ಮುಂಬೈ : ಪುಣೆಯ ದಗ್ದುಶೇತ್ ಹಲವಾಯಿ ಪ್ರದೇಶದ ದೇವಸ್ಥಾನದಲ್ಲಿರುವ ಗಣೇಶನಿಗೆ 10 ಕೆ.ಜಿ. ತೂಕದ ಬಂಗಾರದ ಕಿರೀಟ ದಾನದ ರೂಪದಲ್ಲಿ ಬಂದಿದೆ.
ಗಣೇಶ ಚತುರ್ಥಿ ನಿಮಿತ್ತ ಇಲ್ಲಿಯ ದೇವಸ್ಥಾನಕ್ಕೆ ಭಕ್ತರೊಬ್ಬರು ಚಿನ್ನದ ಕಿರೀಟ ನೀಡಿದ್ದಾರೆ. ಆದರೆ, ತಮ್ಮ ಹೆಸರು ಬಹಿರಂಗ ಪಡಿಸದಂತೆ ದೇವಸ್ಥಾನದ ಆಡಳಿತ ಮಂಡಳಿಗೆ ದಾನಿಗಳು ಮನವಿ ಮಾಡಿಕೊಂಡಿದ್ದಾರೆ.
ವಿಶೇಷವಾಗಿ ಸಿದ್ಧಪಡಿಸಲಾದ ಕಿರೀಟವನ್ನು ಗಣೇಶನ ಮೂರ್ತಿಗೆ ತೊಡಿಸಲಾಗಿದ್ದು, ಎಲ್ಲರ ಆಕರ್ಷಣೆಗೆ ಕಾರಣವಾಗಿದೆ.
ದಗ್ದುಶೇತ್ ಹಲವಾಯಿ ಗಣೇಶ ದೇವಸ್ಥಾನಕ್ಕೆ ಅಪಾರ ಸಂಖ‍್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅದರಲ್ಲೂ ಗಣೇಶೋತ್ಸವಕ್ಕೆ ಭಕ್ತರ ಸಾಗರವೇ ಹರಿದು ಬರುತ್ತದೆ.
ಇನ್ನು ಮಹಾರಾಷ್ಟ್ರದಲ್ಲಿ ಪ್ರತಿ ವರ್ಷ ಗಣೇಶನ ಹಬ್ಬವನ್ನು ಸಡಗರ ಸಂಭ್ರದಿಂದ ಆಚರಿಸಲಾಗುತ್ತದೆ. ಸಾರ್ವಜನಿಕ ಗಣಪತಿಗಳನ್ನು ಭಕ್ತಿಪೂರ್ವಕವಾಗಿ ಪ್ರತಿಷ್ಠಾಪಿಸಲಾಗುತ್ತದೆ. ಗಣೇಶನ ದೇವಸ್ಥಾನಗಳಲ್ಲಿಯೂ ವಿಶೇಷ ಪೂಜೆಗಳು ಜರುಗುತ್ತವೆ. ಈ ಬಾರಿ ಕೋವಿಡ್ ಸೋಂಕಿನ ಭೀತಿ ಹಿನ್ನೆಲೆ ಅಬ್ಬರದ ಗಣೇಶೋತ್ಸವಕ್ಕೆ ಕೊಂಚ ಬ್ರೇಕ್ ಬಿದ್ದಿದೆ.