Advertisement
ಉಡುಪಿ ಶ್ರೀಕೃಷ್ಣ ಮಠಉಡುಪಿ ಶ್ರೀಕೃಷ್ಣ ಮಠದಲ್ಲಿ ರವಿವಾರ ಕೊರೊನಾ ಬಳಿಕ ದಾಖಲೆ ಸಂಖ್ಯೆಯ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು. 5,000ಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು.
ಮಾ. 22ರ ಬಳಿಕ ಕೊರೊನಾ ಕಾರಣದಿಂದ ಮಠಕ್ಕೆ ಭಕ್ತರ ಭೇಟಿಯನ್ನು ರದ್ದು ಗೊಳಿಸಲಾಗಿತ್ತು. ಸೆ.28ರಿಂದ ಅಪರಾಹ್ನ 2 ಗಂಟೆ ಅವಧಿ ಮಾತ್ರ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾ ಯಿತು, ಬಳಿಕ ನ. 4ರಿಂದ ಬೆಳಗ್ಗೆ ಸಮಯ ದಲ್ಲಿಯೂ ಮತ್ತೆರಡುಗಂಟೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಈಗ ದೀಪಾವಳಿ ಹಬ್ಬದ ಪ್ರಯುಕ್ತ
ದೂರದೂರುಗಳ ಭಕ್ತರಿಗೆ ಅನುಕೂಲವಾಗಲೆಂದು ಹೆಚ್ಚು ಸಮಯ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿ ಸೇರಿದಂತೆ ಬೆಳ್ತಂಗಡಿ ತಾಲೂಕಿನ ಸೌತಡ್ಕ ಮಹಾಗಣಪತಿ ದೇವಸ್ಥಾನ, ಮಣ್ಣಿನ ಹರಕೆ ಪ್ರಸಿದ್ಧಿಯ ಸುರ್ಯ ಸದಾಶಿವರುದ್ರ ದೇವಸ್ಥಾನ ಮೊದಲಾದೆಡೆ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಧರ್ಮಸ್ಥಳದಲ್ಲಿ ಶನಿವಾರ 10 ಸಾವಿರಕ್ಕೂ ಅಧಿಕ ಭಕ್ತರು ದೇವರ ದರ್ಶನ ಪಡೆದು ಅನ್ನಪ್ರಸಾದ ಸ್ವೀಕರಿಸಿದ್ದಾರೆ. ಸೋಮವಾರ ಭಕ್ತರ ಸಂಖ್ಯೆ ಮತ್ತಷ್ಟು ಏರಿಕೆಯಾಗಲಿದೆ. ಹಾಸನ ಮೊದಲಾದೆಡೆಗಳಿಂದ ಬಂದ ಹೂ ಮಾರಾಟಗಾರರು ಈ ವರ್ಷ ಹಿಂದೆಂದಿಗಿಂತಲೂ ಅಧಿಕ ಸಂಖ್ಯೆಯಲ್ಲಿ ವ್ಯಾಪಾರದಲ್ಲಿ ತೊಡಗಿರುವುದು ಕಂಡುಬಂತು. ಕಟೀಲು ಕಟೀಲಿನ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನಕ್ಕೆ ರವಿವಾರ 8ರಿಂದ 10 ಸಾವಿರ ಭಕ್ತರು ಭೇಟಿ ನೀಡಿ ದೇವಿಯ ದರ್ಶನ ಪಡೆದು ವಿವಿಧ ಸೇವೆಗಳನ್ನು ಸಲ್ಲಿಸಿದರು. ಕುಕ್ಕೆ ಕ್ಷೇತ್ರ: ತುಲಾಭಾರ, ಅನ್ನಪ್ರಾಶನ ಆರಂಭ
ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ. 15ರಿಂದ ತುಲಾಭಾರ ಮತ್ತು ಅನ್ನಪ್ರಾಶನ ಸೇವೆಗಳು ಆರಂಭ ಗೊಂಡಿವೆ.
ಕೊರೊನಾ ಕಾಲ ದಲ್ಲಿ ಸ್ಥಗಿತಗೊಂಡಿದ್ದ ಕೆಲವು ಪ್ರಮುಖ ಸೇವೆಗಳನ್ನು ತಿಂಗಳ ಹಿಂದೆ ಆರಂಭಿಸಿದ್ದರೂ ಈ ಎರಡು ಸೇವೆಗಳು ಆರಂಭವಾಗಿರಲಿಲ್ಲ. ಇದೀಗ ಎಲ್ಲ ಸೇವೆಗಳು ಪ್ರಾರಂಭಗೊಂಡಂತಾಗಿದೆ. ದೀಪಾವಳಿಯ ಶುಭ ದಿನವಾದ ರವಿವಾರ ಲಾಕ್‌ಡೌನ್ ಬಳಿಕ ನಡೆದ ಪ್ರಥಮ ತುಲಾಭಾರ ಸೇವೆಯಲ್ಲಿ 23 ಭಕ್ತರು ತುಲಾಭಾರ ಮಾಡಿಸಿಕೊಂಡರು.
Related Articles
ಕುಕ್ಕೆಯಲ್ಲಿ ಸೋಮವಾರ ದೇವರು ಹೊರಾಂಗಣ ಪ್ರವೇಶಿಸುವ ಮೂಲಕ ಉತ್ಸವಗಳು ಆರಂಭಗೊಳ್ಳಲಿವೆ. ದೀಪಾವಳಿ ಪ್ರಯುಕ್ತ ಪಾಲಕಿ ಮತ್ತು ಬಂಡಿ ಉತ್ಸವ ನೆರವೇರಲಿದೆ.
Advertisement