Advertisement

ರಾಜ್ಯಕ್ಕೆ ಒಂಬತ್ತು ನರ್ಸಿಂಗ್‌ ಕಾಲೇಜ್‌!

12:07 AM Feb 02, 2023 | Team Udayavani |

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಪ್ರತೀ ಜಿಲ್ಲೆಯಲ್ಲಿಯೂ ಒಂದು ಮೆಡಿಕಲ್‌ ಕಾಲೇಜು ಸ್ಥಾಪನೆ ಆಗಬೇಕು ಎನ್ನುವ ನಿಲುವನ್ನು ಈಗಾಗಲೇ ಬಹಿರಂಗಪಡಿಸಿದ್ದು ಅದಕ್ಕೆ ತಕ್ಕಂತೆ ಸರಕಾರ ಕಾರ್ಯಯೋಜನೆಯನ್ನು ರೂಪಿಸಿದೆ.

Advertisement

ಇದರ ಮುಂದಿನ ಹಂತವಾಗಿ ನರ್ಸಿಂಗ್‌ ಕಾಲೇಜ್‌ಗಳ ಸ್ಥಾಪನೆಗೆ ಸರಕಾರ ಮುಂದಾಗಿದೆ. ತನ್ಮೂಲಕ ವೈದ್ಯಕೀಯ ಸೇವೆಯಲ್ಲಿ ನೈಪುಣ್ಯತೆಯನ್ನು ಕಾಪಾಡಿಕೊಳ್ಳುವ ಜತೆಗೆ ವೈದ್ಯರು ಮತ್ತು ದಾದಿಯರ ಸಂಖ್ಯೆಯನ್ನು ದಾಖಲೆ ಪ್ರಮಾಣದಲ್ಲಿ ಹೆಚ್ಚಿಸುವ ಪ್ರಯತ್ನಕ್ಕೆ ಸರಕಾರ ಕೈಹಾಕಿದೆ.

2014ರ ಬಳಿಕ ಅಂದರೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ರಚನೆಯಾದ ಅನಂತರದಲ್ಲಿ ಸ್ಥಾಪನೆಯಾಗಿರುವ 157 ಮೆಡಿಕಲ್‌ ಕಾಲೇಜ್‌ಗಳಲ್ಲಿ ಈ ನರ್ಸಿಂಗ್‌ ಕಾಲೇಜು ನಿರ್ಮಾಣವಾಗಲಿದೆ. ಈ ಮಾನದಂಡದ ಅನ್ವಯ ರಾಜ್ಯದಲ್ಲಿ 2014ರ ಬಳಿಕ ಚಿಕ್ಕಮಗಳೂರು, ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಮೆಡಿಕಲ್‌ ಕಾಲೇಜ್‌ ಬೆಂಗಳೂರು, ಕಲಬುರಗಿ, ಕಾರವಾರ, ಚಾಮರಾಜನಗರ, ಕೊಡಗು, ಕೊಪ್ಪಳ, ಗದಗ ಮತ್ತು ಚಿಕ್ಕಬಳ್ಳಾಪುರ ಮೆಡಿಕಲ್‌ ಕಾಲೇಜ್‌ ಸ್ಥಾಪನೆಯಾಗಿದ್ದು ಇಲ್ಲಿ ನರ್ಸಿಂಗ್‌ ಕಾಲೇಜು ಕೂಡ ಬರುವ ಸಾಧ್ಯತೆಯಿದೆ.
ವೈದ್ಯಕೀಯ, ಔಷಧ ಕ್ಷೇತ್ರದ ಸಂಶೋಧನೆಗೆ ಅಡಿಪಾಯ: ಕೋವಿಡ್‌ ಸಾಂಕ್ರಾಮಿಕದ ಬಳಿಕ ವೈದ್ಯಕೀಯ ಮತ್ತು ಔಷಧ ಕ್ಷೇತ್ರಗಲ್ಲಿನ ಸಂಶೋಧನೆ ಮತ್ತು ಅನ್ವೇಷಣೆಯ ಮಹತ್ವವನ್ನು ಅರಿತಿರುವ ಸರಕಾರ ಈ ರಂಗದಲ್ಲಿನ ಅಭಿವೃದ್ಧಿಗೆ ವಿಶೇಷ ಮಹತ್ವ ನೀಡಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರದ ನಿರ್ವಹಣೆಯಲ್ಲಿನ ಖಾಸಗಿ, ಸರಕಾರಿ ಸಹಭಾಗಿತ್ವವನ್ನು ಸಂಶೋಧನ ವಲಯಕ್ಕೂ ಈ ಬಜೆಟ್‌ ಮೂಲಕ ವಿಸ್ತರಿಸಲಾಗಿದೆ. ವೈದ್ಯಕೀಯ ಸಂಶೋಧನೆಯ ಭಾರತೀಯ ಪರಿಷತ್‌ (ಐಸಿಎಂಆರ್‌) ತನ್ನ ಪ್ರಯೋಗಾಲಯಗಳನ್ನು ಖಾಸಗಿ ಮತ್ತು ಸರಕಾರಿ ಮೆಡಿಕಲ್‌ ಕಾಲೇಜ್‌ಗಳ ಸಂಶೋಧಕರಿಗೂ ತೆರೆಯಲಿದೆ.

ಸಂಶೋಧನೆ ಮತ್ತು ನಾವೀನ್ಯತೆಗೆ ಸಹಭಾಗಿತ್ವವನ್ನು ಪ್ರೋತ್ಸಾಹಿಸುವುದಾಗಿ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಆರೋಗ್ಯ ಸಂಶೋಧನ ಇಲಾಖೆಗೆ 2,980 ಕೋಟಿ ರೂಪಾಯಿ ತೆಗೆದಿರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next