Advertisement

ವರ್ಷಾಂತ್ಯ: ನಂಜನಗೂಡಿಗೆ ಹರಿದು ಬಂದ ಭಕ್ತ ಸಾಗರ

10:59 AM Dec 26, 2023 | Team Udayavani |

ನಂಜನಗೂಡು: ಕ್ರಿಸ್ಮಸ್‌, ಹೊಸ ವರ್ಷ ಹಾಗೂ ಹುಣಿಮೆ ಮತ್ತು ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಧಾರ್ಮಿಕ ಹಾಗೂ ದೇವಾಲಯಗಳ ನಗರ ನಂಜನಗೂಡು ಪ್ರವಾಸಿಗರು, ಭಕ್ತ ರಿಂದ ತುಂಬಿ ತುಳುಕುತ್ತಿತ್ತು.

Advertisement

ಪಟ್ಟಣವು  ಧಾರ್ಮಿಕ ಪುಣ್ಯ ಕ್ಷೇತ್ರವು ಹೌದು. ಪಟ್ಟಣದಲ್ಲಿ ಸುಪ್ರಸಿದ್ಧ ಶ್ರೀಕಂಠೇಶ್ವರನ ದೇವಾ ಲಯ, ಪವಿತ್ರ ನದಿ ಕಪಿಲೆ ನದಿಯ ದಡದಲ್ಲಿ ಅಯ್ಯಪ್ಪ ಸ್ವಾಮಿ ದೇವಾಲಯ ಹಾಗೂ ತಾಯಿ ಚಾಮುಂಡೇಶ್ವರಿ ದೇವಾಲಯ, ದತ್ತಾತ್ರೇಯ ಸ್ವಾಮಿ ದೇವಾಲಯ, ಕಾಶಿ ವಿಶ್ವನಾಥ ದೇವಾ ಲಯ ಪರಶುರಾಮ ದೇವಾಲಯ ಮತ್ತೂಂದು ಭಾಗದಲ್ಲಿ ಶ್ರೀ ಗುರು ರಾಘವೇಂದ್ರ ಅವರ ಬೃಂದಾವನಕ್ಕೆ ಸಾವಿರಾರೂ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.

ನಂಜನಗೂಡಿನ ಕೇಂದ್ರ ಬಿಂದುವಾಗಿರುವ ನಂಜುಂಡೇಶ್ವರನ ದರ್ಶನ ಪಡೆಯಲು ರಾಜ್ಯ ಅಂತಾ ರಾಜ್ಯಗಳಿಂದ ಭಕ್ತಾದಿಗಳು ಆಗಮಿಸು ತ್ತಾರೆ. ಮೂರು ದಿನದ ರಜಾ ಹಿನ್ನೆಲೆಯಲ್ಲಿ ಮೈಸೂ ರಿನಿಂದ ಊಟಿಗೆ ತೆರಳುವವರು ಮೈಸೂರಿನಿಂದ ಸೇಲಂ ಕೊಯಮತ್ತೂರು ತೆರಳುವವರು, ನಂಜನ ಗೂಡಿನ ದೇವಾಲಯಕ್ಕೆ ಭೇಟಿ ನೀಡುವುದು ವಾಡಿಕೆ.

ಊಟಿ ರಸ್ತೆ ಸಂಪೂರ್ಣ ಜಾಮ್‌: ಪ್ರವಾಸಿಗರ ಹೆಚ್ಚಳದಿಂದ ಮೈಸೂರಿನಿಂದ ಸೇಲಂ ಕೊಯ ಮತ್ತೂರಿಗೆ ತಲುಪುವ ರಾಷ್ಟ್ರೀಯ ಹೆದ್ದಾರಿ 150 ಎನ್‌ಎಚ್‌ ಹಾಗೂ ಮೈಸೂರಿನಿಂದ  ಊಟಿ ಮತ್ತು ಕೇರಳಕ್ಕೆ ತೆರಳಬೇಕಾದರೆ ರಾಷ್ಟ್ರೀಯ ಹೆದ್ದರಿ 166 ಎನ್‌ಎಚ್‌  2 ರಾಷ್ಟ್ರೀಯ ಹೆ¨ªಾರಿಗಳಲ್ಲಿ ಕಳೆದಮೂರು ದಿನಗಳಿಂದ ಟ್ರಾಫಿಕ್‌ ಜಾಮ್‌ ಹೆಚ್ಚಿದ್ದು, ಪಟ್ಟಣದ ಎಂ.ಜಿ.ರಸ್ತೆ, ಆರ್‌.ಪಿ.ರಸ್ತೆ, ವಿಶ್ವೇಶ್ವರ ಯ್ಯ ವೃತ್ತ, ಅಪೋಲೋವೃತ್ತ ಸಂಪೂರ್ಣ ಜಾಮ್‌ ಆಗಿದ್ದು ಸಂಚಾರಿ ಪೊಲೀಸ್‌ ಹಾಗೂ ಹೋಂ ಗಾರ್ಡ್‌ ಗಳು ಪರದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ.

ಆ್ಯಂಬುಲೆನ್ಸ್‌ಗೂ ತಟ್ಟಿದ ಟ್ರಾಫಿಕ್‌ ಬಿಸಿ: ಚಾಮ ರಾಜನಗರ ಜಿಲ್ಲಾ ಆಸ್ಪತ್ರೆಯಿಂದ ಮೈಸೂರು ಕೆ.ಅರ್‌.ಆಸ್ಪತ್ರೆಗೆ ನಂಜನಗೂಡು ಮಾರ್ಗವಾಗಿ ತೆರಳಬೇಕಾದರೆ ಆ್ಯಂಬುಲೆನ್ಸ್‌ ಅಪೋಲೋ ವೃತದ ಬಳಿ ಟ್ರಾಫಿಕ್‌ ಜಾಮ್‌ ನಿಂದ ಸುಮಾರು 20 ನಿಮಿಷಗಳ ಕಾಲ  ಸಿಲುಕಿಕೊಂಡಿತ್ತು. ಲೋ ಬಿಪಿ ಮತ್ತು ಎದೆ ನೋವಿನಿಂದ ನರಳುತ್ತಿದ್ದ ರೋಗಿ ಆ್ಯಂಬುಲೆನ್ಸ್‌ ಒಳಗೆ  ನರಳುತ್ತಿದ್ದ ರೋಗಿ ಸಮಯಕ್ಕೆ ಸರಿ ಯಾಗಿ ನಂಜನಗೂಡು ಸಂಚಾರಿ ಪೊಲೀಸರು ಟ್ರಾಫಿಕ್‌ ತೆರವುಗೊಳಿಸಿ ಆ್ಯಂಬುಲೆನ್ಸ್‌ ತೆರಳಲು ದಾರಿ ಮಾಡಿಕೊಟ್ಟರು.

Advertisement

ಅಧಿಕ ಸಂಖ್ಯೆಯಲ್ಲಿ ನಂಜನಗೂಡಿಗೆ ಪ್ರವಾಸಿಗರು ಮತ್ತು ಭಕ್ತಾದಿಗಳು ಆಗಮಿಸು ತ್ತಿರುವ ಹಿನ್ನೆಲೆ ನಂಜನಗೂಡಿನ ಹೂರ ವಲಯಗಳಲ್ಲಿ ಇರುವ ರೆಸಾರ್ಟ್‌‌ಗಳು ಭರ್ತಿಯಾಗಿದೆ,  ಮುಖ್ಯ ರಸ್ತೆಯಲ್ಲಿ 250ಕ್ಕೂ ಅಧಿಕ ರೂಂ., ಪಟ್ಟಣದ ಒಳಗೆ 300 ರೂಂಗಳು, 25ಕ್ಕೂ ಅಧಿಕ  ಹೋಮ್‌ ಸ್ಟೇಗಳು, 20ಕ್ಕೂ ಅಧಿಕ  ಕಲ್ಯಾಣ ಮಂಟಪಗಳು ಸಂಪೂರ್ಣ ಭರ್ತಿಯಾಗಿದೆ.-ನಂಜುಂಡ ಸ್ವಾಮಿ, ತಾ. ಹೊಟೇಲ್‌ ಮಾಲೀಕರ ಸಂಘದ ಸದಸ್ಯ 

-ತಂಬುರಿ ಸಿದ್ದು

Advertisement

Udayavani is now on Telegram. Click here to join our channel and stay updated with the latest news.

Next