Advertisement

ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ

07:42 PM Mar 23, 2018 | Team Udayavani |

ಕುಮಟಾ: ಕತಗಾಲದ ಸಾಗಡಿಬೇಣದ ಮಹಾಸತಿ ದೇವಸ್ಥಾನದಲ್ಲಿ ಮೂರೂರಿನ ಮಹಾಗಣಪತಿ ಯಕ್ಷಗಾನ ಮಂಡಳಿ ಕಲಾಕಾರರು ಹಾಗೂ ಇತರ 25ಕ್ಕೂ ಹೆಚ್ಚು ಹಿರಿಕಿರಿಯ ಕಲಾವಿದರಿಂದ ದೇವಿಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು. ಹಿರಿಯ ಕಲಾವಿದ ಅನಂತ ಹಾವಗೋಡಿ ಬ್ರಹ್ಮ ಹಾಗೂ ರಾಮ ಹೆಗಡೆ ಮಹಿಷಾಸುರನ ಪಾತ್ರದಲ್ಲಿ ಮಿಂಚಿದರು. ಗುರು ಹಾವಗೋಡಿ, ವಿಷ್ಣು ಭಟ್ಟ ಮೂರೂರು ಮುಂತಾದವರು ಉತ್ತಮ ಕುಣಿತ ಮತ್ತು ಮಾತುಗಾರಿಕೆಯಿಂದ ರಂಜಿಸಿದರು.

Advertisement

ಹಿಮ್ಮೇಳದಲ್ಲಿ ಭಾಗವತರಾಗಿ ಕತಗಾಲದ ಶ್ರೀಧರ ಭಟ್ಟ, ಮೃದಂಗ ವಾದಕರಾಗಿ ಮೂರೂರಿನ ನರಸಿಂಹ ಭಟ್ಟ, ಚಂಡೆ ವಾದಕರಾಗಿ ಸಾಂತೂರಿನ ಗಜಾನನ ಹೆಗಡೆ ಉತ್ತಮವಾಗಿ ನಿರ್ವಹಿಸಿದರು. ವಿಶೇಷವಾಗಿ ವೇದಿಕೆಯ ಎಡಭಾಗದಲ್ಲಿ ದೇವಿ ಆಸೀನವಾಗುವಂತೆ  ಸಾಲಂಕಾರ ತೊಟ್ಟಲನ್ನು ನಿರ್ಮಿಸಲಾಗಿತ್ತು. ಮಧು-ಕೈಟಭ ಮುಂತಾದ ರಾಕ್ಷಸರ ವಧೆಯಾದಾಗಲೆಲ್ಲ ರಂಗಸ್ಥಳದ ಮುಂಭಾಗದಲ್ಲಿ ಕುಂಬಳಕಾಯಿ ಒಡೆಯುವ ಪದ್ಧತಿ ನೆರೆದವರಲ್ಲಿ ಕುತೂಹಲ ಮೂಡಿಸಿತು. ಯಕ್ಷಗಾನಕ್ಕೆ ಕೆಡಿಸಿಸಿ ಬ್ಯಾಂಕ್‌ ಆರ್ಥಿಕ ಸಹಾಯ ನೀಡಿದ್ದು, ಗಜಾನನ ಗಂಗೂ ಗೌಡ ಹಾಗೂ ಕುಟುಂಬದವರು ಸಂಯೋಜಿಸಿದ್ದರು. ಡಾ| ಕೆ. ಗಣಪತಿ ಭಟ್ಟ, ರಾಮಾ ಗೋಪಾಲ ಭಟ್ಟ, ಮಾಣಿ ಗೌಡ, ಉಮೇಶ ಭಟ್ಟ, ಸುಗ್ಗಿ ಗೌಡ, ಸಾವಿತ್ರಿ ಶಿವ ಹೆಗಡೆ, ಕೃಷ್ಣಾನಂದ ವೆರ್ಣೇಕರ, ಸಂತೋಷ ಗೌಡ, ಹುಲಿಯಮ್ಮ ಗೌಡ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next