Advertisement

ಬಿಳಿಗಿರಿರಂಗನಬೆಟ್ಟಕ್ಕೆ ಭಕ್ತರ ಆಗಮನ

12:05 PM Jul 06, 2021 | Team Udayavani |

ಯಳಂದೂರು: ಪುರಾಣ ಪ್ರಸಿದ್ಧ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇಗುಲದಲ್ಲಿ ಸೋಮವಾರದಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

Advertisement

ಕೋವಿಡ್‌ ನಿಯಮಗಳ ಪಾಲನೆ ಕಡ್ಡಾಯವಾಗಿದೆ. ದೇವಸ್ಥಾನದ ಗರುಡಗಂಬದ ಹತ್ತಿರ ಇದಕ್ಕಾಗಿ ಬ್ಯಾರಿಕೇಡ್‌ ನಿರ್ಮಿಸಲಾಗಿದೆ. ಸಾಮಾಜಿಕ ಅಂತರಕಾಯ್ದುಕೊಂಡು ಸಾರ್ವಜನಿಕರು ದೇವರ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗಿತ್ತು. ಪ್ರತಿ ಭಕ್ತರಿಗೂ ಥರ್ಮಲ್‌ ಸ್ಕ್ಯಾನಿಂಗ್‌ ಮಾಡಿ, ಸ್ಯಾನಿಟೈಜರ್‌ ಮಾಡಿ ಒಳಕ್ಕೆ ಬಿಡಲಾಯಿತು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕೆಂಬ ನಿಯಮವನ್ನು ಭಕ್ತರು ಪಾಲಿಸಿದರು. ಆದರೆ ಯಾವುದೇ ತೀರ್ಥಪ್ರಸಾದ, ಸೇವೆಗಳು ಇರಲಿಲ್ಲ.ಕೆಸ್ಸಾರ್ಟಿಸಿ ವತಿಯಿಂದ ಬೆಟ್ಟಕ್ಕೆ ಕೇವಲ ಒಂದು ಬಸ್‌ ಬಿಡಲಾಗಿತ್ತು. ಹೀಗಾಗಿ ಭಕ್ತರ ಸಂಖ್ಯೆ ಇಳಿಮುಖವಾಗಿತ್ತು. ಖಾಸಗಿ ವಾಹನಗಳಲ್ಲಿ

ಗೋಪಾಲನ ದರ್ಶನ ಪಡೆದ ಭಕ್ತರು :

ಗುಂಡ್ಲುಪೇಟೆ: ಪ್ರಸಿದ್ಧ ಧಾರ್ಮಿಕ ಸ್ಥಳ ಹಿಮವದ್‌ ಗೋಪಾಲಸ್ವಾಮಿ ಬೆಟ್ಟ ಸೋಮವಾರ ಬಾಗಿಲು ತೆರೆದಿರುವ ಹಿನ್ನೆಲೆ 200ಕ್ಕೂ ಹೆಚ್ಚು ಮಂದಿ ಭಕ್ತಾದಿಗಳು ಗೋಪಾಲನ ದರ್ಶನ ಪಡೆದರು. ದೇವಸ್ಥಾನದಲ್ಲಿ ಪೂಜೆಗೆ ಮಾತ್ರ ಅವಕಾಶ ನೀಡಲಾಗಿತ್ತು.

ಭಕ್ತಾದಧಿಗಳು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಮೊದಲ ದಿನವಾದ ಹಿನ್ನೆಲೆ ತಹಶೀಲ್ದಾರ್‌ ರವಿಶಂಕರ್‌ ಬೆಟ್ಟಕ್ಕೆ ಭೇಟಿ ನೀಡಿರು. ಸಿದ್ಧತೆ ಪರಿಶೀಲಿಸಿ ಕೋವಿಡ್‌ ಮಾರ್ಗಸೂಚಿಯಂತೆ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.ಭಕ್ತಾಧಿಗಳ ಸಂಖ್ಯೆಗೆ ಅನುಗುಣವಾಗಿ ಕೆಎಸ್‌ಆರ್‌ಟಿಸಿಯಿಂದ ಬಸ್‌ ಬಿಡಲಾಗಿತ್ತು.ಸುಮಾರು200ಕ್ಕೂ ಅಧಿಕ ಮಂದಿ ಬೆಟ್ಟಕ್ಕೆ ಪ್ರಯಾಣ ಬೆಳೆಸಿದ್ದರು.

Advertisement

ಬಂಡೀಪುರ ಸಫಾರಿ: ಬಂಡೀಪುರ ಅಭಯಾರಣ್ಯದ ಸಫಾರಿಗೆ ಹೋಗುವವರ ಸಂಖ್ಯೆಯುಕೂಡ ಹೆಚ್ಚಿದೆ. ಸೋಮವಾರ100ಕ್ಕೂ ಅಧಿಕ ಮಂದಿ ಆಗಮಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next