Advertisement

ದೇವರಾಜ ಧೀಮಂತ ನಾಯಕ

10:36 AM Aug 21, 2017 | Team Udayavani |

ಚಿಂಚೋಳಿ: ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಜಾತಿ ಆಧಾರದ ಮೇಲೆ ಹಾಗೂ ಹಿಂದುಳಿದ ವರ್ಗಗಳ ಜನಾಂಗಕ್ಕೆ ಸಾಮಾಜಿಕ ನ್ಯಾಯ ನೀಡಿದ ಧೀಮಂತ ನಾಯಕರಾಗಿದ್ದರು ಎಂದು ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ ಹೇಳಿದರು. ಪಟ್ಟಣದ ತಹಶೀಲ್ದಾರ ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 102ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಡಿ. ದೇವರಾಜ ಅರಸು ಅವರು ಬಡವರ ಬಗ್ಗೆ ಅಪಾರ ಕಾಳಜಿವುಳ್ಳವರಾಗಿದ್ದರು. ಹಿಂದುಳಿದ ಕಲಬುರಗಿ ಭಾಗದ ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್‌ ಅವರನ್ನು ತಮ್ಮ ಸಚಿವ ಸಂಪುಟದಲ್ಲಿ ಸೇರಿಸಿಕೊಂಡು ರಾಜಕೀಯದಲ್ಲಿ ಪಳಗಿಸಿದ್ದಾರೆ. ಡಿ. ದೇವರಾಜ ಅರಸು ಅವರು ಕಂಡ ಕನಸು ನನಸಾಗಿಸಲು ನಮ್ಮ ಸರಕಾರ ಬದ್ಧವಾಗಿದೆ ಎಂದು ಹೇಳಿದರು. ಡಾ| ಪದ್ಮರಾಜ ರಾಸಣಗಿ ಡಿ. ದೇವರಾಜ ಅರಸು ಕುರಿತು ವಿಶೇಷ ಉಪನ್ಯಾಸ ನೀಡಿದರು. ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹ್ಮದ್‌ ಹುಸೇನ್‌ ನಾಯಕೋಡಿ, ಸಮಾಜ ಕಲ್ಯಾಣಾಧಿಕಾರಿ ಪ್ರಭುಲಿಂಗ ಚಿಂತಕುಂಟಾ, ಚಂದ್ರಶೇಖರ
ಗುತ್ತೇದಾರ, ಆರ್‌. ಗಣಪತರಾವ, ಕಾಡಾ ನಿರ್ದೇಶಕ ಕೆ.ಎಂ. ಬಾರಿ, ತಾಪಂ ಸದಸ್ಯ ಪ್ರೇಮಸಿಂಗ ಜಾಧವ, ಬಿಸಿಎಂ ಅಧಿಕಾರಿ ಸುಮಿತ್ರಾಬಾಯಿ, ಲಕ್ಷ್ಮಣ ಆವಂಟಿ, ಬಸವರಾಜ ಕಾಳೆ, ಬಸವರಾಜ ಬಳಿಚಕ್ರ, ತುಳಸೀರಾಮ, ಜಲಾಲೋದ್ದೀನ್‌, ಅಯ್ಯೂಬಖಾನ್‌, ಶಿವನಾಗಯ್ಯ ಸ್ವಾಮಿ ಇದ್ದರು. ಗ್ರೇಡ್‌-2 ತಹಶೀಲ್ದಾರ ವೆಂಕಟೇಶ ದುಗ್ಗನ ಸ್ವಾಗತಿಸಿದರು. ಜಯಪ್ಪ ಚಾಪೆಲ್‌ ನಿರೂಪಿಸಿದರು. ಮೇಲ್ವಿಚಾರಕ ಸಂಗನಬಸವ ಬಿರಾದಾರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next