ಕಾಸರಗೋಡು: ಭಕ್ತಿ ಹಾಗೂ ಶ್ರದ್ಧೆಯಿಂದ ಭಗವಂತನನ್ನು ಭಜಿಸಿದರೆ ನಮಗೆ ಶಕ್ತಿಯನ್ನು ನೀಡುವ ಮೂಲಕ ದೇವರು ಅನುಗ್ರಹಿಸುತ್ತಾನೆಂದು ಶ್ರೀ ಕ್ಷೇತ್ರ ಗೆಜ್ಜೆಗಿರಿ ಶ್ರೀ ಕೋಟಿಚೆನ್ನಯ ಮೂಲಸ್ಥಾನದ ಕ್ಷೇತ್ರ ಯಜಮಾನ ಶ್ರೀಧರ ಪೂಜಾರಿ ತಿಳಿಸಿದರು.
ಶ್ರೀ ಕ್ಷೇತ್ರದ ಪುನರುತ್ಥಾನ ಕೆಲಸಗಳ ಬಗ್ಗೆ ಮನವಿ ಪತ್ರಿಕೆ ಬಿಡುಗಡೆಗೊಳಿಸಿ ಕಾಸರಗೋಡು ವಲಯ ಮಟ್ಟದ ಸಮಾಜ ಬಾಂಧವರ ಸಭೆಯಲ್ಲಿ ಮಾತನಾಡಿ, ಸರ್ವರೂ ಈ ಸತ್ಕರ್ಮಕ್ಕೆ ಕೈಜೋಡಿಸಬೇಕೆಂದು ತಿಳಿಸಿದರು. ಸಮಿತಿಯ ಕಾರ್ಯದರ್ಶಿ ಸುಧಾಕರ ತಿಂಗಳಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿ ಅಭಿವೃದ್ಧಿ ಕೆಲಸಗಳ ಬಗ್ಗೆ ವಿವರಿಸಿದರು.
ಕಾಸರಗೋಡು ವಲಯ ಸಮಿತಿಯ ಅಧ್ಯಕ್ಷರಾಗಿ ಭಾಸ್ಕರ ಕೆ., ಉಪಾಧ್ಯಕ್ಷರಾಗಿ ಬಂಟಪ್ಪ ಪೂಜಾರಿ ಬೆದ್ರಡ್ಕ, ನಾರಾಯಣ ಪೂಜಾರಿ, ತಾರಾನಾಥ ಗಂಗೆ, ಸಂಕಪ್ಪ ಸುವರ್ಣ ಬಾಡೂರು, ದಿಲೀಪ್ ಕುಮಾರ್ ಕೆ., ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ ಪೂಜಾರಿ, ಕಾರ್ಯದರ್ಶಿಗಳಾಗಿ ರವೀಂದ್ರ ಕೂಡ್ಲು, ಬಾಲಕೃಷ್ಣ ಸುವರ್ಣ ದೇಲಂಪಾಡಿ, ವಿಶಾಲಾಕ್ಷಿ, ಶಶಿಧರ ಬೊಳ್ಳಂದೂರು, ಶಮ್ಮಿ ಕುಮಾರ್ ಕಾಸರಗೋಡು, ಕೋಶಾಧಿಕಾರಿಯಾಗಿ ಮಹೇಶ್ ಕಾಸರಗೋಡು ಅವರನ್ನು ಆರಿಸಲಾಯಿತು.
ಕಾಸರಗೋಡು ಜಿಲ್ಲಾ ಬಿಲ್ಲವ ಸೇವಾ ಸಂಘದ ಕೆ. ಕಮಲಾಕ್ಷ ಸುವರ್ಣ ಅಧ್ಯಕ್ಷತೆ ವಹಿಸಿದರು.
ಶಿವರಾಮ ನೀರ್ಚಾಲು, ಸಂಜೀವ ಪೂಜಾರಿ, ರಮೇಶ್ ಪೂಜಾರಿ, ರಾಘವ ಪೂಜಾರಿ, ಗುರುಪ್ರಸಾದ್, ರವಿಚಂದ್ರ ಕೋಟೆಕ್ಕಾರು, ಸಂಕಪ್ಪ ಸುವರ್ಣ ಬಾಡೂರು, ಚಂದ್ರಶೇಖರ ಚಿಪುÉಕೋಟೆ ಮೊದಲಾದವರು ಮಾತನಾಡಿದರು. ಶಿವ ಕೆ. ಸ್ವಾಗತಿಸಿದರು. ದಯಾನಂದ ವಂದಿಸಿದರು. ಭಾಸ್ಕರ ಕೆ. ಕಾರ್ಯಕ್ರಮ ನಿರೂಪಿಸಿದರು.