Advertisement

ದೇವಾಲಯ ಅಭಿವೃದ್ಧಿಗೆ ಭಕ್ತರ ಸಹಕಾರ ಅಗತ್ಯ

02:23 PM May 09, 2022 | Team Udayavani |

ವಿಜಯಪುರ: ಕಾರ್ಯ ಸಿದ್ಧಿ, ಮನಸ್ಸಿಗೆ ನೆಮ್ಮದಿ, ಕೋರಿಕೆಯನ್ನು ಈಡೇರಿಸುವ ಶ್ರೀ ಬಯಲು ಬಸವೇಶ್ವರ ಸ್ವಾಮಿ ಕೃಪಾ ಕಟಾಕ್ಷದಿಂದ ದೇವಾಲ ಯದ ಅಭಿವೃದ್ಧಿ ಕಾರ್ಯಗಳು ಸುಗಮವಾಗಿ ನಡೆಯು ತ್ತಿದ್ದು, ಭಕ್ತರ ಸಹಕಾರದಿಂದ ದೇವಾಲಯ ಮತ್ತಷ್ಟು ಅಭಿವೃದ್ಧಿ ಕಾಣಬೇಕಿದೆ ಎಂದು ಶ್ರೀ ಬಯಲು ಬಸವೇಶ್ವರಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ. ಬಿ. ವಿಜಯಕುಮಾರ್‌ ಆರಾಧ್ಯ ತಿಳಿಸಿದರು.

Advertisement

ಪಟ್ಟಣದ ಚನ್ನರಾಯಪಟ್ಟಣ ವೃತ್ತದಲ್ಲಿರುವ ಶ್ರೀ ಬಯಲು ಬಸವೇಶ್ವರಸ್ವಾಮಿ ದೇವಾಲಯದ ಆವರ ಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ಬಯಲು ಬಸವೇಶ್ವರಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿ ಪ್ರಥಮ ವಾರ್ಷಿಕ ಸಭೆಯಲ್ಲಿ ದೇವಾಲಯದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿ, ದೇವರು ಮತ್ತು ದೇವರ ಮೇಲಿನ ನಂಬಿಕೆ ನಮ್ಮನ್ನು ಮತ್ತಷ್ಟು ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತದೆ. ಕೆಲವೊಮ್ಮೆ ದೇವರು ತನಗೆ ಆಗಬೇಕಾದ ಸೇವೆಯನ್ನು ಯಾವುದೋ ರೂಪದಲ್ಲಿ ಮಾಡಿಸಿಕೊಳ್ಳುವ ವಿಸ್ಮಯಕಾರಿ ಘಟನೆಗಳು ನಡೆದಿವೆ ಎಂದರು. ಬಾಲ್ಯದಿಂದಲೂ ಒಡನಾಟವಿರುವ ಈ ದೇವಾಲಯ ಮತ್ತು ದೇವರೊಂದಿಗೆ ಅವಿನಾಭಾವ ಸಂಬಂಧವಿದ್ದು, ದೇವಾಲಯ ಭಕ್ತರ ಪಾಲಿಗೆ ಮತ್ತಷ್ಟು ಶಾಂತಿ ನೆಮ್ಮದಿ ಕೊಡುವ ಧಾರ್ಮಿಕ ಕ್ಷೇತ್ರವಾಗಬೇಕು ಎಂದು ಆಶಿಸುತ್ತೇನೆ ಎಂದು ತಿಳಿಸಿದರು.

ವೇದ ಶಿಕ್ಷಣಕ್ಕೆ ಆದ್ಯತೆ: ದೇವಾಲಯದ ಪ್ರಧಾನ ಅರ್ಚಕ ಲೋಕೇಶ್‌ ಆರಾಧ್ಯ ಮಾತನಾಡಿ, ಅನೇಕ ಭಕ್ತಾದಿಗಳು ತಮ್ಮ ನೋವು, ಸಂಕಟ, ಕಷ್ಟಗಳನ್ನು ಪರಿಹರಿಸುವಂತೆ ದೇವರಲ್ಲಿ ಬಂದು ಬೇಡಿಕೊಳ್ಳುತ್ತಾರೆ. ಹೂವಿನ ಪ್ರಸಾದ ಕೇಳಿಕೊಳ್ಳುತ್ತಾರೆ. ಕಿವಿಯಲ್ಲಿ ಗುಟ್ಟಾಗಿ ತಮ್ಮ ಕೋರಿಕೆಯನ್ನು ಈಡೇರಿಸುವಂತೆ ಕೇಳಿಕೊಳ್ಳುತ್ತಾರೆ. ಬಸವಣ್ಣ ಎಲ್ಲರ ಸಂಕಷ್ಟಗಳನ್ನು ಪವಾಡ ಸದೃಶವಾಗಿ ಪರಿಹರಿಸಿದ್ದು, ಇಂತಹ ಘಟನೆಗಳಿಗೆ ಸಾಕ್ಷೀಭೂತನಾಗಿ ದೇವರ ಆರಾಧನೆ ಯಲ್ಲಿ ಮತ್ತಷ್ಟು ತೊಡಗಿಸಿಕೊಂಡು ವೇದ ಪಾಠಕ್ಕೆ ಬರುವ ಶಿಷ್ಯರಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿರುವುದಾಗಿ ತಿಳಿಸಿದರು.

ವೇದಾಧ್ಯಯನ ಕೇಂದ್ರ: ಅರ್ಚಕ ಬಸವರಾಜು ಮಾತ ನಾಡಿ, ತಾವು ವಿಧಿ ವತ್ತಾಗಿ ವೇದಾಧ್ಯಯನ ಮಾಡಿ ಕೊಂಡು ಬಂದಿದ್ದು, ನಮ್ಮ ಆಚರಣೆ, ಸಂಸ್ಕೃತಿ, ಪೂಜಾ ವಿಧಿ ವಿಧಾನಗಳ ಬಗ್ಗೆ ಸಂಪೂರ್ಣ ಶಿಕ್ಷಣ ನೀಡು ತ್ತಿದ್ದು, ಶ್ರೀ ಬಯಲು ಬಸವೇಶ್ವರ ದೇವಾಲಯ ಮುಂದೊಂದು ದಿನ ವೇದಾಧ್ಯಯನ ಕೇಂದ್ರವಾಗುವಂತೆ ಮಾಡುವ ಸಂಕಲ್ಪ ತೊಟ್ಟಿದ್ದೇನೆ. ಯಾವು ದೇ ಪೂಜೆಗಳನ್ನು ದೇವಾಲಯದಲ್ಲಿ ಸಂಭಾ ವನೆ ಪಡೆಯದೆ ಮಾಡಿಕೊಡುವ ಮೂಲಕ ಸ್ವಾಮಿಗೆ ತಮ್ಮ ಸೇವಾರ್ಥ ಸಲ್ಲಿಸುವುದಾಗಿ ತಿಳಿಸಿದರು.

ಗುರುಕುಲ ಪದ್ಧತಿ ಪರಿಚಯ: ದೇವಾಲಯ ಸಮಿತಿ ಯ ಉಪಾಧ್ಯಕ್ಷೆ ಅಶ್ವಿ‌ನಿ ಮಾತನಾಡಿ, ಮುಂದಿನ ವರ್ಷ ದಿಂದ ಪ್ರತಿ ಬೇಸಿಗೆಯ ರಜೆಯಲ್ಲಿ ಮಕ್ಕಳಿಗೆ ಗುರುಕುಲ ಪದ್ಧತಿಯ ಪರಿಚಯ, ದೇವರ ಶ್ಲೋಕ, ಪೂಜೆ, ಆಚರಣೆ, ಭಕ್ತಿ ಭಾವ, ಸಂಸ್ಕೃತ ಅಧ್ಯಯನ ನಡೆಸುವ ಬೇಸಿಗೆ ಶಿಬಿರ ಆಯೋಜಿಸುವ ಉದ್ದೇಶ ಹೊಂದಿರುವು ದಾಗಿ ತಿಳಿಸಿದರು. ಸಮಿತಿ ಕಾರ್ಯಾಧ್ಯಕ್ಷೆ ಸುಜಾತ ವಿಜ ಯ ಕುಮಾರ್‌ ಆರಾಧ್ಯ, ಗೌರವಾಧ್ಯಕ್ಷರಾದ ಡಾ. ಬಿ. ಕುಮಾರ ಸ್ವಾಮಿ, ಖಜಾಂಚಿ ಗಿರಿಜಾ ಲೋಕೇಶ್, ಭೂ ದಾನಿ ರಾಜೇಶ್‌, ನಿರ್ಮಲಾ, ಮಂಜುನಾಥ್‌, ಗಣೇಶ್‌, ಕುಮಾರ್‌ ಹಾಗೂ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next