆಜ್ಜೆ ಮೇಳ, ಜಾಂಜ್ ಸೌಂಡ್ ಸಿಸ್ಟ್ಂ ಸೇರಿದಂತೆ ಸಕಲ ವಾದ್ಯ ವೈಭವದೊಂದಿಗೆ ದೇವಿಯರ ಮೂರ್ತಿಗಳನ್ನು ಸಡಗರ-ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.ನಂತರ ಗ್ರಾಮದ ಹಿರಿಯರು ಉಡಿ ತುಂಬಿದರು. ಸಂಜೆ 5 ಗಂಟೆಗೆ ದೇವಿಯರನ್ನು ಮೂಲ ಸ್ಥಳಕ್ಕೆ ತರಲಾಯಿತು.
ಉಪ್ಪಿನಬೆಟಗೇರಿ: ಗ್ರಾಮದೇವಿಯರ ಜಾತ್ರಾ ಮಹೋತ್ಸವ ಪ್ರಯುಕ್ತ ಗ್ರಾಮದೇವಿ ದೇವಸ್ಥಾನದಲ್ಲಿ ಗುರುವಾರ ಬೆಳ್ಳಿಗ್ಗೆ 5 ಗಂಟೆಗೆ ಚಂಡಿ ಹೋಮ ಜರುಗಿತು. ಹೋಮದಲ್ಲಿ ಗೃಹದೋಷ, ಸರ್ಪದೋಷ, ಕಂಕಣ ಭಾಗ್ಯ, ಸರ್ವರೋಗ ನಿವಾರಣೆ, ವಿದ್ಯೆ, ಸಂಪತ್ ಪ್ರಾಪ್ತಿ, ಪತಿ-ಪತ್ನಿ ಕಲಹ ಹಾಗೂ ಸಕಲ ಇಷ್ಟಾರ್ಥ ಸಿದ್ಧಿಗಾಗಿ ಗೋಕಾಕಿನ ವಿಜಯ ಶಾಸ್ತ್ರಿ ಹಿರೇಮಠ ಅವರಿಂದ ಚಂಡಿ ಹೋಮ ನಡೆಯಿತು. ಸೇರಿದ ಜನರಿಗೆ ಕಂಕಣ ಕಟ್ಟಿದರು. ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.