Advertisement

ಗ್ರಾಮಸ್ವರಾಜ್‌ಗೆ ಕೊಡಲಿ; ಅಧ್ಯಕ್ಷರ ಅಧಿಕಾರ ಮೊಟಕು: ಡಾ|ದೇವಿಪ್ರಸಾದ್‌ ಶೆಟ್ಟಿ ಖಂಡನೆ

11:23 PM Oct 05, 2022 | Team Udayavani |

ಪಡುಬಿದ್ರಿ: ವ್ಯವಸ್ಥಿತ ಪಿತೂರಿಯೊಂದಿಗೆ ರಾಜ್ಯ ಸರಕಾರವು ಮುಖ್ಯ ಕಾರ್ಯದರ್ಶಿಗಳ ಮೂಲಕ ಆದೇಶವೊಂದನ್ನು ಪಂಚಾಯತ್‌ಗಳಿಗೆ ರವಾನಿಸಿ, ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ಅಧ್ಯಕ್ಷ ಹಾಗೂ ಜನಪ್ರತಿನಿಧಿಗಳ ಅಧಿಕಾರವನ್ನು ಮೊಟಕುಗೊಳಿಸಿದೆ ಎಂದು ಬೆಳಪು ಗ್ರಾ.ಪಂ. ಮಾಜಿ ಅಧ್ಯಕ್ಷ ಹಾಗೂ ರಾಜ್ಯ ಪಂಚಾಯತ್‌ ರಾಜ್‌ ಪ್ರತಿನಿಧಿಗಳ ಒಕ್ಕೂಟದ ಉಪಾಧ್ಯಕ್ಷರೂ ಆಗಿರುವ ಡಾ| ದೇವಿಪ್ರಸಾದ್‌ ಶೆಟ್ಟಿ ಬೆಳಪು ಆರೋಪಿಸಿದ್ದು, ತನ್ಮೂಲಕವಾಗಿ ಗ್ರಾಮ ಸ್ವರಾಜ್‌ ಕನಸಿಗೆ ಕೊಡಲಿಯೇಟು ನೀಡಿದೆ ಎಂದು ತಿಳಿಸಿದ್ದಾರೆ.

Advertisement

ಅಧಿಕಾರದ ವಿಕೇಂದ್ರೀಕರಣದ ಆಶಯಗಳನ್ನು ಹೊತ್ತು ಅನುಷ್ಠಾನಿಸಲ್ಪಟ್ಟಿದ್ದ ಪಂಚಾಯತ್‌ ರಾಜ್‌ ವ್ಯವಸ್ಥೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯೊ ಳಗೆ ಮಹತ್ವದ ಸ್ಥಾನವನ್ನು ನೀಡಲಾಗಿತ್ತು. ಗ್ರಾಮ ಸರಕಾರದ ನಿರ್ಧಾರವೂ ವಿಧಾನಸಭೆಯ ತೀರ್ಮಾನದಂ ತೆಯೇ ಕಾನೂನಾತ್ಮವಾಗಿ ಅನುಷ್ಠಾನಿಸಲ್ಪಡುವಂತಿತ್ತು. ಅಷ್ಟರಲ್ಲಿ ಈಗಿನ
ರಾಜ್ಯ ಸರಕಾರವು ತಿದ್ದುಪಡಿಗೊಳಿಸಿ ಪಂಚಾಯತ್‌ ಪ್ರತಿನಿಧಿಗಳಿಗೆ ಇದ್ದ ಅಧಿಕಾರವನ್ನೇ ಕಸಿದುಕೊಂಡಿದೆ. ಈ ಮೂಲಕ ಅಧಿಕಾರಿಶಾಹಿ ವ್ಯವಸ್ಥೆಗೆ ಸರಕಾರವು ಪರೋಕ್ಷವಾಗಿ ಮಣಿದಂ ತಿದೆ ಎಂದು ಆರೋಪಿಸಿದ್ದಾರೆ.

ಪಂಚಾಯತ್‌ ವ್ಯವಸ್ಥೆಯಲ್ಲಿ ಇನ್ನು ಮುಂದಕ್ಕೆ ಯಾವುದೇ ಬಿಲ್‌ ಪಾಸ್‌ ಮಾಡುವ ಅಥವಾ ಚೆಕ್‌ ಮೂಲಕ ಪಾವತಿ ಗೈಯುವ ವ್ಯವಸ್ಥೆಗೆ ಅಧ್ಯಕ್ಷರು ಸಹಿ ಮಾಡುವಂತಿಲ್ಲ. ಈ ಅಧಿಕಾರವನ್ನು ಪಿಡಿಒ ಮತ್ತು ಲೆಕ್ಕ ಸಹಾಯಕರಿಗೆ ಜಂಟಿಯಾಗಿ ನೀಡಲಾಗಿದೆ. 9/11 ಮತ್ತು 9/11ಬಿ, ನಿರಾಕ್ಷೇಪಣ ಪತ್ರ ಮುಂತಾದ ಆದೇಶಗಳನ್ನು ಪಂಚಾಯತ್‌ ಸಭೆಯಲ್ಲಿಮಂಡಿಸಿ ಯಾವುದೇ ಆಕ್ಷೇಪಣೆಗಳಿಲ್ಲ ದಿದ್ದಲ್ಲಿ ಮುಂದೆ ಆಯಾಯ ವ್ಯಕ್ತಿಗೆ ನೀಡುವ ಅಧಿಕಾರವನ್ನು ಕಳಚಿ ನೇರವಾಗಿ ಪಿಡಿಒ ಇವುಗಳನ್ನೆಲ್ಲಾ ನೀಡಬಹುದೆಂದೂ ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ. ಇದು ಭ್ರಷ್ಟಾಚಾರವನ್ನು ಇನ್ನಷ್ಟು ಪೋಷಿಸಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next