ಪೊಳಲಿ: ಶ್ರೀ ರಾಜೇಶ್ವರಿಯು ಜಗತ್ತಿನ ಅಧಿದೇವತೆ ಯಾಗಿದ್ದು, ನಿರಾಕಾರ ಶಕ್ತಿ ಸ್ವರೂಪಿಣಿ ಯಾಗಿದ್ದಾಳೆ. ಜ್ಞಾನ ಶಕ್ತಿಯ ಅಧಿಪತಿ ಸರಸ್ವತಿ, ಇಚ್ಛಾಶಕ್ತಿಯ ಅಧಿಪತಿ ದುರ್ಗೆ, ಕ್ರಿಯಾ ಶಕ್ತಿಯ ಅಧಿಪತಿ ಲಕ್ಷ್ಮೀ. ಈ ಮೂರು ಶಕ್ತಿಗಳು ವ್ಯಕ್ತಿಯ ಯಶಸ್ಸಿನ ಮೂಲ ಎಂದು ವಿದ್ವಾಂಸ ಶಿಕಾರಿಪುರ ಕೃಷ್ಣಮೂರ್ತಿ ಹೇಳಿದರು.
ಅವರು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಮಂಗಳವಾರ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ವಾಗ್ಮಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿ, ಕುಂಭಮೇಳದಷ್ಟೇ ವಿಜೃಂಭಣೆಯಿಂದ ಪೊಳಲಿ ಶ್ರೀ ರಾಜರಾಜೇಶ್ವರೀ ಪರಿವಾರ ದೇವರುಗಳ ಬ್ರಹ್ಮಕಲಶೋತ್ಸವ ನಡೆಯುತ್ತಿದೆ ಎಂದರು.
ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿದರು. ಈ ವೇಳೆ ಹೊರರಾಜ್ಯಗಳಲ್ಲಿ ದೇಣಿಗೆ ಸಂಗ್ರಹಿ ಸಿದ ಭಕ್ತರನ್ನು ಗೌರವಿಸಲಾಯಿತು.
ಗಣ್ಯರಾದ ರವೀಂದ್ರನಾಥ ಆಳ್ವ, ಪದ್ಮನಾಭ ಪಯ್ಯಡೆ ಕೂರಿಯಾಳ ಗುತ್ತು, ಆನಂದ್ ಶೆಟ್ಟಿ ಮುಂಬಯಿ, ದಿವಾಕರ ಶೆಟ್ಟಿ, ಹರೀಶ್ ಶೆಟ್ಟಿ ಐಕಳ, ಸುಧೀರ್ ಶೆಟ್ಟಿ, ಅನ್ನಿ ಸಿ. ಶೆಟ್ಟಿ, ಕುಸುಮಾರ್ ಡಿ. ಶೆಟ್ಟಿ, ಕೃಷ್ಣ ವೈ. ಶೆಟ್ಟಿ, ಚೇರ ಸೂರ್ಯನಾರಾಯಣ ರಾವ್, ಡಾ| ಮಂಜಯ್ಯ ಶೆಟ್ಟಿ, ಯು.ಟಿ. ಆಳ್ವ ಮೊದಲಾದವರು ಉಪಸ್ಥಿತರಿದ್ದರು.
ವಾಸ್ತುಶಿಲ್ಪಿಗಳಾದ ಮಹೇಶ್ ಮುನಿಯಂಗಳ, ಸಾಗರ ರಿಯಾಲ್ಟಿ ಪ್ರಮೋಶನ್‌ನ ಗಿರಿಧರ ಶೆಟ್ಟಿ, ಸಿವಿಲ್ ಎಂಜಿನಿಯರ್ ರಿತೇಶ ದಾಸ್ ಅವರನ್ನು ಸಮ್ಮಾನಿಸಲಾಯಿತು.