Advertisement
ನಾವು ಮಾಡುವ ಕರ್ತವ್ಯದಲ್ಲಿ ಭಗವಂತನನ್ನು ಕಾಣಬೇಕು. ಕರ್ತವ್ಯ ಅಂದರೆ ಪೂಜೆ, ಪುನಸ್ಕಾರ ಮಾತ್ರವಲ್ಲ. ನಮ್ಮ ವೃತ್ತಿಯೇ ಕರ್ತವ್ಯ. ರೈತರು, ಶಿಕ್ಷಕರು, ಕುಂಬಾರರು ಹೀಗೆ ಹೊಟ್ಟೆ ಪಾಡಿಗೆ ಮಾಡುವ ಯಾವ ಕೆಲಸವಾದರೂ ಮೋಸ, ವಂಚನೆ ರಹಿತವಾಗಿ ಮಾಡಿದರೆ ಭಗವಂತ ಪೂಜೆ ಸಲ್ಲಿಸಿದಂತೆ. ಅತಿಯಾದ ಸ್ವಾರ್ಥ ಒಳ್ಳೆಯದಲ್ಲ ಎಂದು ಶ್ರೀ ಕೃಷ್ಣ ಹೇಳುತ್ತಾನೆ. ಭ್ರಷ್ಟಚಾರದ ಮೂಲವೇ ದುರಾಸೆೆ. ಎಷ್ಟು ಅಗತ್ಯವೋ ಅಷ್ಟು ಮಾತ್ರ ಅಪೇಕ್ಷೆ ಪಡಿ. ಅತಿ ಆಸೆ ಬೇಡ. ಕೆಟ್ಟ ಯೋಚನೆ ಮಾಡ ಬೇಡಿ. ಸ್ವಾರ್ಥ ಬಿಟ್ಟು , ಸರಳ ಜೀವನ ನಡೆಸಿ, ಆಗ ಭ್ರಷ್ಟಾಚಾರಕ್ಕೆ ಅವಕಾಶವೇ ಇರುವು ದಿಲ್ಲ. ಇದರಿಂದ ಜೀವನದಿಂದ ದುವ್ಯìಸನ ವನ್ನೂ ದೂರವಿಡಬಹುದು. ದುವ್ಯìಸನ ಮುಕ್ತ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಕೊಟ್ಟ ಸಂದೇಶ ಪೂರಕ. ಪರಮಾತ್ಮನಲ್ಲಿ ಭಕ್ತಿ ನಿಸ್ವಾರ್ಥ ಕರ್ತವ್ಯ ಇವೆರಡು ಇದ್ದರೆ ಅನ್ಯಾಯ ನಡೆಯಲು ಸಾಧ್ಯವೇ ಇಲ್ಲ, ಉತ್ತಮ ಸಮಾಜ ನಿರ್ಮಾಣವೇ ಶ್ರೀ ಕೃಷ್ಣನ ಸಂದೇಶ.– ಶ್ರೀ ವಿಶ್ವೇಶತೀರ್ಥ ಶ್ರೀಪಾದರು
ಪರ್ಯಾಯ ಶ್ರೀ ಪೇಜಾವರ ಮಠ, ಶ್ರೀ ಕೃಷ್ಣಮಠ, ಉಡುಪಿ