Advertisement

ದತ್ತಮಾಲೆ ಭಕ್ತರಿಗೆ ಬೀಳ್ಕೊಡುಗೆ

03:07 PM Dec 30, 2020 | Team Udayavani |

ಅರಸೀಕೆರೆ: ದತ್ತಮಾಲೆ ಧರಿಸಿದ ಸಂಘ ಪರಿವಾರದ ನೂರಾರು ಕಾರ್ಯಕರ್ತರು ಮಂಗಳವಾರ ದತ್ತಪೀಠದಲ್ಲಿ ಶ್ರೀದತ್ತಾತ್ರೇಯ ದರ್ಶನಕ್ಕೆ ತೆರಳಿದರು.

Advertisement

ನಗರದ ಸಾರ್ವಜನಿಕ ಗ್ರಂಥಾಲಯ ರಸ್ತೆಯ ಈಶ್ಯಾನ ಮೂಲೆ ಪ್ರಾಚೀನ ಆಂಜನೇಯಸ್ವಾಮಿ ದೇವಾಲಯದ ಶ್ರೀದತ್ತಾತ್ರೇಯಸ್ವಾಮಿಗೆ ದತ್ತಮಾಲೆ ಧರಿಸಿದ ನೂರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿ ಇಡಿಮುಡಿಯೊಂದಿಗೆಚಿಕ್ಕಮಗಳೂರಿನ ದತ್ತಪೀಠದಲ್ಲಿನ ಶ್ರೀಗುರುದತ್ತಾತ್ರೇಯಸ್ವಾಮಿ ದರ್ಶನಕ್ಕೆ ಪ್ರಯಾಣ ಬೆಳೆಸಿದರು. ರಾಮನಾಮ ಜಪದೊಂದಿಗೆ ಶ್ರೀದತ್ತಾತ್ರೆಯಸ್ವಾಮಿಯ ಸ್ತೋತ್ರ ಪಠಿಸುತ್ತಾ ನಗರದ ವಲಯದವರೆಗೂಕಾಲ್ನಡಿಗೆಯಲ್ಲಿ ಸಾಗಿದ ದತ್ತ ಮಾಲಾಧಾರಿಗಳೊಂದಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್‌. ಆರ್‌.ಸಂತೋಷ್‌, ಸದಸ್ಯ ಗಿರೀಶ್‌, ತಾಲೂಕು ವಿಶ್ವಹಿಂದು ಪರಿಷತ್‌ ಅಧ್ಯಕ್ಷ ಟಿ.ವಿ.ಅರುಣ್‌ಕುಮಾರ್‌, ಸಂಪತ್‌, ಬಿಜೆಪಿ ಮುಖಂಡರಾದ ಜಿ.ಎನ್‌. ಮನೋಜ್‌ಕುಮಾರ್‌, ಮೀನಾಕ್ಷಿ, ಚಂದ್ರಶೇಖರ್‌, ಶೇಖರ್‌ ಯಾದವ್‌, ಲೋಕೇಶ್‌ ಮತ್ತಿತರರು ಸಾಗಿ ಬೀಳ್ಕೊಟ್ಟರು.

ಸಿಎಂ ರಾಜಕೀಯ ಕಾರ್ಯದರ್ಶಿ ಎನ್‌.ಆರ್‌.ಸಂತೋಷ್‌ ಮಾತನಾಡಿ, ಶಬರಿಮಲೆ ಅಯ್ಯಪ್ಪ ಸ್ವಾಮಿರೀತಿಯಲ್ಲೇ ದತ್ತಾತ್ರೇಯ ಸ್ವಾಮಿಯ ಆರಾಧಕರು ನಿಯಮ ನಿಷ್ಠೆಗಳ ವ್ರತಾಚರಣೆ ಮಾಡುವ ಮೂಲಕ ಇಡುಮುಡಿಯೊಂದಿಗೆ ಚಿಕ್ಕಮಗಳೂರು ಜಿಲ್ಲೆಯ

ದತ್ತಪೀಠಕ್ಕೆ ಹೋಗಿ ಶ್ರೀದತ್ತಾತ್ರೇಯ ಸ್ವಾಮಿಗೆ ಪೂಜೆ ಸಲ್ಲಿಸಿ ದರ್ಶನ ಪಡೆಯಲಿದ್ದಾರೆ. ಹಿಂದು ಸಮಜದಲ್ಲಿನಜಾತಿ ಮತ, ಭೇದ-ಭಾವ ಹಾಗೂ ಮೇಲು-ಕೀಳು ಎಂಬತಾರತಮ್ಯ ನೀತಿಯಿಂದ ಜನ ಮುಕ್ತವಾಗಲು ಈ ರೀತಿಯ ಧಾರ್ಮಿಕ ಆಚರಣೆ ಸಹಕಾರಿ ಎಂದು ಹೇಳಿದರು.

ಲಿಂಬಾವಳಿ ವಿರುದ್ಧ ಹೇಳಿಕೆ ರೇವಣ್ಣಗೆ ಶೋಭೆ ತರಲ್ಲ :

Advertisement

ಹಾಸನ: ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಅವರನ್ನು ಥರ್ಡ್‌ ಕ್ಲಾಸ್‌ ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರು ನಿಂದಿಸಿರುವುದು ಹತಾಶೆಯ ಪ್ರತೀಕ ಎಂದು ಮಾಜಿ ಸಚಿವ ಎ.ಮಂಜು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರವಿಂದ ಲಿಂಬಾವಳಿ ಅವರನ್ನು ಥರ್ಡ್‌ ಕ್ಲಾಸ್‌ ಎಂದು ನಿಂದಿಸುವುದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರಿಗೆ ಶೋಭೆ ತರುವುದಿಲ್ಲ. ಈಗ ಬಿಜೆಪಿ ಜತೆಹೋಗುವುದಿಲ್ಲ ಎಂದು ಹೇಳತ್ತಿರುವರೇವಣ್ಣ, ಈ ಹಿಂದೆ ಜೆಡಿಎಸ್‌-ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸಮಾಡಿಲ್ಲವೇ. ಬಿಜೆಪಿ ಜತೆ ಜೆಡಿಎಸ್‌ ವಿಲೀನವಾದರೆರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ರೇವಣ್ಣ ಹೇಳಿದ್ದಾರೆ. ಈ ಹಿಂದೆ ಮೋದಿ ಮತ್ತೂಮ್ಮೆ ದೇಶದ ಪ್ರಧಾನಿಯಾದರೆ ರಾಜಕೀಯ ನಿವೃತ್ತಿ ಆಗುವುದಾಗಿ ಹೇಳಿದ್ದರು. ಮೋದಿ ಪ್ರಧಾನ ಮಂತ್ರಿಯಾದ ತಕ್ಷಣ ಅವರ ಬಳಿ ಅಪ್ಪ ಮತ್ತು ಮಕ್ಕಳು ಹೋಗಿ ಫೋಟೋ ತೆಗೆಸಿಕೊಂಡಿದ್ದಾರೆ. ರೇವಣ್ಣ,ದೇವೇಗೌಡರಿಗೆ ಗೌರವ ಮತ್ತು ಅಧಿಕಾರ ಸಿಕ್ಕಿರುವುದುಕಾಂಗ್ರೆಸ್‌, ಬಿಜೆಪಿ ಪಕ್ಷದಿಂದ ಮಾತ್ರ. ಅವರು ಸ್ವತಂತ್ರವಾಗಿಯಾವಾಗಲೂ ಅಧಿಕಾರ ಪಡೆದಿಲ್ಲ ಎಂದರು. ವಿಲೀನ ಅಥವಾ ಹೊಂದಾಣಿಕೆ ನೆಪದಲ್ಲಿ ಅಪ್ಪ-ಮಕ್ಕಳು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next