Advertisement

ಮಾದಪ್ಪನ ದರ್ಶನ ಪಡೆದ ಭಕ್ತರು

05:49 AM Jun 09, 2020 | Lakshmi GovindaRaj |

ಹನೂರು: ಲಾಕ್‌ಡೌನ್‌ ಹಿನ್ನೆಲೆ ಎರಡೂವರೆ ತಿಂಗಳಿನಿಂದ ಸ್ಥಗಿತಗೊಂಡಿದ್ದ ಮಲೆ ಮಹದೇಶ್ವರನ ದರ್ಶನ ಸೋಮವಾರ ದಿಂದ ಮುಂಜಾಗ್ರತಾ ಕ್ರಮ ಗಳೊಂದಿಗೆ ಪುನಾರಂಭವಾಗಿದೆ. ರಾಜಗೋಪುರದ ಆವರಣದಲ್ಲಿ ಭೌತಿಕ  ಅಂತರ ಕಾಯ್ದುಕೊಂಡು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಆವರಣದಲ್ಲಿಯೇ ಭಕ್ತಾದಿಗಳಿಗೆ ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ, ಸ್ಯಾನಿಟೈಸರ್‌ ನೀಡಿದ ಬಳಿಕ ಮಾದಪ್ಪನ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

Advertisement

7 ಸಾವಿರಕ್ಕೂ ಅಧಿಕ ಭಕ್ತರು: ಮಾದಪ್ಪನ ದರ್ಶನಕ್ಕಾಗಿ ಜಿಲ್ಲೆ ಸೇರಿದಂತೆ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ವಿವಿಧ ಜಿಲ್ಲೆ  ಗಳಿಂದ ಭಕ್ತಾದಿಗಳು ಆಗಮಿಸಿದ್ದರು. ರಾತ್ರಿ 7 ಗಂಟೆಯವರೆಗೆ ಮಾತ್ರ ಅವಕಾಶ  ಕಲ್ಪಿಸಲಾಗಿತ್ತು. 8 ಗಂಟೆವರೆಗೆ ಲಘು ಉಪಾಹಾರ ನೀಡಲಾಯಿತು.

ಜಿಲ್ಲಾಧಿಕಾರಿ ಪರಿಶೀಲನೆ: ಮಾದಪ್ಪನ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಿರುವ ಹಿನ್ನೆಲೆ ಜಿಲ್ಲಾಧಿಕಾರಿ ಡಾ. ಎಂ.ಆರ್‌.ರವಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಮಹದೇಶ್ವರನ ದರ್ಶನ ಪಡೆದು ಮುನ್ನೆಚ್ಚರಿಕಾ ಕ್ರಮಗಳನ್ನು ಪರಿಶೀಲಿಸಿದರು.  ಇದೇ ವೇಳೆ ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮತ್ತು ಇನ್ನಿತರ ಕಾರ್ಯಗಳ ಬಗ್ಗೆ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರಿಗೆ ಅಗತ್ಯ ಸೂಚನೆ ನೀಡಿದರು. ಪ್ರಾಧಿಕಾರದ ತಾಂತ್ರಿಕ ಸಲಹೆಗಾರ  ಕುಮಾರ್‌, ಅಧೀಕ್ಷಕ ಬಸವರಾಜು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next